Important

ಎಲ್ಲೆಡೆ ಗಣೇಶ ಚತುರ್ಥಿಯ ಸಂಭ್ರಮ : ಗಮನಸೆಳೆಯುತ್ತಿವೆ ಆಕರ್ಷಕ ಗಣೇಶ ಮೂರ್ತಿಗಳು

ವಿವಿಧ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅದ್ಧೂರಿ ಆಚರಣೆ

ಕುಮಟಾ: ಎಲ್ಲೆಡೆ ಚೌತಿಯ ಸಂಭ್ರಮ ಮನೆಮಾಡಿದೆ. ಕುಮಟಾ ಪಟ್ಟಣದಲ್ಲಿ ವಿವಿದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ಈ ಭಾರಿ ಗಣೇಶೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಧಾರ್ಮಿಕ ವಿಧಿ ವಿಧಾನದಂತೆ ಆಚರಿಸುತ್ತಿದ್ದಾರೆ. ತಾಲೂಕಿನ ವಿವಿದೆಡೆಯಿಂದ ನೂರಾರು ಸಂಖ್ಯೆಯಲ್ಲಿ ಸಾರ್ವಜಿಕರು ಆಗಮಿಸಿ ಪ್ರಥಮ ಪೂಜಿತನ ದರ್ಶನ ಪಡೆದು ಕೃತಾರ್ಥರಾಗುತ್ತಿದ್ದಾರೆ.

ಕುಮಟಾ ಪಟ್ಟಣದ ಪ್ರಮುಖ ಸಾರ್ವಜನಿಕ ಗಣೇಶೋತ್ಸವ ಸಮಿತಿಯಾದ ಹಳೆ ಬಸ್ ನಿಲ್ಧಾಣ ಸಮೀಪದ ಸಾರ್ವಜನಿಕ ಗಣೇಶೋತ್ಸವ ಸಮಿತಿ ನೆಲ್ಲಿಕೇರಿ, ಆಟೋ ಚಾಲಕ ಮಾಲಕರ ಗಣೆಶೋತ್ಸವ ಸಮಿತಿ ಮೂರುಕಟ್ಟೆ, ಶ್ರೀ ಗಣೆಶೋತ್ಸವ ಸಮಿತಿ ಪಿಕಪ್ ಸ್ಟ್ಯಾಂಡ್, ಸಾರ್ವಜನಿಕ ಗಣೇಶೊತ್ಸವ ಸಮಿತಿ ಗುಡಗಾರಗಲ್ಲಿ, ಮುನ್ಸಿಪಲ್ ವ್ಯಾಯಾಮಶಾಲೆ ಕುಮಟಾ, ಹೊಸ ಬಸ್ ನಿಲ್ಧಾಣ, ಉಪ್ಪಾರ ಕೇರಿ ಸೇರಿದಂತೆ ವಿವಿದ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಈ ಭಾರಿ ಅತ್ಯಂತ ಅದ್ದೂರಿಯಾಗಿ ಗಣೇಶ ಚತುರ್ಥಿಯನ್ನು ಆಚರಿಸುತ್ತಿದ್ದು, ಪ್ರತಿಷ್ಥಾಪಿಸಲಾದ ವಿವಿದ ಭಗೆಯ ಗಣೇಶ ಮೂರ್ತಿಯು ಎಲ್ಲರ ಗಮನ ಸೆಳೆಯುತ್ತಿದೆ.

ಈ ಸಂಬoದ ಪಿಕಪ್ ಸ್ಟ್ಯಾಂಡ್, ಗಣೆಶೋತ್ಸವ ಸಮಿತಿಯ ಕಾರ್ಯದರ್ಶಿಗಳಾದ ರಾಜೇಶ ನಾಯ್ಕ ಅವರು ನಮ್ಮ ವಿಸ್ಮಯ ಟಿ.ವಿ ಯೊಂದಿಗೆ ಮಾತನಾಡಿ, 1978 ರಲ್ಲಿ ಸ್ಥಾಪನೆಯಾಗಿದ್ದು, ಇದು 46ನೇ ವರ್ಷದ ಗಣೇಶೋತ್ಸವವನ್ನು ಆಚರಿಸುತ್ತಿದ್ದೇವೆ. ನಾಳೆ ಮೂರನೇ ದಿನದಂದು ಗಣಹೋಮ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿಬೇಕೆಂದು ತಿಳಿಸಿದರು.

ಆಟೋ ಚಾಲಕ ಮಾಲಕರ ಗಣೆಶೋತ್ಸವ ಸಮಿತಿ ಮೂರುಕಟ್ಟೆ ಇದರ ಉಪಾಧ್ಯಕ್ಷರಾದ ಸುರೇಶ ಪಟಗಾರ ಮಾತನಾಡಿ, ಇಂದು 35ನೇ ವರ್ಷದ ಗಣೇಶೋತ್ಸವವನ್ನು ಆಚರಿಸುತ್ತಿದ್ದೇವೆ. ಇದಕ್ಕೆ ಅನೇಕ ಜನ ದಾನಿಗಳು ದನ ಸಹಾಯವನ್ನು ಮಾಡುತ್ತಿದ್ದು, ಶನಿವಾರ ಹಾಗು ರವಿವಾರದಂದು ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಅನ್ನ ಪ್ರಸಾದವನ್ನು ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗಕೇಂದು ಕೋರಿದರು.

ಸಾರ್ವಜನಿಕ ಗಣೇಶೊತ್ಸವ ಸಮಿತಿ ಗುಡಗಾರಗಲ್ಲಿ ಇದರ ಸದಸ್ಯರಾದ ಸದಸ್ಯರಾದ ಮಂಜುನಾಥ ನಾಯ್ಕ ಮಾತನಾಡಿ ಹರಕೆ ಗಣಪತಿಯೆಂದೆ ಹೆಸರುವಾಸಿಯಾದ ಗುಡಗಾರಗಲ್ಲಿಯ ಸಾರ್ವಜನಿಕ ಗಣಪತಿಯನ್ನು ಈ ವರ್ಷವೂ ಕೂಡ ಅತ್ಯಂತ ವಿಜ್ರಂಭಣೆಯಿAದ ಆಚರಿಸುತ್ತಿದ್ದು, ಸೋಮವಾರದಂದು ಸತ್ಯನಾರಾಣ ಪೂಜೆ ಹಾಗು ಅನ್ನಸಂತರ್ಪಣೆಯನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸದರು.

ಮುನ್ಸಿಪಲ್ ವ್ಯಾಯಾಮಶಾಲೆ ಕುಮಟಾ ಇದರ ಗೌರವಾಧ್ಯಕ್ಷರಾದ ಬಾಲಕೃಷ್ಣ ಕೊರಗಾಂವಕಾರ ಅವರು ಮಾತನಾಡಿ, ಒಂದೆರಡು ವರ್ಷ ಕಾಗದ ಗಣಪತಿಯನ್ನು ಮಾಡಿ, ನಂತರ 1974ರಿಂದ ಮಣ್ಣಿನ ಗಣಪತಿಯನ್ನು ತಯಾರಿಸಿ ಇಂದಿಗೆ 50ನೇ ವರ್ಷದ ಸಂಭ್ರಮದಲ್ಲಿದ್ದೇವೆ. ಇಂದು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, 22 ಶುಕ್ರವಾರದಂದು ರಾತ್ರಿ 9:30 ಕ್ಕೆ ಶ್ರೀ ರಾಮನಾಥ ಪ್ರಸಾದಿತ ಯಕ್ಷಗಾನ ಮಂಡಳಿ ಕುಮಟಾ ಇವರಿಂದ ಶ್ರೀ ಮಾರುತಿ ಪ್ರತಾಪ ಎಂಬ ಯಕ್ಷಗಾನವನ್ನು ಹಮ್ಮಿಕೊಂಡಿದ್ದೇವೆ. 23 ಶನಿವಾರದಂದು ಬೆಳಿಗ್ಗೆ 10 ಘಂಟಗೆ ಗಣಹೋಮ ಹಾಗೂ ಮದ್ಯಾನ ಅನ್ನ ಸಂತರ್ಪನೆ ಹಾಗೂ ಸಂಜೆ ಜಿಲ್ಲಾ ಮಟ್ಟದ ದೇಹದಾಡ್ಯ ಸ್ಪರ್ದೆ ಹಾಗು24 ರವಿವಾರದಂದು ಬೆಳಿಗ್ಗೆ 9ಘಂಟಯಿoದ ಜಿಲ್ಲಾ ಮಟ್ಟದ ಪವರ್ ಲಿಪ್ಟಿಂಗ್ ಸ್ಫರ್ಧೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

ಒಟ್ಟಾರೆ ಕುಮಟಾ ಪಟ್ಟಣದಲ್ಲಿ ಸಾರ್ವಜನಿಕ ಗಣೇಶೋತ್ಸವವು ಸಡಗರ ಸಂಭ್ರಮದಿAದ ನಡೆಯುತ್ತಿದ್ದು, ಪ್ರತಿಷ್ಠಾಪಿಸಲಾದ ವಿವಿದ ಶೈಲಿಯ ಗಣೇಶ ಮೂರ್ತಿಯು ಎಲ್ಲರ ಗಮನ ಸೆಳೆಯುತ್ತಿದೆ ತಾಲೂಕಿನೆಲ್ಲೆಡೆಯಿಂದ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಆಗಮಿಸಿ ವಿಘ್ನ ನಾಶಕನ ಆಶಿರ್ವಾದವನ್ನು ಪಡೆದು, ಪ್ರಸಾದ ಸ್ವೀಕರಿಸಿ ಪುನೀತರಾಗುತ್ತಿದ್ದಾರೆ.

ವಿಸ್ಮಯ ನ್ಯೂಸ್, ನಾಗೇಶ ದೀವಗಿ, ಕುಮಟಾ

Back to top button