Important
Trending

ಗಾಳಿ ಮಳೆಗೆ ಸಿಲುಕಿದ ದೋಣಿ: ಅಪಾಯದಲ್ಲಿ ಮೀನುಗಾರರು

ಭಟ್ಕಳ: ಮೀನುಗಾರಿಕೆಗೆ ತೆರಳಿದ ಗಿಲ್ನೇಟ್ ದೋಣಿಯೊಂದು ಭಾರಿ ಗಾಳಿ ಮಳೆಗೆ ದಡಕ್ಕೆ ಬರಲಾಗದ ಸ್ಥಿತಿಯಲ್ಲಿ ಇಲ್ಲಿನ ಕಾಗೆ ಗುಡ್ಡದ ಸಮೀಪ ಸಿಲುಕಿಕೊಂಡಿದ್ದು ತಮ್ಮ ರಕ್ಷಣೆಗಾಗಿ ಸಂಬAಧಿಕರಿಗೆ ಕರೆ ಮಾಡಿ ತಿಳಿಸಿರುವ ಬಗ್ಗೆ ಮಾಹಿತಿ ದೊರಕಿದೆ.


ಭಾನವಾರ ಮುಂಜಾನೆ 5 ಗಂಟೆಯ ಸುಮಾರಿಗೆ ಮಾದೇವ ತಿಮ್ಮಪ್ಪ ಮೊಗೇರ ಅಳ್ವೆಕೋಡಿ ಭಟ್ಕಳ ಇವರ ಮಾಲೀಕತ್ವದ ಗಿಲ್ನೇಟ್ ದೋಣಿ ಮೂಲಕ ಬೆಳಗಿನಜಾವ 05-00 ಗಂಟೆಗೆ 4 ಜನ ಮೀನುಗಾರು ಸೇರಿಕೊಂಡು ಅಳ್ವೆಕೋಡಿ ಬಂದರ ಮೂಲಕ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿದ್ದರು.

ಮುಂಜಾನೆಯಿoದ ಶುರುವಾದ ಭಾರಿ ಗಾಳಿ ಮಳೆಗೆ ಸಮುದ್ರದಲ್ಲಿ ಅಲೆಗಳು ಹೆಚ್ಚಾಗಿ ದೋಣಿ ತೀರಕ್ಕೆ ಬರಲಾಗದೆ ಸಮುದ್ರದ ನಡುವೆ ಇರುವ ಕಾಗೆ ಗುಡ್ಡದ ಹತ್ತಿರ ಇರುವ ಬಗ್ಗೆ ತಿಳಿದುಬಂದಿದೆ. ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ ಮೀನುಗಾರರು ದೂರವಾಣಿ ಮೂಲಕ ತಮ್ಮ ಸಂಬoಧಿಕರಿಗೆ ಕರೆ ಮಾಡಿ ರಕ್ಷಣೆ ಮಾಡುವಂತೆ ಕೇಳಿಕೊಂಡಿರುತ್ತಾರೆ. ಅದರಂತೆ ಈ ಮೀನುಗಾರರ ಕುಟುಂಬದವರು ಮೀನುಗಾರಿಕಾ ಇಲಾಖೆಗೆ ಸಂಕಷ್ಟದಲ್ಲಿರುವ ನಮ್ಮವರನ್ನು ರಕ್ಷಿಸಿ ದಡಕ್ಕೆ ಕರೆತರುವಂತೆ ತಿಳಿಸಿದ ಬಗ್ಗೆ ತಿಳಿದುಬಂದಿರುತ್ತದೆ..


ಅಪಾಯದಲ್ಲಿ ಸಿಲುಕಿಕೊಂಡಿರುವ ಮೀನುಗಾರರು ಸಚಿನ್ ಮೊಗೇರ, ನಾರಾಯಣ ಮೊಗೇರ,ಜ್ಞಾನೇಶ ಮೊಗೇರ ಹಾಗೂ ಹರೀಶ್ ಮೊಗೇರ ಎಂದು ತಿಳಿದು ಬಂದಿದೆ.

ಇವರೆಲ್ಲರೂ ಈಗ ಸುರಕ್ಷಿತವಾಗಿ ಮರಳಿದ್ದು, ರಕ್ಷಣೆ ಮಾಡಲಾದ ಕುರಿತು ಮಾಹಿತಿ ಇದೀಗ ಬಂದಿದೆ.


ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button