Important
Trending

ಕುಮಟಾದಲ್ಲಿ 31, ಹೊನ್ನಾವರದಲ್ಲಿ 26 ಪಾಸಿಟಿವ್

ದಿನೇ ದಿನೇ ಹೆಚ್ಚುತ್ತಿದೆ ಆತಂಕ
ಗ್ರಾಮೀಣ ಭಾಗದಲ್ಲೇ ಸೋಂಕು ವ್ಯಾಪಕ

[sliders_pack id=”1487″]

ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 31 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಹನೇಹಳ್ಳಿ 6, ದಿವಳ್ಳಿ 4, ಗುನಗನಕೋಪ್ಪಾ 3, ದಿವಗಿ 2, ರಥಬೀದಿ 2, ಮಾಸೂರ್ ಕ್ರಾಸ್ 3, ಹಿರೇಗುತ್ತಿ 3, ಬೇಲೆಕಾನ್ 2, ತಲಗೇರಿ 2 ಸೇರಿದಂತೆ, ಹೆರವಟ್ಟಾ, ಬೆಲೆಹೀತ್ಲ ಮುಂತಾದ ಭಾಗಗಳಲ್ಲಿ ಸೋಂಕಿತ ಪ್ರಕರಣ ಪತ್ತೆಯಾಗಿದೆ.

ತಲಗೇರಿಯ 35 ವರ್ಷದ ಪುರುಷ, 70 ವರ್ಷದ ವೃದ್ಧೆ, ಹೀರೆಗುತ್ತಿಯ 63 ವರ್ಷದ ಪುರುಷ, 30 ವರ್ಷದ ಪುರುಷ, 55 ವರ್ಷದ ಮಹಿಳೆ, ಗುನಗನಕೋಪ್ಪಾದ 67 ವರ್ಷದ ಪುರುಷ, 30 ವರ್ಷದ ಪುರುಷ, 55 ವರ್ಷದ ಮಹಿಳೆ, ಕತಗಾಲ್ ಮಳವಳ್ಳಿಯ 75 ವರ್ಷದ ವೃದ್ಧ, ರಥಬೀದಿಯ 48 ವರ್ಷದ ಪುರುಷ, 40 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

ಹನೇಹಳ್ಳಿಯ 52 ವರ್ಷದ ಮಹಿಳೆ, 2 ವರ್ಷದ ಮಗು, 52 ವರ್ಷದ ಪುರುಷ, 50 ವರ್ಷದ ಮಹಿಳೆ, 20 ವರ್ಷದ ಯುವತಿ, 30 ವರ್ಷದ ಪುರುಷ, ಹೆರವಟ್ಟಾದ 51 ವರ್ಷದ ಪುರುಷ, ಬೇಲೆಕಾನ್‌ನ 40 ವರ್ಷದ ಮಹಿಳೆ, 25 ವರ್ಷದ ಪುರುಷ, ದಿವಳ್ಳಿಯ 45 ವರ್ಷದ ಪುರುಷ, ವರ್ಷದ ಮಹಿಳೆ, 68 ವರ್ಷದ ಮಹಿಳೆ, 35 ವರ್ಷದ ಮಹಿಳೆಗೂ ಪಾಸಿಟಿವ್ ಬಂದಿದೆ.

ಕುಮಟಾದ 52 ವರ್ಷದ ಪುರುಷ, ದಿವಗಿಯ 65 ವರ್ಷದ ಪುರುಷ, 60 ವರ್ಷದ ಮಹಿಳೆ, ಮಾಸೂರ್ ಕ್ರಾಸ್‌ನ 62 ವರ್ಷದ ಮಹಿಳೆ, 70 ವರ್ಷದ ವೃದ್ಧ, 29 ವರ್ಷದ ಮಹಿಳೆ, ಬೆಲೆಹಿತ್ಲದ 38 ವರ್ಷದ ಮಹಿಳೆಯಲ್ಲಿ ಸೊಂಕು ದೃಢಪಟ್ಟಿದೆ. ಇಂದು 31 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1508 ಕ್ಕೆ ಏರಿಕೆಯಾಗಿದೆ.

ಹೊನ್ನಾವರದಲ್ಲಿ ಇಂದು 26 ಪಾಸಿಟಿವ್

ಹೊನ್ನಾವರ: ತಾಲೂಕಿನಲ್ಲಿ ಇಂದು ಕರೊನಾ ಮತ್ತೆ ಆತಂಕ ಹೆಚ್ಚಿಸಿದೆ. ತಾಲೂಕಿನಲ್ಲಿ ಇಂದು 26 ಕರೊನಾ ಪಾಸಿಟಿವ್ ಪತ್ತೆಯಾಗಿದ್ದು, ಪಟ್ಟಣದಲ್ಲಿ 1 ಮತ್ತು ಗ್ರಾಮೀಣ ಭಾಗಗಳಲ್ಲಿ 25 ಕೇಸ್ ಕಾಣಿಸಿಕೊಂಡಿದೆ. ಹಡಿನಬಾಳ 9, ಕರ್ಕಿ 4, ಗೇರುಸೋಪ್ಪಾ ಮೋಗೆಹಳ್ಳದಲ್ಲಿ 2, ಸಾಲಕೋಡ 2, ಮುಗ್ವಾ 3, ಸಂತೇಗುಳಿ-ಕಡತೋಕಾ-ಜನಕ್ಕಡಕಲ್-ಖರ್ವಾ-ವoದೂರಿನಲ್ಲಿ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ಹೊನ್ನಾವರ ಪಟ್ಟಣದ ಕೆಳಗಿನ ಪಾಳ್ಯದ 46 ವರ್ಷದ ಪುರುಷ, ಗ್ರಾಮೀಣ ಭಾಗವಾದ ಗೇರುಸೋಪ್ಪಾ ಮೋಗೆಹಳ್ಳದ 58 ವರ್ಷದ ಪುರುಷ, 41 ವರ್ಷದ ಮಹಿಳೆ, ಸಾಲಕೋಡಿನ 54 ವರ್ಷದ ಪುರುಷ. 54 ವರ್ಷದ ಮಹಿಳೆ, ಮುಗ್ವಾ ಬಂಕನಹಿತ್ಲದ 69 ವರ್ಷದ ಪುರುಷನಿಗೆ ಸೋಂಕು ಕಾಣಿಸಿಕೊಂಡಿದೆ.

ಸoತೇಗುಳಿಯ 39 ವರ್ಷದ ಪುರುಷ, ವಂದೂರಿನ 23 ವರ್ಷದ ಯುವಕ, ಕಡತೋಕಾದ 67 ವರ್ಷದ ಪುರುಷ, ಜನಕ್ಕಡಕಲ್ 20 ವರ್ಷದ ಯುವಕ, ಖರ್ವಾದ 18 ವರ್ಷದ ಯುವತಿ,
ಕರ್ಕಿ ಇಳಕಾರದ 48 ವರ್ಷದ ಪುರುಷ, 82 ವರ್ಷದ ಪುರುಷ, 68 ವರ್ಷದ ಮಹಿಳೆ, 45 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ.

ಹಡಿನಬಾಳದ 65 ವರ್ಷದ ಪುರುಷ, 35 ವರ್ಷದ ಪುರುಷ, 39 ವರ್ಷದ ಪುರುಷ, 55 ವರ್ಷದ ಪುರುಷ, 42 ವರ್ಷದ ಪುರುಷ, 72 ವರ್ಷದ ಪುರುಷ., 60 ವರ್ಷದ ಮಹಿಳೆ, 55 ವರ್ಷದ ಮಹಿಳೆ, 11 ವರ್ಷದ ಬಾಲಕ ಸೇರಿದಂತೆ ಒಟ್ಟು 26 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ತಾಲೂಕಾ ಆಸ್ಪತ್ರೆಯಲ್ಲಿ 16 ಜನರು ಚಿಕಿತ್ಸೆ ಪಡೆಯುತ್ತಿದ್ದರೆ, 83 ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button