Focus News
Trending

ಕುಮಟಾದಲ್ಲಿ ನವೆಂಬರ್ 24 ರಂದು ಕಾಂಗ್ರೆಸ್‌ನಿoದ ಜನಜಾಗೃತಿ ಸಮಾವೇಶ: ಇದು ಚುನಾವಣೆ ಸಮಾವೇಶವಲ್ಲ: ದೇಶಪಾಂಡೆ

ಕುಮಟಾ: ಇದು ಯಾವುದೇ ರೀತಿಯ ಚುನಾವಣೆಗೆ ಸಂಬAಧಿಸಿದ ಸಮಾವೇಶವಲ್ಲವಾಗಿದ್ದು, ಪರೇಶ್ ಮೇಸ್ತ ಎಂಬ ಯುವಕನ ಸಾವಿನ ಪ್ರಕರಣಕ್ಕೆ ಸಂಬoಧಿಸಿದoತೆ ಭಾರತೀಯ ಜನತಾ ಪಾರ್ಟಿಯು ಜನತೆಗೆ ಮಾಡಿರುವ ಮೋಸವನ್ನು ತೆರೆದಿಡುವ ದೃಷ್ಠಿಯಿಂದ ಈ ಜನಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹಾಲಿ ಶಾಸಕರಾದ ಆರ್.ವಿ ದೇಶಪಾಂಡೆ ಅವರು ತಿಳಿಸಿದರು. ಇದೇ ನವೆಂಬರ್ 24 ರಂದು ಕುಮಟಾದ ಮಣಕಿ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಯಲಿರುವ ಬೃಹತ್ ಸಾರ್ವಜನಿಕ ಸಮಾವೇಶದ ಕುರಿತಾಗಿ ಮಾಹಿತಿ ನೀಡಲು ಕುಮಟಾ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾದ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಸುಳ್ಳು ಸುದ್ಧಿಗಳನ್ನು ಹಬ್ಬಿಸಿ, ಚುನಾವಣಾ ವಾತಾವರಣವನ್ನೆ ಕೆಡಿಸುವ ಕಾರ್ಯವನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಾರತೀಯ ಜನತಾ ಪಾರ್ಟಿಯು ಮಾಡಿದೆ.

ನಿಂತಲ್ಲೇ ಬೆಂಕಿಗೆ ಆಹುತಿಯಾದ ಟ್ಯಾಂಕರ್ : ಆಕಸ್ಮಿಕ ಹಾನಿಯಿಂದ ಕಂಗಾಲಾಗಿದೆ ಕುಟುಂಬ

ಇದೀಗ ಸಿ.ಬಿ.ಐ ತನಿಖೆಯ ಬಳಿಕ ಪರೇಶ್ ಮೇಸ್ತನ ಸಾವು ಸಹಜ ಸಾವೆಂದು ಬಿ. ರಿಪೋರ್ಟ್ ಬಂದ ಬಳಿಕ ಮರು ತನಿಖೆಯಾಗಬೆಕು ಎಂಬಿತ್ಯಾದಿ ಇಲ್ಲ ಸಲ್ಲದ ಮಾತುಗಳನ್ನಾಡುತ್ತಿದ್ದಾರೆ. ಅಮಾಯಕ ಯುವಕನ ಸಾವಿನ ಪ್ರಕರಣವನ್ನೇ ಚುನಾವಣೆಯ ಅಸ್ತçವನ್ನಾಗಿಸಿಕೊಂಡು ಕರಾವಳಿ ಭಾಗದ ಬಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಬಿ.ಜೆ.ಪಿ ಯವರಿಗೆ ಪ್ರಜಾ ಪ್ರಭುತ್ವದ ಕುರಿತಾಗಿ ವಿಶ್ವಾಸವಿದ್ದರೆ, ಆತ್ಮ ಗೌರವ ಇದ್ದದ್ದೆ ಆದಲ್ಲಿ ಮತದಾರರ ಬಳಿ ಕ್ಷಮೆ ಯಾಚಿಸಬೇಕು. ಜೋತೆಗೆ ಪರೇಶ ಮೇಸ್ತಾ ಕುಟುಂಬಸ್ಥರಿಗೆ ಕ್ಷಮೆ ಕೇಳಬೇಕು. ಆದ ಕಾರಣ 24 ರಂದು ಕುಮಟಾದ ಮಣಕಿ ಮೈದಾನದಲ್ಲಿ ನಡೆಯಲಿರುವ ಜನ ಜಾಗೃತಿ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ, ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಸುದ್ಧಿಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ ರಾಜ್ಯ ಕಾರ್ಯದರ್ಶಿಗಳಾದ ಐವನ್ ಡಿಸೋಜಾ, ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶಾರದಾ ಮೋಹನ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಭೀಮಣ್ಣ ನಾಯ್ಕ, ತಾಲೂಕಾಧ್ಯಕ್ಷರಾದ ವಿ.ಎಲ್ ನಾಯ್ಕ, ಮಾಜಿ ಶಾಸಕರಾದ ಮಂಕಾಳ ವೈದ್ಯ, ಸತೀಶ ಸೈಲ್ ಮುಂತಾದ ಮುಖಂಡರು ಸೇರಿದಂತೆ ಹೆಚ್ಚಿನ ಸಂಖ್ಯೆ ಕಾರ್ಯಕರ್ತರು ಹಾಜರಿದ್ದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ

Back to top button