
ಸಿದ್ದಾಪುರ: ತಾಲೂಕಿನ ಸುಂಕತ್ತಿ ಬಳಿಯ ಕೆರೆಯಲ್ಲಿ ಯುವಕನ ಮೃತ ದೇಹವೊಂದು ತೇಲುತ್ತಿದ್ದ ಸ್ಥಿತಿಯಲ್ಲಿ ಕಂಡು ಬಂದ ಹಿನ್ನಲೆಯಲ್ಲಿ ಸಿದ್ದಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳೀಯರು ಕೆರೆಯ ನೀರಿನಲ್ಲಿ ಈಜಿ ಮೃತದೇಹವನ್ನು ಮೇಲಕ್ಕೆ ಎಳೆದು ತಂದರು. ಪ್ರಕಾಶ ನಾರಾಯಣ ನಾಯ್ಕ್ (36) ಹಲಗೇರಿ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬoದಿಸಿದoತೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಪ್ರಕಾಶ್ ಮೂಲತಃ ಸಿದ್ದಾಪುರದ ಬೈಲಳ್ಳಿಬೇಡ ಮೂಲದನಾಗಿದ್ದ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಪೊಲೀಸ್ ಮಾಹಿತಿಯಿಂದ ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್, ಸಿದ್ದಾಪುರ