ಜಿಲ್ಲೆಯಾದ್ಯಂತ ಮೂವರ ಸಾವು
ಕುಮಟಾ, ಶಿರಸಿ, ಮುಂಡಗೋಡಿನಲ್ಲಿ ತಲಾ ಒಬ್ಬರ ಸಾವು
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 157 ಕರೊನಾ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ವರದಿಯಾದಂತೆ ಕಾರವಾರ 13, ಅಂಕೋಲ 9, ಕುಮಟಾ 10,ಹೊನ್ನಾವರ 30,ಭಟ್ಕಳ 8, ಶಿರಸಿ 11, ಸಿದ್ದಾಪುರ 1, ಮುಂಡಗೋಡು 65, ಹಳಿಯಾಳ 4, ಯಲ್ಲಾಪುರದಲ್ಲಿ 6 ಪಾಸಿಟಿವ್ ಕಂಡುಬoದಿದೆ. ಇದೇ ವೇಳೆ ಇಂದು 227 ಮಂದಿ ಗುಣಮುಖರಾಗಿ ಇಂದು ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕಾರವಾರ 12, ಅಂಕೋಲಾ 11, ಕುಮಟಾ 19, ಹೊನ್ನಾವರ 15, ಶಿರಸಿ 51, ಮುಂಡಗೋಡ 84, ಹಳಿಯಾಳ 16, ಜೋಯ್ಡಾದಲ್ಲಿ ನಾಲ್ವರು ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ 505 ಜನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು 731 ಜನ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಾದ್ಯಂತ ಮೂವರ ಸಾವು
ಜಿಲ್ಲೆಯಾದ್ಯಂತ ಮೂವರು ಇಂದು ಕರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ಕುಮಟಾ, ಶಿರಸಿ , ಮುಂಡಗೋಡಿನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದು, ಇದರೊಂದಿಗೆ ಕರೊನಾದಿಂದ ಬಲಿಯಾದವರ ಸಂಖ್ಯೆ ಜಿಲ್ಲೆಯಲ್ಲಿ 141 ಕ್ಕೆ ಏರಿಕೆಯಾಗಿದೆ.
ಇಂದು 157 ಕೇಸ್ ದಾಖಲಾದ ಬೆನ್ನಲ್ಲೆ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 11,463ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ 10,086 ಜನ ಕರೋನಾದಿಂದ ಗುಣಮುಖರಾಗಿದ್ದಾರೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್