Focus News
Trending

ಎಂ.ಪಿ.ಇ ಸೊಸೈಟಿಯ ಸಿ.ಬಿ.ಎಸ್.ಇ. ಸೆಂಟ್ರಲ್ ಶಾಲೆಯಲ್ಲಿ ಗಮನಸೆಳೆದ ಪಾಲಕರ ಕ್ರೀಡಾಕೂಟ

ಹೊನ್ನಾವರ: ಜೀವನದಲ್ಲಿ ಅಹಂಕಾರವನ್ನು ಬದಿಗೊತ್ತಿದಾಗಲೇ ಯಶಸ್ಸು ಸಾಧ್ಯ. ಭಗವದ್ಗೀತೆಯನ್ನು ಕೃಷ್ಣ , ಅರ್ಜುನನಿಗೆ ಬೋಧಿಸಿದ ಸಂದರ್ಭವನ್ನು ವಿವರಿಸಿ, ಇಂದಿನ ವರ್ತಮಾನಕ್ಕೆ ಭಗವದ್ಗೀತೆ ಹೇಗೆ ಪ್ರಸ್ತುತ ಎಂಬುದನ್ನು ವಿವರಿಸುತ್ತಾ , ಜೀವನದಲ್ಲಿ ಭಕ್ತಿ ಎಂಬುದು ಎಷ್ಟು ಮುಖ್ಯ ಹಾಗೂ ಅದುಕ್ರೀಡೆಗೆ ಹೇಗೆ ಅನ್ವಯವಾಗುತ್ತದೆ ಎಂದು ಹೊನ್ನಾವರ ರೋಟರಿ ಸಂಸ್ಥೆಯ ಅಧ್ಯಕ್ಷಶ್ರೀ ಮಹೇಶ್ ಕಲ್ಯಾಣ್‌ಪುರ್ ಅವರು ಎಂ.ಪಿ.ಇ ಸೊಸೈಟಿಯ ಸಿ.ಬಿ.ಎಸ್.ಇ. ಸೆಂಟ್ರಲ್ ಶಾಲೆಯಲ್ಲಿ ನಡೆದ ಪಾಲಕರ ಕ್ರೀಡಾಕೂಟವನ್ನು ಉದ್ಘಾಟಿಸಿ ಭಾಷಣದಲ್ಲಿ ಹೇಳಿದರು.

ಮದಿರೆ ಮತ್ತಿನಲ್ಲಿ ಶಿಕ್ಷಕನ ರಂಪಾಟ! ಅಂಗಡಿ ಮುಂದೆ ಬಿದ್ದು ತೂರಾಟ

ಮನುಷ್ಯನಜೀವನದ ಅವಿಭಾಜ್ಯ ಅಂಗ.ದೈಹಿಕಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯಕಎಂದು ಪಾಲಕರಕ್ರೀಡಾಕೂಟಕ್ಕೆ ಮಹೇಶ್‌ಕಲ್ಯಾಣ್‌ಪುರ್‌ಅವರು ಮಾತನಾಡಿದರು.ವಿದ್ಯಾರ್ಥಿಗಳು ಸಮಾಜಮುಖಿಯಾಗಿರಬೇಕು. ಸಮಾಜಕ್ಕೆ ತಮ್ಮಿಂದ ಏನನ್ನು ಕೊಡಲು ಸಾಧ್ಯ ಎಂಬುದನ್ನು ಅರಿತಿರಬೇಕು.ಅಲ್ಲದೆ ಪಾಲಕರು ಸಹ ವಿದ್ಯಾರ್ಥಿಗಳಿಗೆ ಈ ದಿಸೆಯಲ್ಲಿ ಬೆಳೆಯಲು ಅನುಕೂಲವನ್ನು ಮಾಡಬೇಕುಎಂದು ಎಂ.ಪಿ.ಇ.ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿಭಟ್ ಹೇಳಿದರು. ಕ್ರೀಡೆಯಿಂದ ಸ್ಪರ್ಧಾತ್ಮಕ ಮನೋಭಾವ ಬೆಳೆಯುವುದು.ಕ್ರೀಡೆ ಮನುಷ್ಯನಆರೋಗ್ಯಕ್ಕೆ ಮಹತ್ವವಾದದ್ದು. ಪ್ರಾಂಶುಪಾಲರಾಧ ಶ್ರೀಮತಿ ಕಾಂತಿ ಭಟ್‌ರವರು ಪಾಲಕರಕ್ರೀಡಾಕೂಟದಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು..

ಅತಿಥಿಗಳಾಗಿ ಆಗಮಿಸಿದ್ದ ಮಹೇಶ್‌ಕಲ್ಯಾಣ್‌ಪುರ್ ಅವರ ವಿಶೇಷ ಸಾದನೆ ಹಾಗೂ ಸಮಾಜಮುಖಿ ಕೆಲಸವನ್ನು ಗಮನಿಸಿ ಅವರನ್ನುಆತ್ಮೀಯವಾಗಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ನಾಗರಾಜಕಾಮತ್, ಕಾರ್ಯದರ್ಶಿಗಳಾದ ಶ್ರೀ ಎಸ್.ಎಂ. ಭಟ್,ಜಂಟಿ ಕಾರ್ಯದರ್ಶಿ ಶ್ರೀ ಜಿ.ಪಿ.ಹೆಗಡೆ, ಖಜಾಂಚಿ ಶ್ರೀ ಉಮೇಶ ನಾಯ್ಕ, ನಿರ್ದೇಶಕರಾದ ಶ್ರೀ ಎಂ.ಜಿ.ಹೆಗಡೆ, ಸಿ.ಇ.ಒ ಶ್ರೀ ಕಿರಣ್‌ಕುಡ್ತಾರ್‌ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾಕಾರ್ಯಕ್ರಮದ ನಂತರ ಪಾಲಕರಿಗಾಗಿ ವೈಯಕ್ತಿಕ ಮತ್ತು ಗುಂಪು ಆಟಗಳನ್ನು ನಿಯೋಜಿಸಲಾಗಿತ್ತು.ಭಾಗವಹಿಸಿದ ಎಲ್ಲಾ ಪಾಲಕರಿಗೂ ಪ್ರಮಾಣ ಪತ್ರ ವಿತರಿಸಲಾಯಿತು. ಶಿಕ್ಷಕಿಯಾದ ಶ್ರೀಮತಿ ಸಂಜಾತಾ ಭಟ್ ಪ್ರಾರ್ಥಿಸಿದರು.ಶ್ರೀಮತಿ ಶ್ವೇತಾಎನ್. ಸ್ವಾಗತಿಸಿದರು.ಶ್ರೀಮತಿ ವಿಜಯಲಕ್ಷಿ ನಾಯ್ಕ ವಂದಿಸಿದರು. ಶ್ರೀ ಕೇಶವ್‌ಗೌಡಕಾರ್ಯಕ್ರಮವನ್ನು ನಿರೂಪಿಸಿದರು.

ವಿಸ್ಮಯ ನ್ಯೂಸ್, ಹೊನ್ನಾವರ

Back to top button