Focus NewsImportant
Trending

ರೈತರಿಗೆ ಅನುಕೂಲ ವಾಗುವಂತಹ ಹತ್ತು ಹಲವು ಯೋಜನೆ ಜಾರಿ: ಇದು ಸ್ವಾವಲಂಬಿ ಬದುಕಿಗೆ ಸಹಕಾರಿ: ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆ

ಶಿರಸಿ: ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಗಳು ರೈತರ ಪರವಾಗಿ ರೈತರಿಗೆ ಅನುಕೂಲ ವಾಗುವಂತಹ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ರೈತರು ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಲು ಸಹಕಾರಿ ಯಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಅವರು ನಗರದ ವಿಕಾಸಾಶ್ರಮ ಮೈದಾನದಲ್ಲಿ ನಡೆದ ರೈತ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸಿದ ನಂತರ ರೈತರಿಗೆ ಆತ್ಮ ವಿಶ್ವಾಸ ಬಂದಿದೆ. ರೈತರಿಗೆ ಕೃಷಿ ಬದುಕಿನಲ್ಲಿ ವಿಶ್ವಾಸ ದಿಂದ ಮುನ್ನೆಡಯಬಹುದು ಎಂಬ ವಿಶ್ವಾಸ ಬಂದಿದೆ.

ಯುವಕರು ಕೃಷಿ ಕ್ಷೇತ್ರ ದ ಮುಖ ಮಾಡುತ್ತಿದ್ದಾರೆ. ಯುವ ಸಮುದಾಯ ಕೃಷಿಯಲ್ಲಿ ಬದಲಾವಣೆ ಮಾಡುತ್ತಿದ್ದಾರೆ. ಈ ವಾತಾವರಣ ಸೃಷ್ಟಿಯಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ಕಾರಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರಯತ್ನದ ಫಲವಾಗಿ ಕೃಷಿ ಯಲ್ಲಿ ಯಾಂತ್ರಿಕರಣ ಕಾಣುತ್ತಿದ್ದೇವೆ. ಯಾಂತ್ರೀಕರಣ ದ ವೇಗ ಸಹ ಹೆಚ್ಚಿದೆ. ಮೌಲ್ಯವರ್ಧನೆ ಸಹ ವೇಗ ವಾಗಿ ಬೆಳೆಯುತ್ತಿದೆ. ರೈತರಿಗೆ ಬದುಕಿಗೆ ಬೇಕಾದ ಸೌಲಭ್ಯಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡುತ್ತಿದೆ. ಕೃಷಿ ಸಂಬoಧಿತ ಕ್ಷೇತ್ರಗಳಿಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ರೈತ ಸಮುದಾಯಕ್ಕೆ ಈ ಯೋಜನೆಗಳನ್ನು ತಲುಪಿಸಲು ರೈತ ಮೋರ್ಚಾ ಗಳು ಶ್ರದ್ಧೆ ಯಿಂದ ಮಾಡುತ್ತಿದೆ. ಜನಸಮುದಾಯದಲ್ಲಿ ವಿಶ್ವಾಸ ಬಂದಿದೆ ಎಂದರು.

ರಾಜ್ಯ ಸಭಾ ಸದಸ್ಯ ಹಾಗೂ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಮಾತನಾಡಿ ಡಬಲ್ ಇಂಜಿನ್ ಸರ್ಕಾರ ಮಾಡಿದ ಜನಪರ ಕಾರ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ದೇಶದ ಒಟ್ಟೂ ಜನಸಂಖ್ಯೆಯ ಶೇಕಡಾ 49%ಜನ ಕೃಷಿ ಹಾಗೂ ಕೃಷಿ ಸಂಬoಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಾಗರಿಕ ಜಗತ್ತಿಗೆ ರೈತನ ಕೊಡುಗೆ ಅಪಾರವಾಗಿದೆ. ನಿಜವಾದ ರೈತನಿಗೂ ರಾಜಕೀಯ ಕ್ಕೂ ಸಂಬoಧವಿಲ್ಲ. ನಿಜವಾದ ರೈತ ಹೊಲದಲ್ಲಿರುತ್ತಾನೆ.ಅವನಿಗೆ ಕೃಷಿಯೇ ಪ್ರಪಂಚ ವಾಗಿರುತ್ತದೆ ಎಂದು ಹೇಳಿದರು.

ವಿಸ್ಮಯ ನ್ಯೂಸ್, ಶಿರಸಿ

Back to top button