Uttara Kannada
Trending

ಹೊಟೇಲ್ ಸಮೀಪ ಚಾಲಕನ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ

ಭಟ್ಕಳ : ತಾಲೂಕಿನ ಹಳೆ ಕುಬೇರ ಹೊಟೇಲ್ ಸಮೀಪ ರಾಷ್ಟ್ರೀಯ ಹೆದ್ದಾರಿ 66 ಪಕ್ಕದಲ್ಲಿ ಹಾಸನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಚಾಲಕನ ಮೃತ ದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿರುವ ಘಟನೆ ಮಂಗಳವಾರ ನಡೆದಿದೆ. ಮೃತ ವ್ಯಕ್ತಿ ನಾಗರಾಜ ಹಾಸನ ಮೂಲದವರು ಎಂದು ತಿಳಿದು ಬಂದಿದೆ. ©Copyright reserved by Vismaya tv


ಈತ ಕ.ರಾ.ರ.ಸಾ ವಿಭಾಗೀಯ ಭದ್ರತಾ ನಿರೀಕ್ಷಕರ ನಿಗಮದ ಚಾಲಕನಾಗಿ ಕರ್ತ್ಯವ ನಿರ್ವಹಿಸುತ್ತಿದ್ದ. ಮೃತ ವ್ಯಕ್ತಿಯ ಜೇಬಿನಲ್ಲಿ ಸಿಕ್ಕಿರುವ ಐ.ಡಿ ಕಾರ್ಡ್ನಿಂದ ಮೃತನ ಗುರುತು ಪತ್ತೆಯಾಗಿದೆ. ಮೃತ ವ್ಯಕ್ತಿಯ ಶವ ಪತ್ತೆಯಾಗಿರುವ ವಿಷಯ ತಿಳುಯುತ್ತಿದ್ದಂತೆ ನಗರ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಮೃತ ದೇಹವನ್ನು ಭಟ್ಕಳ ಸರ್ಕಾರಿ ಆಸ್ಪತೆಗೆ ಸ್ಥಳಾಂತರಿಸಿದ್ದಾರೆ.

ಈತನ ಸಾವು ಕೊಲೆಯೋ ಅಥವಾ ಆಕಸ್ಮಿಕವೋ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.


ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button