Join Our

WhatsApp Group
Info
Trending

ನೇತ್ರದಾನಿಯಾಗಿ ಅಮರರಾದ ಶ್ರೀಮತಿ ಮೂಕಾಂಬೆ ಭಟ್ಟ|ಎರಡೂ ನೇತ್ರಗಳ ಸುರಕ್ಷಿತವಾಗಿ ಸಂಗ್ರಹಣೆ

ಕುಮಟಾ :- ಶ್ರೀಮತಿ ಮೂಕಾಂಬೆ ಉಮಾಮಹೇಶ್ವರ ಭಟ್ಟ ಅಲವಳ್ಳಿ ಮೂರೂರು (82ವರ್ಷ)ಇವರು ವೃದ್ಧಾಪ್ಯದ ವಯೋಸಹಜ ಕಾಯಿಲೆಯಿಂದಾಗಿ ಮಂಗಳವಾರ ಬೆಳಿಗ್ಗೆ ನಿಧನರಾದರು.

ಕುಟುಂಬದವರ ಇಚ್ಛೆಯಂತೆ ಪೂಜ್ಯರ ನೇತ್ರಗಳನ್ನು ದಾನ ಮಾಡುವ ಇಂಗಿತವನ್ನು ಮೊಮ್ಮಗ ಡಾ.ಸತೀಶ ಸುಬ್ರಾಯ ಭಟ್ಟ ರವರು ವ್ಯಕ್ತಪಡಿಸಿದಾಗ,
ಕುಮಟಾದ ಲಾಯನ್ಸ್ ರೇವಣಕರ ಚೆರಿಟೆಬಲ್ ಕಣ್ಣಿನ ಆಸ್ಪತ್ರೆಯ ವೈದ್ಯಾಧಿಕಾರಿ ನೇತ್ರತಜ್ಙ ಡಾ.ಮಲ್ಲಿಕಾರ್ಜುನ ಹಾಗೂ ಶುಶ್ರೂಷಕರ ತಂಡವು ಭೇಟಿ ನೀಡಿ ಮೃತರ ಎರಡೂ ನೇತ್ರಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿದರು.

ಈ ನೇತ್ರಗಳನ್ನು ಪುತ್ರ ಸುಬ್ರಾಯ ಉಮಾಮಹೇಶ್ವರ ಭಟ್ಟ ದಂಪತಿಯಿಂದ ಸ್ವೀಕರಿಸಿದ ಆಡಳಿತಾಧಿಕಾರಿ ಜಯದೇವ ಬಳಗಂಡಿಯವರು ನೇತ್ರದಾನಿಯಾಗಿ ಅಮರರಾದ ಪೂಜ್ಯರ ಆತ್ಮಕ್ಕೆ ಚಿರಶಾಂತಿ ಕೋರಿ,ಕುಟುಂಬದವರ ಈ ಕಾರ್ಯಕ್ಕಾಗಿ ಆಸ್ಪತ್ರೆಯ ಟ್ರಸ್ಟ್ ವತಿಯಿಂದ ‘ಅಭಿನಂದನಾ ಪ್ರಮಾಣಪತ್ರ’ ಸಲ್ಲಿಸುತ್ತ ,ಮಾತೋಶ್ರೀಯವರ ಅಗಲುವಿಕೆಯ ದುಃಖ ಭರಿಸುವ ಶಕ್ತಿ ಯನ್ನು ಆ ಭಗವಂತ ಕುಟುಂಬದವರಿಗೆಲ್ಲ ನೀಡಲೆಂದು ಪ್ರಾರ್ಥಿಸಿದರು.

ವಿಸ್ಮಯ ನ್ಯೂಸ್ ಕುಮಟಾ

Check Also
Close
Back to top button