
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿಂದು 16 ಕರೊನಾ ಕೇಸ್ ದಾಖಲಾಗಿದೆ. ಸಿದ್ದಾಪುರ 2, ಹಳಿಯಾಳ 1, ಶಿರಸಿ 5, ಭಟ್ಕಳ 1, ಅಂಕೋಲಾ 2, ದಾಂಡೇಲಿಯಲ್ಲಿ 1 ಕೇಸ್ ಕಂಡುಬಂದಿದೆ.
ಹೊನ್ನಾವರದಲ್ಲಿ ಎರಡು ಕೇಸ್:
ಹೊನ್ನಾವರ ತಾಲೂಕಿನಲ್ಲಿ ಇಂದು ಒಂದು ಕರೊನಾ ಕೇಸ್ ದಾಖಲಾಗಿದೆ. ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಯಾವುದೆ ಪ್ರಕರಣ ದಾಖಲಾಗಿರಲ್ಲಿಲ್ಲ. ಇಂದು ಇಡಗುಂಜಿಯ 50 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ. ವಿವಿಧ ಆಸ್ಪತ್ರೆಯಲ್ಲಿ 2 ಜನರು , ಮನೆಯಲ್ಲಿ 7 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಂಕೋಲಾದಲ್ಲಿಂದು ಕೋವಿಡ್ ಕೇಸ್ 2 : 900 ದಾಟಿದ ಸೋಂಕಿತರು? : ಸಕ್ರಿಯ 6
ಅಂಕೋಲಾ : ತಾಲೂಕಿನಲ್ಲಿ ಭಾನುವಾರ ಎರಡು ಹೊಸ ಕೋವಿಡ್ ಕೇಸ್ಗಳು ದಾಖಲಾಗಿದ್ದು, ಈ ಮೂಲಕ ಈವರೆಗಿನ ಒಟ್ಟೂ ಸೋಂಕಿತರ ಸಂಖ್ಯೆ 900ರ ಗಡಿ ದಾಟಿದೆ. ಈ ಹಿಂದೆ ಸೋಂಕಿಗೆ ಒಳಪಟ್ಟ ಬಹುತೇಕರು ಚೇತರಿಸಿಕೊಂಡು ಗುಣಮುಖರಾಗಿದ್ದು, ಕೇವಲ 6 ಪ್ರಕರಣಗಳು ಸಕ್ರಿಯವಾಗಿದೆ. ಕೇಣಿ ವ್ಯಾಪ್ತಿಯ 38ರ ಮಹಿಳೆ ಮತ್ತು ಪಟ್ಟಣ ವ್ಯಾಪ್ತಿಯ 21ರ ಯುವಕನಲ್ಲಿ ಸೋಂಕು ಲಕ್ಷಣಗಳು ಪತ್ತೆಯಾಗಿದೆ.
ಸೋಂಕು ಮಕ್ತರಾದ ಓರ್ವರನ್ನು ಬಿಡುಗಡೆಗೊಳಿಸಲಾಗಿದ್ದು, ಸೋಂಕು ಲಕ್ಷಣಗಳುಳ್ಳ ಎಲ್ಲ 6 ಜನರು ಹೋಂ ಐಸೋಲೇಶನ್ನಲ್ಲಿಯೇ ಚಿಕಿತ್ಸೆಗೆ ಒಳಪಟ್ಟಿದ್ದು, ಆಸ್ಪತ್ರೆಯಲ್ಲಿ ಯಾವುದೇ ಸೋಂಕಿತರಿಗೆ ಚಿಕಿತ್ಸೆ ಒಳಪಡಿಸಿಲ್ಲಾ. ಇಂದು 6 ಜನರ ರ್ಯಾಟ ಪರೀಕ್ಷೆ ನಡೆಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ ಮತ್ತು ಯೋಗೇಶ್ ಮಡಿವಾಳ ಕುಮಟಾ
ಇದನ್ನೂ ಓದಿ;ಪ್ರಮುಖ ಸುದ್ದಿಗಳು
- ಬೃಹತ್ ಶೋರೂಮ್ ಬ್ರೌನ್ವುಡ್ ನಲ್ಲಿ 12 ಉದ್ಯೋಗಾವಕಾಶಗಳು: ಇಂದೇ ಸಂಪರ್ಕಿಸಿ
- ವಿದ್ಯಾರ್ಥಿಗಳಿಗೆ ಭಗವದ್ಗೀತೆ ನೀಡಿ ಭವಿಷ್ಯಕ್ಕೆ ಶುಭ ಕೋರಿದ ಪ್ರಮುಖ ಸೌಹಾರ್ದ ಸಹಕಾರಿ
- ಉತ್ತಮ ಭವಿಷ್ಯ ರೂಪಿಸಿಕೊಳ್ಳಲು, ಈಗಿನಿಂದಲೇ ಸಮಯಕ್ಕೆ ಮಹತ್ವ ನೀಡಿ : ಡಾ. ಗಣೇಶ ನಾಗ್ವೇಕರ ಕಲಾ ಮತ್ತು ವಾಣಿಜ್ಯ ವಿದ್ಯಾಲಯದಲ್ಲಿ ನಡೆದ ವಾರ್ಷಿಕ ಸಮ್ಮೇಳನ
- ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಆಧಾರದ ಮೇಲೆ ಕೇಣಿಯಲ್ಲಿ ಸರ್ವಋತು ಆಳ ಸಮುದ್ರ ಗ್ರೀನ್ಫೀಲ್ಡ್ ಬಂದರಿನ ಅಭಿವೃದ್ಧಿ
- ವಿದ್ಯಾರ್ಥಿ ಸಂಸತ್ ಉದ್ಘಾಟನೆ ಹಾಗೂ ಬರಹ ಪಠ್ಯ ವಿತರಣೆ