Important
Trending

5 ಕ್ವಿಂಟಲ್ ಅಡಿಕೆ ಕಳ್ಳತನ: ಮೂವರು ಆರೋಪಿಗಳ ಬಂಧನ

ಹೊನ್ನಾವರ: ತಾಲೂಕಿನ ಸರಳಗಿಯಲ್ಲಿ  ಕಳುವಾಗಿದ್ದ 5 ಕ್ವಿಂಟಲ್ ಅಡಿಕೆ ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಓಮಿನಿ ವಾಹನ  ಮೂವರು ಅಡಿಕೆ ಕಳ್ಳರ ಬಂಧಿಸುವಲ್ಲಿ ಹೊನ್ನಾವರ ಪೋಲಿಸರು ಯಶಸ್ವಿಯಾಗಿದ್ದಾರೆ. ತಾಲೂಕಿನ ಸರಳಗಿಯ ನಿವಾಸಿ ಅಬ್ದುಲ್ ರವೂಪ್ ಸಬ್ಬೀರ್ ಸಾಬ್  ಅವರಿಗೆ ಸೇರಿದ ಅಡಿಕೆ  ರಾತ್ರಿ ಕಳ್ಳತನವಾಗಿತ್ತು.   ಸರಳಗಿ ಪ್ಲಾಟದಲ್ಲಿರುವ ಅವರ ಅಂಗಡಿಯ ಮುಂದಿನ ಬಾಗಿಲಕ್ಕೆ ಹಾಕಿದ್ದ ಬೀಗವನ್ನು ಖದಿಮರು ಮುರಿದಿದ್ದರು. ಅಂಗಡಿಯೊಳಗೆ ಸಂಗ್ರಹಿಸಿಟ್ಟಿದ್ದ ಸುಮಾರು 2 ಲಕ್ಷ ರೂ. ಬೆಲೆಯ 5 ಕ್ವಿಂಟಲ್ ತೂಕ ಇರುವ ಅಡಿಕೆ ತುಂಬಿದ್ದ 10 ಚೀಲಗಳನ್ನು ಕಳವು ಮಾಡಿಕೊಂಡು ಹೋಗಿದ್ದರು. 

ಮದಿರೆ ಮತ್ತಿನಲ್ಲಿ ಶಿಕ್ಷಕನ ರಂಪಾಟ! ಅಂಗಡಿ ಮುಂದೆ ಬಿದ್ದು ತೂರಾಟ

ಈ ಕುರಿತು ರವೂಪ್ ಅವರು ಹೊನ್ನಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಈ ಪ್ರಕರಣದಲ್ಲಿ ಆರೋಪಿತರ ಪತ್ತೆ ಕುರಿತು ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು.ಆರೋಪಿಗಳನ್ನು ಇದೀಗ ಬಂಧಿಸಲಾಗಿದೆ. ಆರೋಪಿತರು ಹಳದೀಪುರದ  ಪಳ್ಳಿಕೇರಿಯ ಇನಾಯತುಲ್ಲಾ ಅಬ್ದುಲ್ ಹಸನ್, ಮೊಹ್ಮದ್ ಹುಸೇನ್ ಅಬ್ದುಲ್ ರವೂಫ್ ಖಾನ್, ಮೊಹಮ್ಮದ್ ಆನಾಸ್ ಮೊಹ್ಮದ್ ಗೌಸ್ ಖಾನ್ ಎಂದು ಗುರುತಿಸಲಾಗಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Related Articles

Back to top button