ಬರಗದ್ದೆ, ಯಲವಳ್ಳಿ, ನೀಲಕೋಡ ಗ್ರಾಮಸ್ಥರಿಂದ ಶಾಸಕರಿಗೆ ಮನವಿ ಸಲ್ಲಿಕೆ: ಲೈನ್‌ಮನ್‌ಗಳ ನಿಯೋಜನೆಗೆ ಆಗ್ರಹ

ಕುಮಟಾ: ವಿದ್ಯುತ್ ಕಂಬ-ತಂತಿಗಳನ್ನು ಸ್ಥಳಾಂತರಿಸಬೇಕು ಹಾಗೂ ಲೈನ್‌ಮನ್‌ಗಳನ್ನು ನಿಯೋಜಿಸುವ ಕುರಿತಾಗಿ ಕುಮಟಾ ತಾಲೂಕಿನ ಬರಗದ್ದೆ, ಯಲವಳ್ಳಿ, ನೀಲಕೋಡ ನಾಗರಿಕರು ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿಯವರಿಗೆ ಮನವಿಯನ್ನು ಸಲ್ಲಿಸಿದರು. ನಮ್ಮ ಊರಿನಲ್ಲಿ ಅಳವಡಿಸಿರುವ 11 ಕೆ.ವಿ ವಿದ್ಯುತ್ ಲೈನ್ ಕಾಡಿನ ನಡುವೆ ಹಾದು ಹೋಗಿದ್ದು, ಅದರ ನಿರ್ವಹಣೆಗೆ ಬಹಳ ಅಡಚಣೆ ಉಂಟಾಗುತ್ತಿದೆ. ಇದರಿಂದಾಗಿ ಬರಗದ್ದೆ, ಯಲವಳ್ಳಿ, ನಿಲಕೋಡ ಗ್ರಾಮಗಳಿಗೆ ಪದೇ ಪದೇ ವಿದ್ಯತ್ ಸಮಸ್ಯೆ ಉಂಟಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಕಾಡಿನಲ್ಲಿ ಹಾದು ಹೋಗಿರುವ ಲೈನ್‌ಗಳನ್ನು ರಸ್ತೆಯ ಪಕ್ಕದಲ್ಲಿ ಅಳವಡಿಸಬೇಕು ಹಾಗೂ ಈ ಮೊದಲು ಮೂರು ಲೈನ್‌ಮನ್‌ಗಳು ಕಾರ್ಯನಿರ್ವಹಿಸುತ್ತಿದ್ದರು. ಆದರೆ ಈಗ ಒರ್ವ ಲೈನ್‌ಮನ್ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ, ಮಿರ್ಜಾನ್ ಫೀಡರಿಗೆ 100 ಕ್ಕೂ ಹೆಚ್ಚು ಟ್ರಾನ್ಸ್ಫರ್ಮಾರ್‌ಗಳಿದ್ದು, ಇವೆಲ್ಲರ ನಿರ್ವಹಣೆ ಒಬ್ಬರಿಂದ ಕಷ್ಟಸಾಧ್ಯವಾಗಿದೆ. ಆದ ಕಾರಣ ಇನ್ನೂ 2 ಜನ ಲೈನ್‌ಮನ್‌ಗಳನ್ನು ಮಿರ್ಜಾನ್ ಫೀಡರಿಗೆ ನೀಡಬೆಕು ಎಂದು ಒತ್ತಾಯಿಸಿದರು. ಈ ವೇಳೆ ಗ್ರಾಮ ಪಂಚಾಯತ್ ಸದಸ್ಯರಾದ ತುಳುಸುಗೌಡ, ಪ್ರದೀಪ್ ಹೆಗಡೆ, ಗಣಪತಿ ಭಟ್, ಮಂಜುನಾಥ್ ಹೆಗಡೆ, ವಿಶ್ವನಾಥ್ ಭಟ್, ಗಜಾನನ ಹೆಗಡೆ ಸೇರಿದಂತೆ ಹಲವರು ಇದ್ದರು.

ವಿಸ್ಮಯ ನ್ಯೂಸ್, ಕುಮಟಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

Exit mobile version