Join Our

WhatsApp Group
Important
Trending

ಕಡಲತೀರಕ್ಕೆ ತೇಲಿಕೊಂಡು ಬಂದ ಬೃಹತ್ ಹಡಗು

ಭಟ್ಕಳ: ಬ್ರಹತ್ ಗಾತ್ರದ ಹಡಗೊಂದು ಭಟ್ಕಳ ತಾಲೂಕಿನ ಜಾಲಿಕೋಡಿ ಕಡಲತೀರಕ್ಕೆ ತೇಲಿಕೊಂಡು ಬಂದು ಬೀಚ್ ನಲ್ಲಿ ಸಿಲುಕಿಕೊಂಡಿರುವ ಘಟನೆ ನಡೆದಿದೆ. ತಡರಾತ್ರಿ 2 ಗಂಟೆಗೆ ಸುಮಾರಿಗೆ ಹಡಗು ತೇಲಿಕೊಂಡು ಬಂದಿರುವುದಾಗಿ ಸ್ಥಳಿಯರು ಹೇಳುತ್ತಿದ್ದಾರೆ. ಕಂಟೇನರ್ ತುಂಬಿಸುವ ಮಾದರಿಯಲ್ಲಿರುವ ಹಡಗು ಸುಮಾರು ಮೂವತ್ತರಿಂದ ನಲವತ್ತು ಮೀಟರ್ ಉದ್ದ ಹಾಗೂ 5 ರಿಂದ 6 ಮೀಟರ್ ಅಗಲವನ್ನು ಹೊಂದಿದೆ .

ಕೊಚ್ಚಿನ ಶಿಫ್ ಯಾರ್ಡಗೆ ಸೇರಿದ ಬೋಟ್ ಇದಾಗಿದ್ದು, ಸದ್ಯಕ್ಕೆ ಕರಾವಳಿ ಕಾವಲು ಪಡೆ ಹಡಗಿನ ಕಾವಲಿಗೆ ನಿಂತಿದೆ. ಈ ವಿದ್ಯಾಮಾನದಿಂದ ಸ್ಥಳಿಯರು ಕುತೂಹಲಗೊಂಡಿದ್ದು ಸಾಮಾಜಿಕ ಜಾಲತಾಣಗಳ ಹಾಗೂ ಮಾಧ್ಯಮಗಳ ಮೂಲಕ ಸುದ್ದಿ ತಿಳಿದ ಜನರು ಹಡಗು ಬಿದ್ದ ಜಾಗಕ್ಕೆ ಹರಿದು ಬರುತ್ತಿದ್ದಾರೆ.

ವಿಸ್ಮಯ ನ್ಯೂಸ್, ಈಶ್ವರ ನಾಯ್ಕ ಭಟ್ಕಳ

Back to top button