ತಾಲೂಕಿನಲ್ಲಿ 36 ಕರೊನಾ ಕೇಸ್ ದಾಖಲು
ಸಾವಿರದ ಗಡಿದಾಟಿದ ಸೋಂಕಿತರ ಸಂಖ್ಯೆ
ಹೊನ್ನಾವರ: ತಾಲೂಕಿನಲ್ಲಿ ಇಂದು ಕರೊನಾ ಅಕ್ಷರಶ: ಆರ್ಭಟಿಸಿದೆ. 36 ಜನರಲ್ಲಿ ಕರೊನಾ ದೃಢಪಟ್ಟಿದ್ದು, ಇದರೊಂದಿಗೆ ತಾಲೂಕಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಸಾವಿರದ ಗಡಿದಾಟಿದಂತಾಗಿದೆ. ಇಂದು ಪಟ್ಟಣ ಭಾಗದಲ್ಲಿ 15, ಗ್ರಾಮೀಣ ಭಾಗದಲ್ಲಿ 18 ಕೇಸ್ ಸೇರಿದಂತೆ ಒಟ್ಟು 36 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಹೊನ್ನಾವರ ಪಟ್ಟಣದ ಲಕ್ಷ್ಮೀ ನಾರಾಯಣನಗರದ 31 ವರ್ಷದ ಯುವಕ, ಕಸಬಾ ಗುಂಡಿಬೈಲನ 29 ವರ್ಷದ ಯುವತಿ, ಖಾಸಗಿ ಆಸ್ಪತ್ರೆಯ ಸಿಬ್ಬಂದಿ 55 ವರ್ಷದ ಪುರುಷ, ಪಟ್ಟಣ ಪಂಚಾಯತ್ನ 18 ವರ್ಷದ ಯುವಕ, 24 ವರ್ಷದ ಯುವಕ, ಪ್ರಭಾತನಗರದ 55 ವರ್ಷದ ಪುರುಷ, 50 ವರ್ಷದ ಮಹಿಳೆ, 16 ವರ್ಷದ ಬಾಲಕಿಗೆ ಪಾಸಿಟಿವ್ ಬಂದಿದೆ.
ಉದ್ಯಮ ನಗರದ 23 ವರ್ಷದ ಯುವಕ, 29 ವರ್ಷದ ಯುವತಿ, ರಾಯಲಕೇರಿಯ 51 ವರ್ಷದ ಪುರುಷ, ಪೋಲಿಸ್ ಠಾಣೆಯ 48 ವರ್ಷದ ಮಹಿಳೆ, 54 ವರ್ಷದ ಪುರುಷ, ಕೆ ಎಚ್ ಬಿ ಕಾಲೋನಿಯ 57 ವರ್ಷದ ಪುರುಷ, ಗ್ರಾಮೀಣ ಭಾಗವಾದ ಕರ್ಕಿಯ 37 ವರ್ಷದ ಪುರುಷ, 45 ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ.
ಅಗ್ರಹಾರದ 42 ವರ್ಷದ ಪುರುಷ, ಹಳದೀಪುರದ 52 ವರ್ಷದ ಪುರುಷ, ಕಡತೋಕಾದ 70 ವರ್ಷದ ಪುರುಷ, 54 ವರ್ಷದ ಪುರುಷ, ಹೊಸಾಕುಳಿಯ 38 ವರ್ಷದ ಮಹಿಳೆ, 17 ವರ್ಷದ ಬಾಲಕಿ, 21 ವರ್ಷದ ಯುವತಿ, ಕಾಸರಕೋಡ ಟೋಂಕಾದ 30 ವರ್ಷದ ಯುವಕ, ಹೊಸಪಟ್ಟಣದ 44 ವರ್ಷದ ಪುರುಷನಿಗೆ ಸೋಂಕು ಕಾಣಿಸಿಕೊಂಡಿದೆ.
ಗುಣವAತೆಯ 68 ವರ್ಷದ ಮಹಿಳೆ, ಇಡಗುಂಜಿಯ 47 ವರ್ಷದ ಪುರುಷ, ಹಡಿನಬಾಳ ಮಸ್ಕಲಮಕ್ಕಿಯ 62 ವರ್ಷದ ಮಹಿಳೆ., ನಾಥಗೇರಿಯ 30 ವರ್ಷದ ಯುವಕ, 60 ವರ್ಷದ ಪುರುಷ, ಉಪ್ಪೋಣಿಯ 31 ವರ್ಷದ ಯುವತಿ, ಗೇರುಸೋಪ್ಪಾದ 24 ವರ್ಷದ ಪುರುಷ, ಕುಮಟಾ ಹಳಕಾರದ 35 ವರ್ಷದ ಮಹಿಳೆ, 21 ವರ್ಷದ ಯುವತಿ, 8 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ.
ಇಂದು 36 ಜನರಲ್ಲಿ ಕರೊನಾ ಸೋಂಕು ದೃಢಪಟ್ಟ ಬೆನ್ನಲ್ಲೆ, ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1010 ಕ್ಕೆ ತಲುಪಿದೆ. ಇಂದು ಇಬ್ಬರು ಡಿಸ್ಚಾರ್ಜ್ ಆಗಿದ್ದು, 13 ಜನರು ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ