Focus News
Trending

ಜಿಲ್ಲೆಯಲ್ಲಿಂದು 44 ಕರೊನಾ ಕೇಸ್: 55 ಮಂದಿ ಗುಣಮುಖ

ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 6 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಹೆರವಟ್ಟಾದಲ್ಲಿ 2, ವಾಲಗಳ್ಳಿ 2 ಹಾಗೂ ಕಾರ್‌ಸ್ಟ್ರೀಟಿನ ಸಮೀಪ 2 ಪ್ರಕರಣ ಪತ್ತೆಯಾಗಿದೆ.

ವಾಲಗಳ್ಳಿಯ 49 ವರ್ಷದ ಮಹಿಳೆ, 15 ವರ್ಷದ ಬಾಲಕಿ, ಹೆರವಟ್ಟಾದ 26 ವರ್ಷದ ಯುವಕ, 44 ವರ್ಷದ ಪುರುಷ, 12 ವರ್ಷದ ಬಾಲಕನಿಗೆ ಪಾಸಿಟಿವ್ ಬಂದಿದೆ. ಇಂದು 6 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,760ಕ್ಕೆ ಏರಿಕೆಯಾಗಿದೆ.

ಹೊನ್ನಾವರದಲ್ಲಿ ಆರು ಪಾಸಿಟಿವ್:

ಹೊನ್ನಾವರ: ತಾಲೂಕಿನಲ್ಲಿಯೂ ಸಹ ಇಂದು 6 ಜನರಿಗೆ ಕರೊನಾ ಪಾಸಿಟಿವ್ ಬಂದಿದೆ. ಇಂದು ಪಟ್ಟಣದಲ್ಲಿ-2 ಮತ್ತು ಗ್ರಾಮೀಣ ಣಾಗದಲ್ಲಿ-4 ಜನರಲ್ಲಿ ಸೋಂಕು ಪತ್ತೆಯಾಗಿದೆ. ಹೊನ್ನಾವರ ಪಟ್ಟಣದ 54 ವರ್ಷದ ಪುರುಷ, 27 ವರ್ಷದ ಯುವತಿ, ಗ್ರಾಮಿಣ ಭಾಗವಾದ ತೊಳಸಾಣಿಯ 60 ವರ್ಷದ ಮಹಿಳೆ, 55 ವರ್ಷದ ಮಹಿಳೆ, 25 ವರ್ಷದ ಯುವತಿಗೆ ಸೋಂಕು ತಗುಲಿದೆ.

ಮಾಗೋಡಿನ 39 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಇಂದು ಬಿಡುಗಡೆಯಾಗಿದ್ದು, ತಾಲೂಕಾ ಆಸ್ಪತ್ರೆಯಲ್ಲಿ-6 ಜನರು, ಮತ್ತು ಮನೆಯಲ್ಲಿ-35 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿರಸಿಯಲ್ಲಿಂದು 6 ಮಂದಿಗೆ ಕರೊನಾ:

ಶಿರಸಿ: ತಾಲೂಕಿನಲ್ಲಿ ಗುರುವಾರ ಆರು ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು, ಐವರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಇಂದು ಹೆಗ್ಗಾರ್ ಶಿವಳ್ಳಿಯಲ್ಲಿ 1, ಬನವಾಸಿ ಮಧುರವಳ್ಳಿಯಲ್ಲಿ 3, ಬೊಪ್ಪನಳ್ಳಿ ಇಸಳೂರಿನಲ್ಲಿ 1, ಹುಬ್ಬಳ್ಳಿ ರೋಡಿನ ಗೌಳಿಗಲ್ಲಿ ಒಂದು ಕೇಸ್ ದೃಢವಾಗಿದೆ.

ಯಲ್ಲಾಪುರದಲ್ಲಿಂದು ಇಬ್ಬರಿಗೆ ಸೋಂಕು:

ಯಲ್ಲಾಪುರ: ಪಟ್ಟಣದಲ್ಲಿ ಇಂದು ಇಬ್ಬರಿಗೆ ಕೊರೊನಾ ಸೋಂಕು ಧೃಢಪಟ್ಟಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 42 ಕ್ಕೆ ಏರಿಕೆಯಾಗಿದೆ.

ಅಂಕೋಲಾದಲ್ಲಿಂದು 2 ಕೊವಿಡ್ ಕೇಸ್ : ಸಕ್ರಿಯ 27

ಅಂಕೋಲಾ : ತಾಲೂಕಿನಲ್ಲಿ ಗುರುವಾರ 2 ಹೊಸ ಕೊವಿಡ್ ಕೇಸ್‍ಗಳು ಪತ್ತೆಯಾಗಿವೆ. ವಂದಿಗೆ ಗ್ರಾ.ಪಂ. ವ್ಯಾಪ್ತಿಯ 67ರ ವೃದ್ಧೆ ಮತ್ತು 29ರ ಯುವಕನಲ್ಲಿ ಸೋಂಕು ಲಕ್ಷಣಗಳು ಪತ್ತೆಯಾಗಿದ್ದು, ಅದೇ ಕುಟುಂಬದ ಈ ಹಿಂದಿನ ಸೋಂಕಿತ ಸದಸ್ಯನ ಪ್ರಾಥಮಿಕ ಸಂಪರ್ಕದಿಂದ ಬಂದಿರುವ ಸಾಧ್ಯತೆಯಿದೆ.

ತಾಲೂಕಿನ ವಿವಿಧೆಡೆಯಿಂದ 11 ರ್ಯಾಟ್ ಮತ್ತು 150 ಆರ್‍ಟಿಪಿಸಿಆರ್ ಸೇರಿದಂತೆ ಒಟ್ಟೂ 161 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಹೋಂ ಐಸೋಲೇಶನ್‍ನಲ್ಲಿರುವ 24 ಮಂದಿ ಸಹಿತ ಒಟ್ಟೂ 27 ಪ್ರಕರಣಗಳು ಸಕ್ರಿಯವಾಗಿದೆ.

ಜಿಲ್ಲೆಯಲ್ಲಿಂದು 44 ಕರೊನಾ ಕೇಸ್:

ಕಾರವಾರ 7, ಶಿರಸಿ 5, ಸಿದ್ದಾಪುರ 3 ಸೇರಿದಂತೆ ಜಿಲ್ಲೆಯಲ್ಲಿಂದು 44 ಕರೊನಾ‌‌ ಕೇಸ್ ದಾಖಲಾಗಿದೆ. ಇದೇ ವೇಳೆ ಇಂದು 55 ಮಂದಿ ಗುಣಮುಖರಾಗಿ ಬಿಡಿಗಡೆಯಾಗಿದ್ದಾರೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ ಮತ್ತು ಶ್ರೀಧರ ನಾಯ್ಕ, ಹೊನ್ನಾವರ ,‌ವಿಲಾಸ ನಾಯಕ ಅಂಕೋಲಾ

Back to top button