ಫೆ.13 ರಿಂದ 16ರ ವರೆಗೆ ಕುಮಟಾ,ಅಂಕೋಲಾ, ಶಿರಸಿಯಲ್ಲಿ ಕಾರ್ಯಕ್ರಮ
ಹಿರೇಗುತ್ತಿಯಲ್ಲಿ ವೆಂಕಟೇಶ್ವರ ದೇಗುಲದ ಭೂಮಿ ಪೂಜೆ
ಅಂಕೋಲಾ : ಶ್ರೀ ಬಾರ್ಕೂರು ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ವಿದ್ಯಾವಾಚಸ್ಪತಿ ವಿಶ್ವಸಂತೋಷ ಭಾರತಿ ಶ್ರೀಪಾದರವರು ಭವ್ಯ ಭಾರತದ ಸನಾತನ ಧರ್ಮವನ್ನು ಪ್ರಚಲಿತಗೊಳಿಸಲು ಜಿಲ್ಲೆಯ ಕುಮಟಾ, ಅಂಕೋಲಾ, ಶಿರಸಿಯಲ್ಲಿ ಫೆ.13 ರಿಂದ ಫೆ.16ರ ತನಕ ಪ್ರವಚನ ಮಾಲಿಕೆ ನಡೆಸಿಕೊಡಲಿದ್ದಾರೆ.
ಈ ಕುರಿತು ಬಾರ್ಕೂರು ಮಹಾಸಂಸ್ಥಾನ ಉತ್ತರ ಕನ್ನಡ ಘಟಕದ ಅಧ್ಯಕ್ಷರಾದ ಡಿ.ಎನ್.ನಾಯಕ ಅಂಕೋಲಾದಲ್ಲಿ ಮಂಗಳವಾರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಸಂಸ್ಥಾನದ ಭಕ್ತರು, ಸಮಾಜದ ಬಂಧುಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಕುಮಟಾ : ಫೆ.13 ರಂದು ವನ್ನಳ್ಳಿಯ ಶ್ರೀ ಬೊಬ್ರುದೇವ ಹೊನ್ನಪ್ಪ ದೇವಸ್ಥಾನದ ಆವರಣದಲ್ಲಿ ಸಂಜೆ 5.30 ರಿಂದ 7.00 ವರೆಗೆ ವಿಧುರನ ಧರ್ಮ. ಅಂಕೋಲಾ : ಪಟ್ಟಣದ ಸ್ವಾತಂತ್ರö್ಯ ಸಂಗ್ರಾಮ ಸ್ಮಾರಕ ಭವನದ ಹೊರ ಆವರಣದಲ್ಲಿ ಸಂಜೆ 5.30 ರಿಂದ 7.00ರ ವರೆಗೆ ಫೆ.14ರಂದು ರಾಮನ ಮುಖಗಳು ಮತ್ತು ಫೆ.15ರಂದು ಪ್ರಾಚೀನ ಭಾರತದ ಒಂದು ನೋಟ. ಶಿರಸಿ : ಫೆ.16 ರಂದು ಶಿರಸಿಯ ಮಾರಿ ಕಾಂಬಾ ದೇವಸ್ಥಾನದ ಸಭಾಭವನದಲ್ಲಿ ಸಂಜೆ 4.30 ರಿಂದ 6.00 ರ ವರೆಗೆ ಮಾರಿಕಾಂಬಾ ಚೌಡಿ ಚಂಡಿಕೆ ಕುರಿತು ವಿಶೇಷ ಪ್ರವಚನ ನೀಡಲಿದ್ದಾರೆ.
ಹಿರೇಗುತ್ತಿ : ನಾಡವರ ಸಮಾಜ ಮತ್ತು ಬಾರ್ಕೂರು ಸಂಸ್ಥಾನದ ಈ ಹಿಂದಿನ ಐತಿಹಾಸಿಕ ಸಂಬ0ಧ ವುಳ್ಳ ಕುಮಟಾ ತಾಲೂಕಿನ ಹಿರೇಗುತ್ತಿಯಲ್ಲಿ ಫೆ.15 ರಂದು ಮುಂಜಾನೆ 9.00ಕ್ಕೆ ಗುರುಮಠ ನಿರ್ಮಾಣ ಕ್ಕಾಗಿ ಸ್ಥಳೀಯ ಭಕ್ತರಾದ ಶಾಂತಾ ನಾಯಕ ಇವರು ದಾನವಾಗಿ ನೀಡಿದ ಹೈಸ್ಕೂಲ್ ಪಕ್ಕದ ಎಕರೆ ಗಟ್ಟಲೆ ವಿಶಾಲ ಭೂಮಿಯಲ್ಲಿ, ಶ್ರೀ ವೆಂಕಟೇಶ್ವರ ದೇಗುಲ ನಿರ್ಮಾಣದ ಭೂಮಿ ಪೂಜೆ ನಡೆಯಲಿದೆ.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಆನಂದು ಕವರಿ ತೊರ್ಕೆ, ಸದಸ್ಯರಾದ ರವಿ ನಾಯಕ ಅಗಸೂರು, ಅರವಿಂದ ನಾಯಕ ಹಕ್ಕಿಮನೆ, ನಾರಾಯಣ ನಾಯಕ ಲಕ್ಷ್ಮೇಶ್ವರ, ರಾಮ ನಾಯಕ ಹುಲಿದೇವರವಾಡ, ಯೋಗೇಶ ನಾಯಕ ಬಾಸಗೋಡ, ಹೊನ್ನಪ್ಪ ನಾಯಕ ಲಕ್ಷ್ಮೇಶ್ವರ, ಬಾಲಚಂದ್ರ ನಾಯಕ ಭಾವಿಕೇರಿ, ಮಂಜುನಾಥ ನಾಯಕ ಕಣಗಿಲ್, ರಾಜೀವ ನಾಯಕ ಭಾವಿಕೇರಿ, ಪ್ರದೀಪ ನಾಯಕ ಭಾವಿಕೇರಿ ಉಪಸ್ಥಿತರಿದ್ದರು. ಜಗದೀಶ ನಾಯಕ ಹೊಸ್ಕೇರಿ ನಿರೂಪಿಸಿದರು, ರಾಜೇಶ ನಾಯಕ ಸೂರ್ವೆ ವಂದಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ