Follow Us On

WhatsApp Group
Info
Trending

ಸಾಮಾಜಿಕ ಪರಿಶೋಧನೆಯಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪಾರದರ್ಶಕತೆ ಸಾಧ್ಯವಾಗಿದೆ – ಉಮೇಶ ಮುಂಡಳ್ಳಿ ಭಟ್ಕಳ

ಕುಮಟಾ- ಪಾರದರ್ಶಕತೆ ಉತ್ತರ ದಾಯಿತ್ವ ಸಾಧ್ಯವಾಗಿರುವ ಯೋಜನೆ ಎಂದರೆ ಅದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮಾತ್ರ. ಸಾಮಾಜಿಕ ಪರಿಶೋಧನೆ ಪ್ರತಿ ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಯುವುದರಿಂದ ಇದು ಸಾಧ್ಯವಾಗಿದೆ. ನಿಯಮ ಪಾಲಿಸಿದಲ್ಲಿ ಅತಿ ಹೆಚ್ಚು ಗ್ರಾಮೀಣ ಭಾಗದಲ್ಲಿ ಕಾಮಗಾರಿ ಕೈಗೊಳ್ಳಲು ಸಾಧ್ಯ ಎಂದು ಭಟ್ಕಳ ತಾಲೂಕು ಸೋಶಿಯಲ್ ಆಡಿಟರ್ ಉಮೇಶ ಮುಂಡಳ್ಳಿ ಹೇಳಿದರು. ಅವರು ಗುರುವಾರ ಕುಮಟ ತಾಲೂಕಿನ ಮೂರುರು ಪಂಚಾಯತ್ ಸಭಾ ಭವನದಲ್ಲಿ ನಡೆದ 2020-21ನೇ ಸಾಲಿನ ಎರಡನೇ ಹಂತದ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕನಿಷ್ಠ ಕೂಲಿಗೂ ಪರದಾಡುವಂತಹ ಅನೇಕ ಬಡ ಕುಟುಂಬ ಪ್ರತಿ ಊರಲ್ಲೂ ಇದ್ದೆ ಇರುವುದರಿಂದ ಅಂತಹ ಬಡಜನರನ್ನು ಯೋಜನೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವ ಅಗತ್ಯತೆ ಇದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮುಂಡಳ್ಳಿಯವರು ತಿಳಿಸಿದರು. ಜೊತೆಗೆ ಯೋಜನೆಯಲ್ಲಿ ಬರಬಹುದಾದ ಎಲ್ಲ ಕಾಮಗಾರಿಗಳ ಪರಿಚಯ ಮತ್ತು ಒದಗಿಸಬೇಕಾದ ದಾಖಲುಗಳ ಬಗ್ಗೆ ಸಭೆಯಲ್ಲಿ ಅವರು ತಿಳಿಸಿ ಹೇಳಿ, ಪರಿಶೋಧನಾ ವರದಿಯನ್ನು ಸಭೆಯಲ್ಲಿ ಮಂಡಿಸಿದರು.ಜೊತೆಗೆ 2018/19 ಹಾಗೂ 2019/20 ನೇ ಸಾಲಿನಲ್ಲಿ  14 ನೇ ಹಣಕಾಸು ಯೋಜನೆಯಲ್ಲಿ ನಡೆಸಿದಂತ ಕಾಮಗಾರಿಗಳ ಕುರಿತು ನಡೆಸಿದ ಪರಿಶೋಧನಾ ವರದಿಯನ್ನು ಸಭೆಯಲ್ಲಿ ಮಂಡಿಸಿದರು.

ಗ್ರಾಮ ಸಭೆ ಅಧ್ಯಕ್ಷತೆ ವಹಿಸಿದ್ದ ಅಕ್ಷರ ದಾಸೋಹ ಸ.ನಿರ್ದೇಶಕ ದೇವರಾಯ ನಾಯಕ ಮಾತನಾಡಿ ನರೇಗದಲ್ಲಿ ಸಿಗುವಷ್ಟು ಗರಿಷ್ಠ ಸೌಲಭ್ಯ ಬೇರೆ ಯಾವ ಯೋಜನೆ ಯಲ್ಲಿಯೂ ಸಿಗದ ಕಾರಣ ಗ್ರಾಮೀಣ ಭಾಗದ ಜನರು ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು. ಸಾಮಾಜಿಕ ಪರಿಶೋಧನೆ ಸಕಾಲದಲ್ಲಿ ನಡೆಯುವುದು ಯೋಜನೆಗೆ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.ಅಭಿವೃದ್ಧಿ ಅಧಿಕಾರಿ ಶ್ರೀಮತಿ ರಶ್ಮಿಕುಮಾರಿ ಪಿ. ಸ್ವಾಗತಿಸಿ ಪ್ರಸ್ತುತ ಅವದಿಯಲ್ಲಿ ಮಾಡಲಾದ ಕಾಮಗಾರಿಗಳನ್ನು ಓದಿದರು. ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷ ರಾಘವೇಂದ್ರ ನಾಯ್ಕ, ಉಪಾಧ್ಯಕ್ಷೆ ಮಾಲತಿ ನಾಯ್ಕ ಉಪಸ್ಥಿತರಿದ್ದರು.ಸಭೆಯಲ್ಲಿ ಗ್ರಾಪಂ ನೂತನ ಸದಸ್ಯರುಗಳು ಸ್ವ ಸಹಾಯ ಸಂಘದ ಮಹಿಳೆಯರು ಅಂಗವಾಡಿ ಮತ್ತುಆಶಾ ಕಾರ್ಯಕರ್ತೆಯರು ಗ್ರಾಮಸ್ಥರು ಹಾಜರಿದ್ದರು.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Back to top button