ಮುರ್ಡೇಶ್ವರದ ಮೀನುಗಾರನಿಗೆ ಸಿಕ್ತು ಕೋಟಿ ರೂಪಾಯಿ ಬೆಲೆಬಾಳುವ ತಿಮಿಂಗಿಲದ ವಾಂತಿ: ಮೀನುಗಾರ ಮಾಡಿದ್ದೇನು ನೋಡಿ? ಯಾಕೆ ಇದಕ್ಕೆ ಇಷ್ಟೊಂದು ಬೆಲೆ?
ಮುರುಡೇಶ್ವರ ಕಡಲತೀರದಲ್ಲಿ ಮೀನುಗಾರನಿಗೆ ಕೋಟ್ಯಾಂತರ ಬೆಲೆ ಬಾಳುವ ಅತ್ಯಂತ ವಿರಳವಾಗಿ ಸಿಗುವ ತಿಮಿಂಗಿಲದ ವಾಂತಿ ದೊರೆತಿದೆ. ಕಡಲತೀರಕ್ಕೆ ತೆರಳಿದಾಗ ವಸ್ತುವೊಂದು ಕಂಡಿದೆ. ಅದನ್ನು ತೀರಾ ಹತ್ತಿರದಿಂದ ಗಮನಿಸಿದಾಗ ಏನೋ ವಿಶೇಷ ವಸ್ತುವಿರಬೇಕು ಎಂದು ಆತನಿಗೆ ಅನಿಸಿದೆ.
ಮುರ್ಡೇಶ್ವರ: ತಿಮಿಂಗಿಲದ ವಾಂತಿಗೆ ಅತ್ಯಂತ ಬೇಡಿಕೆಯಿದೆ. ವಿದೇಶದಲ್ಲಿ ಕಡಲಿಗೆ ತೆರಳಿದೆ ವೇಳೆ, ಸಮುದ್ರ ತೀರಕ್ಕೆ ವಾಕಿಂಗ್ ಗೆ ತೆರಳಿದ ವೇಳೆ, ತಿಮಿಂಗಿಲದ ವಾಂತಿ ಸಿಕ್ಕಿ, ರಾತ್ರೋರೋತ್ರಿ ಕೋಟ್ಯಾಧೀಶರಾದವರು ಹಲವರಿದ್ದಾರೆ.
ನಮ್ಮ ದೇಶದಲ್ಲಿ ಈ ಅಪರೂಪದ ವಸ್ತು ಸಿಗುವುದು ವಿರಳಾತೀ ವಿರಳ ಅಂತಾನೇ ಹೇಳ್ಬೇಕು. ಆದರೆ, ಇದೀಗ ವಿಶ್ವಪ್ರಸಿದ್ಧ ಪ್ರವಾಸಿ ತಾಣದ ಮುರ್ಡೇಶ್ವರದ ಕಡಲತೀರದಲ್ಲಿ ಇಂತದೊoದು ವಸ್ತು ದೊರೆತಿರುವುದು ಚರ್ಚೆಗೆ ಗ್ರಾಸವಾಗಿದೆ.
ಇದೀಗ ಇಂಥ ಘಟನೆ ಮುರ್ಡೇಶ್ವರದ ಕಡಲತೀರದಲ್ಲಿ ನಡೆದಿದೆ. ಆದರೆ, ಇಲ್ಲೊಂದು ಸಣ್ಣ ಟ್ವಿಸ್ಟ್ ಇದೆ. ಕೋಟಿ ರೂಪಾಯಿ ಬೆಲೆ ಬಾಳುವ ಈ ಅಪರೂಪದ ವಸ್ತು ಸಿಕ್ಕರೂ ಮೀನುಗಾರ ಮಾತ್ರ ಶ್ರೀಮಂತನಾಗಿಲ್ಲ.! ಕೈಗೆ ಬಂದ ತುತ್ತು ಆತನಿಗೆ ಬಾಯಿಗೆ ಬಂದಿಲ್ಲ. ಇದಕ್ಕೆಲ್ಲ ಕಾರಣ ಏನು ಅಂತಾ ನೀವೇ ನೋಡಿ.
ಹೌದು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುರುಡೇಶ್ವರ ಕಡಲತೀರದಲ್ಲಿ ಮೀನುಗಾರನಿಗೆ ಕೋಟ್ಯಾಂತರ ಬೆಲೆ ಬಾಳುವ ಅತ್ಯಂತ ವಿರಳವಾಗಿ ಸಿಗುವ ತಿಮಿಂಗಿಲದ ವಾಂತಿ ದೊರೆತಿದೆ. ಕಡಲತೀರಕ್ಕೆ ತೆರಳಿದಾಗ ವಸ್ತುವೊಂದು ಕಂಡಿದೆ. ಅದನ್ನು ತೀರಾ ಹತ್ತಿರದಿಂದ ಗಮನಿಸಿದಾಗ ಏನೋ ವಿಶೇಷ ವಸ್ತುವಿರಬೇಕು ಎಂದು ಆತನಿಗೆ ಅನಿಸಿದೆ.
ಮೀನುಗಾರಿಕೆ ನಡೆಸುತಿದ್ದ ಜನಾರ್ಧನ್ ಹರಿಕಾಂತ್ ಎಂಬ ಮೀನುಗಾರ ಕಡಲತೀರಕ್ಕೆ ತೆರಳಿದ್ದ. ಅಲ್ಲಿ ಕಲ್ಲಿನಾಕಾರದ ವಸ್ತುವೊಂದು ದೊರೆತಿದ್ದು, ಕೊನೆಗೆ ಇದು ತಿಮಿಂಗಿಲದ ವಾಂತಿ ಎಂದು ತಿಳಿದುಬಂದಿದೆ.
ಸಮುದ್ರದಲ್ಲಿ ಸಿಕ್ಕ ಈ ಅಪರೂಪದ ವಸ್ತುವನ್ನು ಮನೆಗೆ ತಂದು ಪರೀಕ್ಷಿಸಿದಾಗ ಇದು ತಿಮಿಂಗಿಲದ ವಾಂತಿ ಎಂದು ತಿಳಿದಿದೆ. ಆದರೆ, ವಿಪರ್ಯಾಸ ನೋಡಿ. ಕೆಲ ದೇಶದಲ್ಲಿ ಇದನ್ನು ಮಾರಾಟ ಮಾಡಬಹುದು, ಆದರೆ, ನಮ್ಮ ದೇಶದಲ್ಲಿ ಬೇರೆಯದೇ ಕಾನೂನಿದೆ.
ನಮ್ಮ ದೇಶದಲ್ಲಿ ಇದನ್ನು ಮಾರಲು ಅನುಮತಿ ಇಲ್ಲ. ಹೀಗಾಗಿ ಹೊನ್ನಾವರ ವಿಭಾಗದ ಅರಣ್ಯಾಧಿಕಾರಿ ರಂಗನಾಥ್ ರವರಿಗೆ ಮೀನುಗಾರ ಹಸ್ತಾಂತರಿಸಿದ್ದಾನೆ.
ಈ ವಸ್ತುವಿಗೆ ಇಷ್ಟೊಂದು ಬೇಡಿಕೆ ಯಾಕೆ? ಪ್ರಮುಖವಾಗಿ ಇದನ್ನು ಸುಗಂಧ ದ್ರವ್ಯ ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಹೀಗಾಗಿ ಪಾಶ್ಚಿಮಾತ್ಯ ರಾಜ್ಯದಲ್ಲಿ ಇದಕ್ಕೆ ಒಂದು ಕೆಜಿಗೆ ಕೋಟಿ ಬೆಲೆ ಇದೆ. ಈ ದುಬಾರಿ ಬೆಲೆಯ ವಸ್ತುವಿಗಾಗಿ ವೇಲ್ ಗಳ ಮಾರಣ ಹೋಮವು ಸಹ ನಡೆಯುತ್ತಿದೆ.
ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಮ್ಮದೇಶದ ಅರಣ್ಯ ಕಾಯ್ದೆ ಪ್ರಕಾರ ಇವುಗಳನ್ನು ಸಂಗ್ರಹಿಸುವುದು, ಮಾರುವುದು ಕಾನೂನು ಬಾಹಿರ. ಮತ್ತು ಶಿಕ್ಷಾರ್ಹ ಅಪರಾಧ. ಹೀಗಾಗಿ ಮೀನುಗಾರ ಅನಿವಾರ್ಯವಾಗಿ ಇದನ್ನು ಒಪ್ಪಿಸಿದ್ದಾನೆ.
ಸದ್ಯ ಅರಣ್ಯ ಇಲಾಖೆ ಬಳಿ ಹಸ್ತಾಂತರ ವಾಗಿರುವ ಈ ಅಂಬರ‍್ಗ್ರಿಸ್ ಅತೀ ವಿರಳವಾಗಿ ದೊರಕುವ ಕಾರಣ ನೋಡಲು ಸಿಗುವುದು ತೀರಾ ಅಪರೂಪ. ಅರಣ್ಯ ಇಲಾಖೆ ಸುಪರ್ದಿಯಲ್ಲಿ ಇದ್ದರೆ ಇದರ ಅಧ್ಯಯನಕ್ಕೆ ಸಿಗುವುದಿಲ್ಲ.
ಹೀಗಾಗಿ ಕಾರವಾರದಲ್ಲಿ ಇರುವ ವಿಜ್ಞಾನ ಅಧ್ಯಯನ ಕೇಂದ್ರದಕ್ಕೆ ನೀಡಿದಲ್ಲಿ ಸಾವಿರಾರು ವಿದ್ಯಾರ್ಥಿಗಳ ಸಂಶೋಧನೆಗೆ ಸಹಾಯ ವಾಗಲಿದೆ ಎಂಬುದು ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಅಭಿಪ್ರಾಯವಾಗಿದೆ.
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ