ಗೋಕರ್ಣದ ಸೋಮೇಶ್ವರ ದೇವಸ್ಥಾನದಲ್ಲಿ ಕಳ್ಳತನ
ಬಾಗಿಲು ಮುರಿದು ಗರ್ಭಗುಡಿ ಪ್ರವೇಶ
ಗೋಕರ್ಣ: ಕಳೆದ ಒಂದು ವಾರದಿಂದ ಜಿಲ್ಲೆಯ ಹಲವೆಡೆ ಕಳ್ಳತನ ಪ್ರಕರಣ ವರದಿಯಾಗುತ್ತಲೇ ಇದೆ. ಅಂಕೋಲಾ ತಾಲೂಕಿನ ನಾಲ್ಕೈದು ಕಡೆ ಕಳ್ಳತನ ಕೇಸ್ ದಾಖಲಾದ ಬೆನ್ನಲ್ಲೆ, ಈಗ ಕುಮಟಾ ತಾಲೂಕಿನ ಗೋಕರ್ಣದಲ್ಲೂ ಕಳ್ಳತನ ಬೆಳಕಿಗೆ ಬಂದಿದೆ.
ಗೋಕರ್ಣದ ಸೋಮೇಶ್ವರ ದೇವಸ್ಥಾನದಲ್ಲಿ ಕಳ್ಳತನ ಲಕ್ಷಾಂತರ ರೂಪಾಯಿ ಮೌಲ್ಯದ ಬೆಲೆ ಬಾಳುವ ವಸ್ತುಗಳ ಕಳುವಾಗಿದೆ. ದೇವಸ್ಥಾನದ ಬಾಗಿಲ ಬೀಗ ಮುರಿದು ಗರ್ಭಗುಡಿ ಪ್ರವೇಶಿಸಿದ ಕಳ್ಳರು ಬೆಳ್ಳಿಯ ಪೀಟ, ಬೆಳ್ಳಿಯ ದೇವರ ಪ್ರಭಾವಳಿ, ಶಿವನಮೂರ್ತಿ, ಬಂಗಾರದ ಲಾಕೇಟ್ ಕದ್ದು ಪರಾರಿಯಾಗಿದ್ದಾರೆ.
ಸುಮಾರು ಮೂರುವರೆ ಲಕ್ಷ ಮೌಲ್ಯದ ಆಭರಣ ಕಳುವಾಗಿದೆ ಎಂಬ ಮಾಹಿತಿ ಲಭಿಸಿದೆ. ಮಾಹಿತಿ ಹಿನ್ನಲೆಯಲ್ಲಿ ಕುಮಟಾ ಸಿಪಿಐ ಪರಮೇಶ್ವರ ಗುನಗ ಮತ್ತು ಗೋಕರ್ಣ ಪಿಎಸ್‌ಐ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ಸಂಬoಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್, ಗೋಕರ್ಣ