ಅಂಕೋಲಾ: ನಾನಾ ಕಾರಣಗಳಿಂದ ವಿವಿಧ ರಾಜಕಾರಣಿಗಳ ಕಟೌಟ್ ನಿಲ್ಲಿಸುವುದು, ಪ್ಲೆಕ್ಸ್ _ಬ್ಯಾನರ್ ಅಳವಡಿಸಿ ಪ್ರಚಾರ ನೀಡುವ ಪರಿ ದೇಶದೆಲ್ಲೆಡೆ ಬಹುತೇಕ ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ಗುತ್ತಿಗೆದಾರ ಭೂಪ ಅಥವಾ ಅವನ ಸಹಾಯಕರು ಮಾಡಿರಬಹುದಾದ ಯಡವಟ್ಟಿಗೆ ಪೋಲೀಸ್ ಪ್ರಕರಣ ದಾಖಲಾಗುವಂತಾಗಿದೆ.
ಶಾಸಕಿ ರೂಪಾಲಿ ನಾಯ್ಕ ಎಪ್ರಿಲ್ 6ರಂದು ಪುರಸಭೆ ವ್ಯಾಪ್ತಿಯ ಕಣಕಣೇಶ್ವರ ದೇವಸ್ಥಾನದ ಬಳಿ 2 ಕೋಟಿ ವೆಚ್ಚದ ರಸ್ತೆ ಹಾಗೂ ಸೇತುವೆ ಅಭಿವೃದ್ಧಿ ಕಾಮಗಾರಿಗೆ ಪುರಸಭೆಯ ಇತರೆ ಪ್ರಮುಖ ಜನ ಪ್ರತಿನಿದಿಗಳೊಂದಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಈ ವೇಳೆ ಸಭಾ ಕಾರ್ಯಕ್ರಮದ ವೇದಿಕೆ, ಗುದ್ದಲಿ ಪೂಜೆ ನಡೆಸುವ ಸ್ಥಳದ ಪಕ್ಕ, ಹಾಗೂ ಕಾರವಾರ ಕಡೆಯಿಂದ ಅಂಕೋಲಾ ಪಟ್ಟಣ ಸೇರುವ ಮುಖ್ಯ ರಸ್ತೆಗೆ ಹೊಂದಿಕೊಂಡ ಸ್ವಾಗತ ಕಮಾನಿನ ಬಳಿ ಕಾಮಗಾರಿಗೆ ಸ್ವಾಗತ ಕೋರುವ ರೀತಿಯಲ್ಲಿ ವಿವಿಧ ಪ್ಲೆಕ್ಸ್ ಬ್ಯಾನರ್ ಅಳವಡಿಸಿ ಶಾಸಕಿಯ ಪೋಟೋ ಮುದ್ರಿಸಲಾಗಿತ್ತು.
ಅಂದಗೆಟ್ಟ ರಸ್ತೆಗೆ ಹೊಸ ರೂಪ : ಕೆಲ ವರ್ಷಗಳಿಂದ ಅಭಿವೃದ್ಧಿ ಕಾಣದೇ ಹೊಂಡ ತಗ್ಗುಗಳೇ ರಸ್ತೆ ಎಂದು ಭಾಸವಾಗುವಷ್ಟರ ಮಟ್ಟಿಗೆ ಅಂದಗೆಟ್ಟ ಅಂಕೋಲಾ ಪಟ್ಟಣದ ಮುಖ್ಯರಸ್ತೆಗೆ ಹೊಸ ರೂಪ ಕೊಡಲು ಸತತವಾಗಿ ಪ್ರಯತ್ನಿಸಿ, ಕಾಮಗಾರಿಗೆ ಹಣ ಮಂಜೂರಿ ಮಾಡಿಸಿದ ಶಾಸಕಿ ರೂಪಾಲಿ ನಾಯ್ಕ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬಂದಿದ್ದವು.ಆದರೆ ಅದರ ಪರಿವೆಯೇ ಇಲ್ಲದ ಗುತ್ತಿಗೆದಾರ(ಟೆಂಡರ್ ಪಡೆದ ಗುತ್ತಿಗೆದಾರನ ಬದಲಿಗೆ ಹಾಜರಿದ್ದ ಎನ್ನಲಾದವ ) ಅಥವಾ ಅವನ ಸಹಾಯಕರು ಕೆಲವೇ ಕ್ಷಣದಲ್ಲಿ ಬ್ಯಾನರ್ ತೆರವುಗೊಳಿಸಲು ಮುಂದಾಗಿದ್ದರು.
ಅವರು ತೋರಿದ ಅತಿ – ಆತುರತೆಯಿಂದ ಶಾಸಕಿ ಭಾವಚಿತ್ರವುಳ್ಳ ಬ್ಯಾನರ್ ಹರಿದು ಹೊಗುವoತಾಗಿದ್ದು, ಅದು ಶಾಸಕಿಯವರ ಅಭಿಮಾನಿಗಳ ಹಾಗೂ ಆಪ್ತರ ಗಮನಕ್ಕೆ ಬಂದಿದೆ. ಈ ಕುರಿತು ಅವರು ಪ್ರಶ್ನಿಸಿದ್ದಕ್ಕೆ ಗುತ್ತಿಗೆದಾರನ ಕಡೆಯವರು ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಟ್ – ಔಟ್ ರಾಜಕಾರಣ: ನೆರೆ ಸಂತ್ರಸ್ತರಿಗೆ ನೆರವು ನೀಡಿದ್ದಾರೆ ಇತ್ಯಾದಿ ಕಾರಣಗಳಿಂದ ಶಾಸಕರಿಗೆ ಹತ್ತಿರವಾಗಿದ್ದ ಎನ್ನಲಾಗಿದ್ದ ಕೋಗ್ರೆ ಸಿಂಗನಮಕ್ಕಿ ವ್ಯಾಪ್ತಿಯ ಗುತ್ತಿಗೆದಾರ ಪ್ರಶಾಂತ ನಾಯಕ, ಅರಿತೋ ಅಥವಾ ಅಸಡ್ಡೆಯಿಂದಲೋ ತನ್ನ ಸಹಾಯಕರ ಮೂಲಕ ಕಟೌಟ್ ತೆರವು ಗೊಳಿಸಲು ಮುಂದಾಗಿ ಈಗ ವಿವಾದದಲ್ಲಿ ಸಿಲುಕಿ ಕೊಳ್ಳುವಂತಾಗಿದೆ.
ಈ ಮೂಲಕ ಶಾಸಕರೊಂದಿಗೆ ತಾನು ಈ ಮೊದಲು ಹೊಂದಿದ್ದ ಆತ್ಮೀಯತೆಯೂ ಕಟ್ ಆಗಿ ಅವರ ಆಪ್ತ ವಲಯದಿಂದಲೂ ಔಟ್ ಆಗುವಂತಾಯಿತು ಎಂಬ ಮಾತು ಕೇಳಿ ಬರುತ್ತಿದೆ. ಘಟನೆ ನಡೆದ ನಂತರ ವಾದರೂ, ಈ ಕುರಿತು ಸಂಬಂಧಿಸಿದವರಲ್ಲಿ ಮಾತುಕತೆ ನಡೆಸಿ ನಡೆದ ಅಚಾತುರ್ಯ ಸರಿಪಡಿಸಿಕೊಳ್ಳದೇ ಕಟೌಟ್ ರಾಜಕಾರಣದಲ್ಲಿ ಹಿಟ್ ಔಟ್ ಆದರೇ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಶಾಸಕರ ಭಾವಚಿತ್ರವುಳ್ಳ ಬ್ಯಾನರ್ ಹರಿದು ತೆರವುಗೊಳಿಸುವುದನ್ನು ಕಂಡು, ಗುತ್ತಿಗೆದಾರ ಮತ್ತು ಸಹಾಯಕರನ್ನು ಪ್ರಶ್ನಿಸಿದ್ದಕ್ಕೆ ತಮಗೆ ಅವಾಚ್ಯ ಶಬ್ದಬಳಸಿ ನಿಂದಿಸಿದ ಕುರಿತು ಬೇಳಾ ಬಂದರ ನಿವಾಸಿ ಸುರೇಶ್ ಕೆ ನಾಯ್ಕ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ವಿಸ್ಮಯ ನ್ಯೂಸ್, ವಿಲಾಸ ನಾಯಕ ಅಂಕೋಲಾ
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888…