Follow Us On

WhatsApp Group
Info
Trending

ಕನ್ನಡದ ತೇರನ್ನೆಳೆಯಲು ಅವಕಾಶ ಮಾಡಿಕೊಡಿ: ಸಾಹಿತಿ ಬಿ ಎನ್ ವಾಸರೆ

ಕಾರವಾರ: ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಮೇ 9, 2021 ರಂದು ನಡೆಯಲಿದೆ. ಈ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಸ್ಪರ್ದಾಕಾಂಕ್ಷಿಯಾಗಿ ಸಾಹಿತಿ ಬಿ,ಎನ್ ವಾಸರೆ ಅವರು ನಾಮಪತ್ರ ಸಲ್ಲಿಸಿದ್ದಾರೆ. ಇಂದು ಕಾರವಾರ ತಹಶೀಲ್ದಾರ ಕಾರ್ಯಾಲಯದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಲ್ಲಿ ನಾಮಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು 2016 ರಲ್ಲಿ ನಡೆದಿದ್ದ ಕಸಾಪ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದ ನಾನು ಕೇವಲ ಏಳು ಮತಗಳ ಅಂತರದಲ್ಲಿ ಪರಾಭವಗೊಡಿದ್ದೆ. ಆ ಸಂದರ್ಭದಲ್ಲಿ ಜಿಲ್ಲೆಯ ಕಸಾಪ ಆಜೀವ ಸದಸ್ಯರುಗಳು ನನಗೆ ತೋರಿದ ಪ್ರೀತಿ, ಪ್ರೋತ್ಸಾಹ, ಬೆಂಬಲಗಳನ್ನು ನಾನೆಂದಿಗೂ ಮರೆತಿಲ್ಲ. ಆ ಪಲಿತಾಂಶ ಸಾಹಿತ್ಯಕವಾಗಿ, ಬೌದ್ಧಿಕವಾಗಿ, ಸಂಘಟನಾತ್ಮಕವಾಗಿ ಮತ್ತಷ್ಟು ಆನುಭವಗಳನ್ನು ನೀಡಿದೆ. ನಿರಂತರ ಕಾರ್ಯಕ್ರಮ ನನ್ನ ಸಂಘಟನೆಯ ವಿಶ್ವಾಸವನ್ನು ಹೆಚ್ಚಿಸಿದೆ. ಅದೇ ನನಗೆ ಇಂದಿಗೂ ಸ್ಫೂರ್ತಿ. ಅದೇ ಉತ್ಸಾಹದಲ್ಲಿ ಇದೀಗ ಮತ್ತೊಮ್ಮೆ ಕಸಾಪ ಚುನಾವಣಾ ಕಣದಲ್ಲಿದ್ದೇನೆ ಎಂದು ಹೇಳಿದರು.

ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿರುವ ನಾನು ನನ್ನ ವೃತ್ತಿಯ ಜೊತೆಗೆ ಬರವಣಿಗೆ, ನಾಡು-ನುಡಿಯ ಸಂಘಟನೆ, ಹೋರಾಟಗಳಲ್ಲಿ ತೊಡಗಿಸಿಕೊಂಡು ಬಂದವನು, ಹಳಿಯಾಳ ತಾಲೂಕಾ ಕಸಾಪ ಅಧ್ಯಕ್ಷನಾಗಿ ಎರಡು ಅವಧಿಗೆ ಕಾರ್ಯನಿರ್ವಹಿಸಿ, ಆ ಸಮಯದಲ್ಲಿ ಎಲ್ಲರ ಸಹಕಾರದಲ್ಲಿ ಸಂಘಟಿಸಿದ್ದ ಹಲವು ಹಲವು ತಾಲೂಕು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳು ಸೇರಿದಂತೆ ಇನ್ನಿತರೆ ಸ್ಥಳೀಯ ಹಾಗೂ ರಾಜ್ಯಮಟ್ಟದ ಅನೇಕ ಕಾರ್ಯಕ್ರಮಗಳ ಪರಿಣಾಮಕಾರಿ ಸಂಘಟನೆಗಳನ್ನು ಈಗಲೂ ಮೆಲಕು ಹಾಕುತ್ತಾರೆ ಎಂದು ಅವರು ತಿಳಿಸಿದರು.

ತದ ನಂತರವೂ ಸಹ ನಮ್ಮದೇ ಆದ ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಹಾಗೂ ಒಡನಾಡಿ ಸಂಘಟನೆಯ ಮೂಲಕ ಹಲವಾರು ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಹಿತ್ಯದ ಅಭಿರುಚಿಯನ್ನು ಹೆಚ್ಚಿಸಿದ್ದೇನೆ. ಜೊತೆಗೆ ಹಲವಾರು ಸಾಂಸಕೃತಿಕ ಹಾಗೂ ಜನಪರ ಸಂಘಟನೆಗಳಲ್ಲಿಯೂ ಪದಾಧಿಕಾರಿಯಾಗಿರುವ ನಾನು ಅವುಗಳ ಕಾರ್ಯಕ್ರಮ ಸಂಘಟನೆಯಲ್ಲಿಯೂ ಸಕ್ರೀಯನಾಗಿದ್ದೇನೆ. ಜಾತಿ, ಧರ್ಮ, ಲಿಂಗ ಮತ್ತು ಪ್ರಾದೇಶಿಕ ತಾರತಮ್ಯವನ್ನೂ ಮೀರಿ ಯೋಚಿಸುವುದರಿಂದ ಸಂಘಟನೆಯ ಸಮತೋಲನವನ್ನು ಕಾದುಕೊಳ್ಳಲು ಸಾದ್ಯವೆಂಬುವುದನ್ನು ನಾನು ಈಗಾಗಲೇ ಕಂಡುಕೊoಡಿದ್ದೇನೆ. ಸರ್ವರನ್ನೂ ಪ್ರೀತಿಸಿ, ವಿಶ್ವಾಸದ ತೆಕ್ಕೆಗೆ ಸೇರಿಸಿಕೊಂಡು ಕನ್ನಡದ ತೇರನ್ನು ಎಳೆಯಬೇಕೆಂಬುದು ನನ್ನ ಗಟ್ಟಿಯಾದ ನಿಲುವಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರಾಮಾಣಿಕ ದುಡಿಮೆ, ಪಾರದರ್ಶಕ ಆಡಳಿತ, ಪ್ರಾದೇಶಿಕ ಸಮಾನತೆ, ಸಾಮಾಜಿಕ ನ್ಯಾಯದ ಜೊತೆಗೆ ಸಾಹಿತ್ಯ ಪರಿಷತ್ತು ಜಾತಿ ಮುಕ್ತವಾಗಿರಬೇಕು. ದ್ವೇಶ ಮುಕ್ತವಾಗಿರಬೇಕು, ಹಣಕಾಸಿನ ವ್ಯವಹಾರದಲ್ಲಿ ಶುದ್ಧ ಹಸ್ತವಾಗಿರಬೇಕು ಎಂಬುದು ನನ್ನ నిలుವಾಗಿದೆ. ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತನ್ನು ಮಾದರಿ ಪರಿಷತ್ತನ್ನಾಗಿ ರೂಪಿಸುವ ನಿಟ್ಟಿನಲ್ಲಿ ರಚನಾತ್ಮಕ ಯೋಜನೆಗಳನ್ನಿಟ್ಟುಕೊಂಡು, ಹಲವಾರು ಮುನ್ನೋಟಗಳನ್ನಿಟ್ಟುಕೊಂಡು ಸ್ಪರ್ಧೆಯಲ್ಲಿದ್ದೇನೆ, ಸಹೃದಯಿ ಕಸಾಪ ಸದಸ್ಯರುಗಳು ನನಗೆ ಮತಗಳನ್ನು ನೀಡುವ ಮೂಲಕ ಈ ಜಿಲ್ಲೆಯ ಸಾಹಿತ್ಯ ಪರಿಷತ್ತು ಎಂಬ ಕನ್ನಡದ ತೇರನ್ನೆಳೆಯಲು ಅವಕಾಶ ಮಾಡಿಕೊಡಬೇಕೆಂದು ತಮ್ಮೆಲ್ಲ ಮಾಧ್ಯಮದ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು.

ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ರಾಮಾ ನಾಯ್ಕ, ಕಾರವಾರ, ಯು.ಎಸ್. ಪಾಟೀಲ, ದಾಂಡೇಲಿ, ಬೀರಣ್ಣ ನಾಯಕ, ಮೊಗಟಾ, ಅನು ಕಳಸ, ಕಾರವಾರ , ಅಲ್ತಾಪ ಶೇಖ, ಕಾರವಾರ, ಯಶವಂತ ನಾಯ್ಕ, ಜೊಯಿಡಾ, ರಾಧಾಕೃಷ್ಣ ಹೆಗಡೆ, ದಾಂಡೇಲಿ, ಜಲಜಾ ಬಿ. ವಾಸರೆ , ದಾಂಡೇಲಿ, ಬಾಬು ಶೇಖ, ಕಾರವಾರ ಇದ್ದರು.

ವಿಸ್ಮಯ ನ್ಯೂಸ್, ಕಾರವಾರ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

Back to top button