Big News
Trending

1.40 ಕೆ.ಜಿ ಗಾಂಜಾ ವಶಕ್ಕೆ: ಮೂವರ ಬಂಧನ

ಕಾರವಾರದ ರೈಲ್ವೆ ನಿಲ್ದಾಣದಲ್ಲಿ ಗಾಂಜಾ ಮಾರಾಟ
ಜಿಲ್ಲಾ ಅಪರಾಧ ಪತ್ತೆ ದಳದ ಕಾರ್ಯಾಚರಣೆ

[sliders_pack id=”1487″]

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಗಾಂಜಾ ನಶೆ ಸದ್ದು ಮಾಡುತ್ತಲೇ ಇದೆ. ಜಿಲ್ಲೆಯಲ್ಲಿ ಒಂದಲ್ಲ ಒಂದು ಕಡೆ ಗಂಜಾ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಲಾಗುತ್ತಿದೆ. ಈಗ ಕಾರವಾರದ ಶಿರವಾಡದ ರೈಲ್ವೆ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿದ ಜಿಲ್ಲಾ ಅಪರಾಧ ಪತ್ತೆ ದಳ, ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದೆ.


ಮೂವರನ್ನು ಬಂಧಿಸಿದ ಅಪರಾತ ಪತ್ತೆದಳ, ಆರೋಪಿಗಳಿಂದ 20 ಸಾವಿರ ರೂ. ಮೌಲ್ಯದ 1.40 ಕೆಜಿ ಗಾಂಜಾವನ್ನು ಮತ್ತು ಕಳ್ಳಸಾಗಾಣಿಕೆಗೆ ಬಳಸಲಾದ ಕಾರು, ಬೈಕ್ ಮತ್ತು ಮೊಬೈಲ್‌ನ್ನು ವಶಕ್ಕೆ ಪಡೆದಿದೆ. ಬಂಧಿತರನ್ನು ತಾಲೂಕಿನ ಶಿರವಾಡದ ಬಂಗಾರಪ್ಪನಗರದ ನಿವಾಸಿ ಕಿಶನ ಮೋಹನ ಬಾಂದೇಕರ , ಗೋಹಿಲ್ ಗಣೇಶ ಬೈರೆಲಿ, ಕಾಣಕೋಣದ ನಿವಾಸಿಯಾದ ಗಂಗೇಶ ಗಜಾನನ ಪಾಥರಪೆಕರ ಎಂದು ತಿಳಿದುಬಂದಿದೆ.


ಈ ಮೂವರು ಆರೋಪಿಗಳು ಶಿರವಾಡದ ರೈಲ್ವೆ ನಿಲ್ದಾಣದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಅಪರಾಧ ಪತ್ತೆದಳ ದಾಳಿ ನಡೆಸಿದೆ. ಕಾರ್ಯಾಚರಣೆಯಲ್ಲಿ ಸಿ.ಇ.ಎನ್ ಅಪರಾಧ ಪೊಲೀಸ ಠಾಣೆಯ ಪೊಲೀಸ ಸಿಬ್ಬಂದಿಯಾದ ಉಮೆಶ ನಾಯ್ಕ, ಶಿವಾನಂದ ತಾನಸಿ, ಶರತಕುಮಾರ ಬಿ.ಎಸ್, ನಾರಾಯಣ ಎಮ್.ಎಸ್ ಮುಂತಾದವರು ಇದ್ದರು.


ವಿಸ್ಮಯ ನ್ಯೂಸ್, ಕಾರವಾರ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button