ಕುಮಟಾ ರೋಟರಿಯಿಂದ ಗಜಾನನ ಮೇಸ್ತ ಕುಟುಂಬಕ್ಕೆ ನೆರವು

ಕುಮಟಾ: ಅಳ್ವೆದಂಡೆಯ ಬಡ ಮೀನುಗಾರ ಕಾರ್ಮಿಕ ಗಜಾನನ ಮೇಸ್ತ ಕುಟುಂಬಕ್ಕೆ ರೋಟರಿ ವತಿಯಿಂದ 50 ಸಾವಿರ ರು. ಚೆಕ್ಕನ್ನು ರೋಟರಿ ಅಧ್ಯಕ್ಷ ಶಶಿಕಾಂತ ಕೋಳೇಕರ, ಕಲಭಾಗ ಗ್ರಾಮ ಪಂಚಾಯತ ಅಧ್ಯಕ್ಷೆ ಗೀತಾ ಕುಬಾಲರ ಸಮ್ಮುಖದಲ್ಲಿ ವಿತರಿಸಿದರು. ಕೆಲ ದಿನಗಳ ಹಿಂದಷ್ಟೇ ವಿದ್ಯುತ್ ಅವಘಡದಿಂದ ಪುಟ್ಟ ಮನೆ ಬೆಂಕಿಗಾಹುತಿಯಾಗಿದ್ದನ್ನು, ಸೂರಿಲ್ಲದೇ ಸದ್ಯಕ್ಕೆ ಬೇರೆಯವರ ಮನೆಯಲ್ಲಿದ್ದು ಮನೆಯನ್ನು ಮರುನಿರ್ಮಿಸಿಕೊಳ್ಳಲು ಹೆಣಗಾಡುತ್ತಿದ್ದ ಹೊತ್ತಿನಲ್ಲಿ ರೋಟರಿ ವತಿಯಿಂದ ಸಾಂತ್ವನ ನುಡಿದು ನೆರವನ್ನು ನೀಡುತ್ತಿರುವುದಾಗಿಯೂ, ಮುಂದಿನ ದಿನಗಳಲ್ಲಿ ಗೃಹೋಪಕರಣಗಳನ್ನು ಪೂರೈಸಲು ಪ್ರಯತ್ನಿಸುವುದಾಗಿಯೂ ರೋಟರಿ ಅಧ್ಯಕ್ಷರು ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯದರ್ಶಿ ಅತುಲ್ ಕಾಮತ ಅವರು, ಕುಮಟಾದ ವಿಷ್ಣು ಭಟ್ಟ, ಬೆಂಗಳೂರಿನ ಶ್ರೀವತ್ಸ ಹಾಗೂ ಕೈಗಾರಿಕೋದ್ಯಮಿ ಗಜಾನನ ಹರಿಕಾಂತ ತಮ್ಮೊಂದಿಗೆ ಕೈಜೋಡಿಸಿದ್ದಕ್ಕೆ ಅಭಿನಂದಿಸಿದರು. ಗ್ರಾ..ಪಂ. ಸದಸ್ಯರಾದ ಗೌರೀಶ ಕುಬಾಲ, ನಾಡದೋಣಿ ಸದಸ್ಯರಾದ ನಂದಾ ಜಾಧವ, ಅರುಣ ತದಡಿಕರ, ದೀಪಕ ಫಟ್ಕುರೆ, ರಾಘು ಲೋನೆ ಮೊದಲಾದವರು ಉಪಸ್ಥಿತರಿದ್ದು ರೋಟರಿ ಕ್ಲಬ್ಬಿನ ತತ್ಕಾಲ ಸೇವಾಕಾರ್ಯವನ್ನು ಶ್ಲಾಘಿಸಿದರು. ರೋಟರಿ ಸದಸ್ಯರಾದ ಜಯವಿಠ್ಠಲ ಕುಬಾಲ, ಮೌಸಿನ್ ಖಾಜಿ, ಎನ್.ಆರ್.ಗಜು ಮೊದಲಾದವರಿದ್ದರು.

” ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9886460777INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9886460777

Exit mobile version