ಮದಿರೆ ಮತ್ತಿನಲ್ಲಿ ಶಿಕ್ಷಕನ ರಂಪಾಟ! ಅಂಗಡಿ ಮುಂದೆ ಬಿದ್ದು ತೂರಾಟ

ಕುಮಟಾ: ಮದ್ಯದ ಅಮಲಿನಲ್ಲಿದ್ದ ಶಿಕ್ಷಕನೋಬ್ಬ ಹಾಡುಹಗಲೇ ಅಂಗಡಿಯಲ್ಲಿ ತೂರಾಡಿ ರಂಪಾಟ ಮಾಡಿದ ಘಟನೆ ತಾಲೂಕಿನ ಕತಗಾಲ್ ನಲ್ಲಿ ನಡೆದಿದೆ. ಹೌದು, ಶಿಕ್ಷಕನೊಬ್ಬ ಮದಿರೆ ಮತ್ತಿನಲ್ಲಿ ಅಂಗಡಿ ಮುಂದೆ ತೂರಾಡಿದ್ದಾನೆ. ಈ ವೇಳೆ ಬಿದ್ದ ರಭಸಕ್ಕೆ ಮೂಗಿಗೆ ಪೆಟ್ಟು ಬಿದ್ದು, ಗಾಯಗವಾಗಿದೆ. ಶಿಕ್ಷಕನ ಅವತಾರ ನೋಡಿದ ಸ್ಥಳೀಯರು, ಸಾರ್ವಜನಿಕರು ತರಾಟೆಗೆ ತೆಗುದುಕೊಂಡಿದ್ದಾರೆ.

KMF Recruitment 2022: 487 ಹುದ್ದೆಗಳು: ಮಾಸಿಕ ವೇತನ 17 ಸಾವಿರದಿಂದ 99 ಸಾವಿರ

ಹೆಗಡೆಕಟ್ಟೆ ಮೂಲದ ಪ್ರಾಥಾಮಿಕ ಶಾಲಾ ಶಿಕ್ಷಕನಾಗಿರುವ ನಾರಾಯಣ್ ಕುಡಿದು ರಂಪಾಟ ಮಾಡಿದ ಶಿಕ್ಷಕ ಎಂದು ತಿಳಿದುಬಂದಿದೆ. ಮಕ್ಕಳಿಗೆ ಪಾಠ ಮಾಡಿ, ಮಾದರಿಯಾಗಬೇಕಾದ ಶಿಕ್ಷಕ, ಹೀಗೆ ಎಲ್ಲೆಂದರಲ್ಲಿ ಕಂಠಪೂರ್ತಿ ಕುಡಿದು ತೂರಾಟ ನಡೆಸಿರುವುದು, ಉಳಿದ ಶಿಕ್ಷಕರ ಮುಜುಗರಕ್ಕೆ ಕಾರಣವಾಗಿದೆ. ಎಲ್ಲೆಂದರಲ್ಲಿ ಬಿದ್ದು ರಂಪಾಟ ಮಾಡುತ್ತಿರುವುದು ಶಿಕ್ಷಕ ವೃತ್ತಿಗೇ ಅವಮಾನ ಎನಿಸುವಂತಿದೆ. ಇದೀಗ ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ವೈರಲ್ ಆಗಿದೆ.

ವಿಸ್ಮಯ ನ್ಯೂಸ್, ಕುಮಟಾ

Exit mobile version