Important

ಲಾಕ್‍ಡೌನ್‍ನಲ್ಲಿ ಏನೆಲ್ಲ ಬದಲಾವಣೆ ಉತ್ತರಕನ್ನಡದಲ್ಲಿ ಏನುಂಟು, ಏನಿಲ್ಲ?

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ 4 ನೇ ಹಂತದ ಲಾಕ್ಡೌನ್‍ನಲ್ಲಿ ಯಾವ ಯಾವ ಬಲಾವಣೆ ಮಾಡಿದೆ ಎಂಬುದರ ಬಗ್ಗೆ ಸ್ವಷ್ಣನೆ ನೀಡಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಾದ ಹರೀಶಕುಮಾರ ಕೆ, ಹಾಗು ಜಿಲ್ಲಾ ರಕ್ಷಣಾಧಿಕಾರಿ ಹಾಗೂ ಸಿ.ಇ.ಓ ರವರು ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾಹಿತಿ ನೀಡಿದ್ದಾರೆ. ಈ ಹಿಂದೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶವಿತ್ತು, ಇದೀಗ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಬಿಡುಗಡೆಗೊಳಿಸಿರುವ 4 ನೇ ಹಂತದ ಲಾಕ್ಡೌನ್ ನಿಯಮದ ಪ್ರಕಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ತೆರೆಯಬಹು, ಆದರೆ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯ ವರಗೆ ಮಾತ್ರ ತೆರೆಯ ಬಹುದು ಎಂದರು. ಹೊರ ರಾಜ್ಯದಿಂದ ಬರುವವರು ಸೇವಾ ಸಿಂಧು ಪೋರ್ಟಲ್‍ನಲ್ಲಿ ಅನುಮತಿ ಪಡೆದುಕೊಂಡೆ ಮಾತ್ರ ಅವಕಾಶ ನೀಡಲಾಗುತ್ತದೆ. ಅದನ್ನು ಹೊರತುಪಡಿಸಿ ರಾಜ್ಯದ ಓಳಗೆ ಒಡಾಟ ನಡೆಸುವವರು, ಅಂದರೆ ಜಿಲ್ಲೆಯಿಂದ ಜಿಲ್ಲೆಗೆ, ತಾಲೂಕಿನಿಂದ ತಾಲೂಕಿಗೆ ಪ್ರಯಾಣ ಬೆಳೆಸಲು ಸಾರ್ವಜನಿಕರಿಗಾಗಲಿ ಅಥವಾ ವಾಹನಕ್ಕಾಗಲಿ ಯಾವುದೆ ಪಾಸ್‍ನ ಅವಶ್ಯಕತೆ ಇಲ್ಲ. ಮದುವೆ ಸಮಾರಂಭಗಳಲ್ಲಿ 50 ಜನ ಹಾಗೂ ಅಂತ್ಯ ಕ್ರಿಯೆಯಲ್ಲಿ 20 ಜನ ಮಾತ್ರ ಬಾಗವಹಿಸಬಹುದು. ಆದರೆ ಇವೆಲ್ಲದಕ್ಕೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಮಾಸ್ಕ್ ಧರಿಸುವಿಕೆ ಕಡ್ಡಾಯವಾಗಿದೆ ಎಂದು ಸಂಕ್ಷಿಪ್ತ ಮಾಹಿತಿ ನೀಡಿದರು.

ಬ್ಯೂರೋ ರಿಪೋರ್ಟ್, ವಿಸ್ಮಯ ನ್ಯೂಸ್

Back to top button