Big News
Trending

ಪೊಲೀಸರ ಪ್ರಕಟಣೆ: ಸಾರ್ವಜನಿಕರು ಈ ಅಂಶವನ್ನು ಗಮನದಲ್ಲಿಟ್ಟುಕೊಳ್ಳಿ

ಪೊಲೀಸರಿಗೆ ಮಾಹಿತಿ ನೀಡಿ
ಕಳ್ಳತನ ನಿಯಂತ್ರಣಕ್ಕೆ ಸಹಕರಿಸಿ

[sliders_pack id=”1487″]

ಭಟ್ಕಳ : ಭಟ್ಕಳ ತಾಲೂಕಿನಲ್ಲಿ ಕಳ್ಳತನ ಆಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಪ್ರಕಟಣೆ ನೀಡಲಾಗಿದೆ.
ಹಗಲು ಮತ್ತು ರಾತ್ರಿ ಮನೆ ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.

ಯಾರೇ ಸಾರ್ವಜನಿಕರು ಮನೆಗೆ ಬೀಗ ಹಾಕಿ ಹೊರಗಡೆ ಅಥವಾ ಬೇರೆ ಊರಿಗೆ ಹೋಗುವ ಸಂದರ್ಭದಲ್ಲಿ ಮನೆಯ ಲೊಕೇಶನ್‌ ಹಾಗೂ ಬೀಗ ಹಾಕಿದ ಮನೆಯ ವಿವರಗಳನ್ನು ಅಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸಿದ್ದಾರೆ. ತಮ್ಮ ವಿವರಗಳನ್ನು ಈ ಕೆಳಕಂಡ ಮೊಬೈಲ್ ನಂಬರಗೆ ವಾಟ್ಸಪ್ ಮಾಡಬೇಕಾಗಿ ಸಾರ್ವಜನಿಕರಲ್ಲಿ ಕೋರಲಾಗಿದೆ.

ಇದರಿಂದ ನಿಮ್ಮ ಮನೆಯ ಸುರಕ್ಷತೆಯ ಕುರಿತು ಹಗಲು ಮತ್ತು ರಾತ್ರಿ ಬೀಟ್ ಸಿಬ್ಬಂದಿಯವರು ನಿಮ್ಮ ಮನೆಯ ಮೇಲೆ ನಿಗಾ ವಹಿಸಲು ಅನುಕೂಲವಾಗುವುದು‌ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಟ್ಕಳ ಪೊಲೀಸ್ ವೃತ್ತ ನಿರೀಕ್ಷಕರು, ಮೊಬೈಲ್ ನಂಬರ್ – 9480805232, ಪಿ.ಎಸ್.ಐ ಭಟ್ಕಳ ಶಹರ ಪೊಲೀಸ್ ಠಾಣೆ -9480805269, ಪಿ.ಎಸ್.ಐ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ – 9480805252, ಪಿ.ಎಸ್.ಐ ಮುರ್ಡೇಶ್ವರ ಪೊಲೀಸ್ ಠಾಣೆ – 9480805253. ಈ ಸಂಖ್ಯೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button