Uttara Kannada
Trending

ಕುಮಟಾಕ್ಕೆ ಕರೊನಾ ಯಾರಿಂದ ಬಂತು?ಹೇಗೆ ಬಂತು ಸುಳ್ಳು ಸುದ್ದಿ ಏನು? ವಾಸ್ತವ ಏನು?

ಕುಮಟಾ: ಕಳೆದ 2 ದಿನದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಯಾವುದೆ ಹೊಸ ಕರೋನಾ ಪ್ರಕರಣಗಳು ದಾಖಲಾಗದೆ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆಯು ಸ್ವಲ್ಪ ನಿರಾಳರಾಗಿದ್ದರು. ಆದರೆ ಇಂದು ಜಿಲ್ಲೆಯಲ್ಲಿ ಎರಡು ಹೊಸ ಪ್ರಕರಣ ಪತ್ತೆಯಾಗಿದೆ. ಭಟ್ಕಳದ 2 ವರ್ಷದ ಮಗುವಿಗೆ ಹಾಗೂ ಕುಮಟಾದ ವನ್ನಳ್ಳಿ ಮೂಲದ 26 ವರ್ಷದ ಯುವಕನಿಗೆ ಕರೋನಾ ಸೋಂಕು ದೃಡಪಟ್ಟಿರುವುದು ಖಚಿತವಾಗಿದೆ. ಇದೂವರೆಗೂ ಒಂದೆ ಒಂದು ಕರೋನಾ ಪ್ರಕರಣ ಇಲ್ಲದ ಕುಮಟಾ ತಾಲೂಕಿನಲ್ಲಿ ಇಂದು ಹೊಸದಾಗಿ ವನ್ನಳ್ಳಿ ಮೂಲದ 26 ವರ್ಷದ ಯುವಕನಿಗೆ ಕರೋನಾ ವೈರಸ್ ದೃಡಪಟ್ಟಿರುವುದು ತಿಳಿಯುತ್ತಿದ್ದಂತೆ ಸಾರ್ವಜನಿಕರು ಕಂಗಾಲಾಗಿದ್ದಾರೆ. ಮೇ 5 ರಂದು ಮಹಾರಾಷ್ಟ್ರದ ರತ್ನಗಿರಿಯಿಂದ ಕುಮಟಾಕ್ಕೆ ವಾಪಾಸ್ಸಾಗುತ್ತಿರುವ ವನ್ನಳ್ಳಿ ಮೂಲದ ವ್ಯಕ್ತಿಯನ್ನು, ಹೀರೆಗುತ್ತಿ ಚೆಕ್‍ಪೋಸ್ಟ್ ಬಳಿ ತಪಾಸಣೆಮಾಡಿ, ನೇರವಾಗಿ ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನಲ್ಲಿ ಕ್ವಾಟಂಟೈನ್ ಮಾಡಲಾಗಿತ್ತು. ವ್ಯಕ್ತಿಯ ಗಂಟಲು ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದ್ದು ಈದಿಗ ವರದಿ ಪಾಸಿಟಿವ್ ಎಂದು ಬಂದಿದೆ. ಆದರೆ ಸಾರ್ವಜನಿಕರು ಗಾಳಿ ಮಾತಿಗೆ ಕಿವಿ ಕೊಡುವ ಅವಶ್ಯಕತೆಯಿಲ್ಲ. ಕುಮಟಾ ತಾಲೂಕಿನ ವನ್ನಳ್ಳಿಯ ಕರೋನಾ ಸೋಂಕಿತ ವ್ಯಕ್ತಿ ಇದುವರೆಗೆ ಯಾರ ಸಂಪರ್ಕಕ್ಕೂ ಬಂದಿಲ್ಲವಾಗಿದ್ದು, ಕುಮಟಾ ಜನತೆಯೂ ಯಾವುದೆ ರೀತಿಯ ಬಯ ಪಡುವ ಅವಶ್ಯಕತೆಯಿಲ್ಲ ಎಂದು ಜಿಲ್ಲಾಧಿಕಾರಿಗಳಾದ ಹರೀಶಕುಮಾರ್ ಕೆ. ಯವರು ಕುಮಟಾ ಸಹಾಯಕ ಆಯುಕ್ತರ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಕುಮಟಾದವರಿಂದಲೆ ಕರೋನಾ ಸೋಂಕು ಬಂದಿದೆ ಎಂದು ಕೆಲ ಸಾರ್ವಜನಿಕರಲ್ಲಿ ಗೊಂದಲಗಳಿವೆ, ಕುಮಟಾದ ವ್ಯಕ್ತಿಯು ಜೀವನ ನಿರ್ವಣೆಗಾಗಿ ಮಹರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಮನೆಗೆ ಬರಬೆಕೆಂದು ಮಹರಾಷ್ಟ್ರದಿಂದ ಬಂದಿದ್ದಾರೆ. ಬರುವ ಮಾರ್ಗದಲ್ಲಿ ಚಕ್‍ಪೋಸ್ಟ್‍ನಲ್ಲಿ ತಪಾಸಣೆ ಮಾಡಿ, ಮಹರಾಷ್ಟ್ರದ ರತ್ನಗಿರಿಯಿಂದ ಬಂದಿರುವದನ್ನ ಖಾತ್ರಿಪಡಿಸಿಕೊಂಡು ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನಲ್ಲಿ ಕ್ವಾಟಂಟೈನ್‍ಗೆ ಇರಿಸಲಾಗಿದೆ. ಈ ವ್ಯಕ್ತಿಯು ಕುಮಟಾ ತಾಲೂಕಿನ ಯಾರೋಬ್ಬರೊಂದಿಗೂ ಸಂಪರ್ಕ ಹೋಂದಿಲ್ಲವಾಗಿದೆ. ಇತನೊಟ್ಟಿಗೆ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನಲ್ಲಿ ಕ್ವಾರಂಟೈನಲ್ಲಿದ್ದವರ ಗಂಟಲು ದ್ರವ ಮಾದರಿಯನ್ನು ಸಹ ಪರಿಕ್ಷೆಗೆ ಕಳುಹಿಸಲಾಗುವುದು, ಈತನನ್ನು ಚಿಕಿತ್ಸೆಗಾಗಿ ಕಾರವಾರದ ಮೇಡಿಕಲ್ ಕಾಲೇಜಿಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಕುಮಟಾ ವನ್ನಳ್ಳಿ ಮೂಲದ 26 ವರ್ಷದ ಯುವಕನಿಗೆ ಕರೋನಾ ಸೋಂಕು ದೃಡಪಟ್ಟಿರುವ ಹಿನ್ನೆಲೆಯಲ್ಲಿ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಕ್ವಾರಂಟೈನ್ ಪ್ರದೇಶವನ್ನು ಕಂಟೆನ್ಮೆಂಟ್ ಜೋನ್ ಎಂದು ಘೋಷಿಸಗಾಗುವುದು. ಅದನ್ನ ಹೊರತುಪಡಿಸಿ ಪಟ್ಟಣ ಪ್ರದೇಶ ಮುಂತಾದ ಬಾಗಗಳಲ್ಲಿ ಲಾಕ್‍ಡೌನ್ ಈಗಿರುವಂತೆಯೆ ಇರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕುಮಟಾ ಸಹಾಯಕ ಆಯುಕ್ತರಾದ ಅಜೀತ್ ಎಮ್, ತಹಶೀಲ್ದಾರ ಮೇಘರಾಜ ನಾಯ್ಕ, ತಾಲೂಕಾ ಆರೋಗ್ಯಾಧಿಕಾರಿಗಳಾದ ಆಜ್ಞಾನಾಯ್ಕ ಮುಂತಾದವರು ಇದ್ದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ

Back to top button