Join Our

WhatsApp Group
Trending

ಕುಮಟಾದಲ್ಲಿ 12, ಹೊನ್ನಾವರದಲ್ಲಿ 3 ಪಾಸಿಟಿವ್

ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 12 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಗೋಕರ್ಣದ ಕೋಟಿತಿರ್ಥದಲ್ಲಿ 3, ತದಡಿಯಲ್ಲಿ 2, ಹೆಗಡೆಯಲ್ಲಿ 2, ಹೆರವಟ್ಟಾ, ಮೂಲೇಕೇರಿ, ಹಿರೆಗುತ್ತಿ, ಜೋಡ್‌ಕೆರೆಯಲ್ಲಿ ತಲಾ ಒಂದೊoದು ಪ್ರಕರಣ ದಾಖಲಾಗಿದೆ.

ತದಡಿಯ 72 ವರ್ಷದ ವೃದ್ದೆ, 47 ವರ್ಷದ ಪುರುಷ, ಕೋಟಿತೀರ್ಥದ 42 ವರ್ಷದ ಪುರುಷ, 69 ವರ್ಷದ ಮಹಿಳೆ, 48 ವರ್ಷದ ಪುರುಷ, ಹೆರವಟ್ಟಾದ 39 ವರ್ಷದ ಪುರುಷ, ಜೋಡ್‌ಕೆರೆಯ 32 ವರ್ಷದ ಪುರುಷ, ಹಿರೆಗುತ್ತಿಯ 24 ವರ್ಷದ ಪುರುಷನಿಗೆ ಸೋಂಕು ಕಾಣಿಸಿಕೊಂಡಿದೆ.

ಹೆಗಡೆಯ 10 ವರ್ಷದ ಬಾಲಕ, 73 ವರ್ಷದ ವೃದ್ದ, 62 ವರ್ಷದ ಪುರುಷ, ಮೂಲೇಕೇರಿಯ 70 ವರ್ಷದ ವೃದ್ಧನಿಗೂ ಪಾಸಿಟಿವ್ ಬಂದಿದೆ. ಇಂದು 12 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,657ಕ್ಕೆ ಏರಿಕೆಯಾಗಿದೆ.

ಹೊನ್ನಾವರದಲ್ಲಿ ಮೂರು ಪಾಸಿಟಿವ್:

ಹೊನ್ನಾವರ: ತಾಲೂಕಿನಲ್ಲಿ ಇಂದು ಕರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಇಂದು ಕವಲಕ್ಕಿ-ಮಂಕಿ-ಹಳದೀಪುರ ಬಾಗದಲ್ಲಿ ತಲಾ ಒಂದೊoದು ಪ್ರಕರಣ ಪತ್ತೆಯಾಗಿದೆ.

ಕವಲಕ್ಕಿಯ 56 ವರ್ಷದ ಪುರುಷ, ಮಂಕಿಯ 40 ವರ್ಷದ ಪುರುಷ, ಹಳದೀಪುರದ 34 ವರ್ಷದ ಮಹಿಳೆ ಸೇರಿದಂತೆ ಇಂದು ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 16 ಜನರು ಗುಣಮುಖರಾಗಿದ್ದಾರೆ. ತಾಲೂಕಾ ಆಸ್ಪತ್ರೆಯಲ್ಲಿ 4 ಜನರು ಮತ್ತು ವಿವಿಧ ಆಸ್ಪತ್ರೆಯಲ್ಲಿ 13 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಸ್ಮಯ ನ್ಯೂಸ್ ನಾಗೇಶ ದೀವಗಿ, ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button