ಅಂಕೋಲಾ: ತಾನು ಕರ್ತವ್ಯ ನಿರ್ವಹಿಸಿದ ಎಲ್ಲಾ ಕಡೆ ತನ್ನ ಮಾನವೀಯತೆಯ ಮೂಲಕವು ಹೆಸರು ಗಳಿಸಿರುವ ಯುವ ಪೋಲೀಸ್ ಅಧಿಕಾರಿ ಪಿ. ಎಸೈ ಸಂಪತ್ (ಎಪ್ರಿಲ್ 10 – 1983) ತಮ್ಮ 38 ನೇ ಜನ್ಮದಿನವನ್ನು ಅಶ್ರಮವಾಸಿಗಳ ನಡುವೆ ಅರ್ಥ ಪೂರ್ಣವಾಗಿ ಆಚರಿಸಿಕೊಂಡರು.
ಪಟ್ಟಣ ವ್ಯಾಪ್ತಿಯ ಅಜ್ಜಿಕಟ್ಟಾದ ಕ್ರಿಸ್ತ ಮಿತ್ರ ಅಶ್ರಯದಲ್ಲಿ ಶನಿವಾರ ಸರಳವಾಗಿ ಕಾರ್ಯಕ್ರಮ ಆಯೋಜಿಸಿ ಕೇಕ್ ಕತ್ತರಿಸಿ, ಸಿಹಿ ಹಂಚಲಾಯಿತು. ಕಿರಿಯ ಅಧಿಕಾರಿಗೆ ಶುಭ ಕೋರಿದ ತಾಲೂಕಾ ದಂಡಾಧಿಕಾರಿ ಮತ್ತು ತಹಶೀಲ್ದಾರ ಉದಯ ಕುಂಬಾರ, ನಾನಾ ಕಾರಣಗಳಿಂದ ಮನೆ- ಕುಟುಂಬ ತೊರೆದು ಇಲ್ಲಿ ಬಂದು ನೆಲೆಸಿರುವ ಎಲ್ಲಾ ಅಶ್ರಮವಾಸಿಗಳಿಗೆ 2 ದಿನಗಳಲ್ಲಿ ಆಧಾರ ಕಾರ್ಡ್ ನೀಡುವ ಜೊತೆ, ಅರ್ಹರಿಗೆ ಸರ್ಕಾರದ ವೃದ್ಧಾಪ್ಯ ಪಿಂಚಣಿ ಮತ್ತಿತರ ಸೌಲಭ್ಯ ಒದಗಿಸಿ ಕೊಡುವ ಭರವಸೆ ನೀಡಿ, ತಾನು ಇಲ್ಲಿ ಸೇವೆ ಸಲ್ಲಿಸಲು ಬಂದು 1 ವರ್ಷ ಆಗಿದೆ ಎಂದು ಹೇಳಿದರು.
ಸಿ. ಪಿ.ಐ ಕೃಷ್ಣಾನಂದ ನಾಯ್ಕ ಮಾತನಾಡಿ, ಕಳೆದ ವರ್ಷವೂ ವೃದ್ಧರು ಮತ್ತು ಅಸಹಾಯಕರ ನಡುವೆ ಇಲ್ಲಿಯೇ ಬರ್ತಡೇ ಆಚರಿಸಿಕೊಂಡಿದ್ದ ಸಂಪತ್ ತನ್ನ ಹುದ್ದೆಯಲ್ಲಿ ಬೇಗನೆ ಪದೋನ್ನತಿ ಹೊಂದಲಿ ಮತ್ತು ಅವರ ಕುಟುಂಬ ಸದಾ ನೆಮ್ಮದಿ ಇಂದ ಇರಲೆಂದು ಶುಭ ಹಾರೈಸಿದರು. ಕ್ರಿಸ್ತ ಮಿತ್ರ ಆಶ್ರಮದ ಫಾದರ ಫರ್ನಾಂಡಿಸ್ ಮಾತನಾಡಿ, ತಮ್ಮ ಆಶ್ರಮವಾಸಿಗಳ ನಡುವೆ ಉತ್ತಮ ಕಾರ್ಯ ಕೈಗೊಂಡ ಅಧಿಕಾರಿ ಹಾಗೂ ಮಿತ್ರವೃಂದದ ಸೇವೆ ಶ್ಲಾಘಿಸಿದರು. ಪಿ ಎ ಸೈ ಪ್ರೇಮನ ಗೌಡ ಪಾಟೀಲ್, ಉದ್ಯಮಿ ಮತೀನ್ ಶೇಖ್, ಆಶ್ರಮದ ಮೇಲ್ವಿಚಾರಕ ಬಾಬಣ್ಣ ಉಪಸ್ಥಿತರಿದ್ದರು.
ರಾಘು ಕಾಕರಮಠ. ಅರ್ಮಾನ್, ಅರುಣ ಶೆಟ್ಟಿ, ವಿದ್ಯಾದರ ಮೊರಬಾ, ಮೋಹನದಾಸ ಶೇಣ್ಪಿ, ಆಸೀಫ್ ಕುಂಕೂರ, ಇತರರು ಅಧಿಕಾರಿಗೆ ಪುಷ್ಪ ಗುಚ್ಚನೀಡಿ, ಜನ್ಮ ದಿನದ ಶುಭಾಶಯ ಕೋರಿದರು. ಸುಭಾಸ ಕಾರೇಬೈಲ್ ನಿರೂಪಿಸಿದರು.
ತನ್ನ ಹುಟ್ಟುಹಬ್ಬವನ್ನು ಅಶ್ರಮವಾಸಿಗಳ ನಡುವೆ ನಡೆಸುವುದು ಒಂದು ಸೌಭಾಗ್ಯ ಎಂದ ಪಿ.ಎಸೈ ಸಂಪತ್, ಸೇವಾ ಕಾರ್ಯಕ್ಕೆ ಕೈಜೋಡಿಸಿದ ಸರ್ವರನ್ನು ಸ್ಮರಿಸಿದರು. ನಂತರ ಅಶ್ರಮವಾಸಿಗಳಿಗೆ ಸಿಹಿ ವಿತರಿಸಿ, ಅನ್ನದಾನ ಮಾಡುವ ಮೂಲಕ ಮೋಲೀಸ್ ಅಧಿಕಾರಿಯ ಜನುಮ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..