vismaya jagattu

ಕನ್ನಡದ ಈ ಪುಸ್ತಕದಲ್ಲಿದೆ ಕರೊನಾ ರಹಸ್ಯ

ವಿಶ್ವಾದ್ಯಂತ ಸದ್ದುಮಾಡುತ್ತಿರುವ ಕರೊನಾ ವೈರಸ್ ಹೋಲುವ ರೋಗ ಈ ಮೊದಲೇ ಇತ್ತಾ? ಇಂಥದೊಂದು ಚರ್ಚೆ ಈಗ ಆರಂಭವಾಗಿದೆ.. ಹೌದು, ಸುಮಾರು ಅರ್ಧ ಶತಮಾನದ ಹಿಂದೆಯೇ ಅಂದರೆ 1972ರಲ್ಲಿ ಪ್ರಕಟವಾಗಿರುವ ‘ಜ್ವರ ಚಿಕಿತ್ಸೆ’ ಎಂಬ ಪುಸ್ತಕದಲ್ಲಿ ಕೊರೊನಾ ವೈರಸ್ ಹೋಲಿಕೆಯ ಕಂಠರೋಹಿಣಿ ಜ್ವರದ ಲಕ್ಷಣಗಳನ್ನು ವಿವರಿಸಲಾಗಿದೆ. ಅತ್ಯಂತ ಆಶ್ಚರ್ಯಕರ ಎಂಬಂತೆ ಯುರೋಪಿನ ರಾಷ್ಟ್ರಗಳಲ್ಲಿ ರೋಗ ತೀವ್ರತೆ ಹೆಚ್ಚಾಗಿರುತ್ತದೆ ಎಂದೂ ಈ ಪುಸ್ತಕದಲ್ಲಿ ಉಲ್ಲೇಖಗಳು ದೊರೆತಿವೆ. 1972ರಲ್ಲಿ ಡಾ. ಸ್ವಾಮಿ ಚಂದ್ರಶೇಖರ ಶಾಸ್ತ್ರಿಗಳು ಶಾಸ್ತ್ರಿಮಠ ಎಂಬ ವೈದ್ಯರು ತಮ್ಮ “ಜ್ವರ ಚಿಕಿತ್ಸೆ” ಪುಸ್ತಕದಲ್ಲಿ ವಿವರಿಸಿದ್ದಾರೆ. ಇವು ಬಹುತೇಕ ಕಂಠದ ತ್ವಚೆಯ ಮೇಲೆ ಪರಿಣಾಮವನ್ನುಂಟು ಬೀರುವುದರಿಂದ ಇದಕ್ಕೆ ಕಂಠರೋಹಿಣಿ ಜ್ವರ ಎಂದು ಹೆಸರಿಟ್ಟಿದ್ದಾರೆ. ವಿಶೇಷ ಅಂದ್ರೆ, ಕೊರೊನಾ ವೈರಸ್ ಬಾವಲಿಗಳಿಂದ ಮನುಷ್ಯರಿಗೆ ಹರಡಿದೆ ಎಂದು ಅಧ್ಯಯನಗಳು ಹೇಳಿವೆ. ಹಾಗೆಯೆ ಕಂಠರೋಹಿಣಿ ಜ್ವರ ಕೂಡ ಪ್ರಾಣಿ, ಪಕ್ಷಿಗಳಿಂದ ಹರಡುತ್ತಿತ್ತು ಎಂದು ಶಾಸ್ತ್ರಿಗಳು ವಿವರಿಸಿದ್ದಾರೆ. ಇನ್ನು ಕಂಠರೋಹಿಣಿ ಜ್ವರದ ರೋಗಲಕ್ಷಣಗಳು ಕೂಡ ಕೊರೊನಾ ವೈರಸ್ ರೋಗಲಕ್ಷಣಗಳಂತೆಯೆ ಇವೆ. ಪುಸ್ತಕದಲ್ಲಿ ತಿಳಿಸಿರುವಂತೆ, ಆರಂಭದಲ್ಲಿ ಮೈಯು ಬಿಸಿಯಾಗುತ್ತದೆ. ದೇಹವು ಜಡವೆನಿಸುತ್ತದೆ. ಮೂರನೆ ದಿನ ಗಂಟಲು ನೋಯುತ್ತದೆ. ಕಂಠದ ಸ್ನಾಯುಗಳು ಮುದುಡುತ್ತವೆ. ಗಂಟಲದ ಒಳಗಂಟಲ ಹುಣ್ಣಾಗುತ್ತದೆ. ಬೇನೆ ಹೆಚ್ಚುತ್ತದೆ. ಅನ್ನನಳಿ, ಬಾಯಿ ಮೂಗು ಇತ್ಯಾದಿ ಸಪ್ತಪಥಗಳ ಭಾಗವೆಲ್ಲ ಹೆಚ್ಚು ಘಾಸಿಗೊಳ್ಳುತ್ತದೆ. ಉಸಿರಾಟವು ಕಷ್ಟಕರವೆನಿಸುತ್ತದೆ ಎಂದು ಶಾಸ್ತ್ರಿಗಳು ಉಲ್ಲೇಖಿಸಿದ್ದಾರೆ. ಕಂಠರೋಹಿಣಿ ಜ್ವರಕ್ಕೆ ಚಿಕಿತ್ಸೆಯನ್ನೂ ವಿವರಿಸಿದ್ದು, ಆದ್ರೆ, ಆ ಭಾಗವು ಲಭ್ಯವಾಗಿಲ್ಲ. ಒಟ್ನಲ್ಲಿ ಕಂಠರೋಹಿಣಿ ಜ್ವರಕ್ಕೂ, ಕರೊನಾ ಸೋಂಕಿಗೂ ಸುಮಾರು ಹೋಲಿಕೆಗಳಿರುವುದಂತೂ ನಿಜ.. ಇದು ತುಂಬಾ ಹಳೆಯ ಪುಸ್ತಕವಾಗಿದ್ದು, ಕೆಲ ಭಾಗವಷ್ಟೆ ದೊರೆತಿದೆ. ಈ ಜ್ವರಕ್ಕೆ ಚಿಕಿತ್ಸೆಯನ್ನೂ ವಿವರಿಸಿದ್ದು, ಆ ಭಾಗ ಮಾತ್ರ ಲಭ್ಯವಾಗಿಲ್ಲ.. ಒಂದಾನು ವೇಳೆ ಕಂಠರೋಹಿಣಿ ಜ್ವರಕ್ಕೆ ವಿವರಿಸಿದ ಭಾಗಗಳು ದೊರತರೆ, ಕೊರನಾ ಸೋಂಕಿಗೂ ಔಷಧಿ ಕುಂಡುಹಿಡಿಯುವುದರಲ್ಲಿ ನೆರವಾಗಬಹುದು ಎಂಬ ಮಾತುಗಳು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತಿವೆ..

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button