ಕರೊನಾ ಸೋಂಕಿತರ ಸೇವೆ ಮಾಡಲು ದೈರ್ಯಬೇಕು.. ಗಟ್ಟಗುಂಡಿಗೆ ಬೇಕು… ಸರಕಾರದ ಮಟ್ಟದಿಂದ ಸೇವೆ ಮಾಡುವ ವೈದ್ಯರು, ನರ್ಸಗಳು, ಪೊಲೀಸರು ಈ ಕೋರೋನಾ ವಾರಿಯಸಗಳ ಪಟ್ಟಿಯಲ್ಲಿದ್ದು , ಇವರುಗಳ ಜೊತೆಗೆ ಸಮಾಜಸೇವಕನೊಬ್ಬ ವಿಶೇವಾಗಿ ಗುರುತಿಸಿಕೊಂಡಿದ್ದಾನೆ.. ಐವತ್ತರ ಗಡಿ ದಾಟಿದ್ದರು ಸಹ ತನ್ನ ಛಾಕಚಕ್ಯತೆಯ ತಕ್ಷಣ ಸ್ಪಂದಿಸುವ ಮನೋಸ್ಥಿತಿಯಿಂದಲೇ ಕಳೆದ 20 ವರ್ಷಕ್ಕೂ ಅಧಿಕ ಕಾಲ ಸಮಾಜ ಸೇವೆಯನ್ನು ತನ್ನ ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ ಇವರು. ಒಂದು ದಿನವೂ ವಿಶ್ರಾಂತಿ ಪಡೆಯದೇ ಮೊದಲಿನಿಂದಲೂ ಅಪಘಾತ ಸೇರಿದಂತೆ ತುರ್ತು ಪರಿಸ್ಥಿತಿಯಲ್ಲಿ ತಕ್ಷಣಕ್ಕೆ ಸ್ಥಳದಲ್ಲಿದ್ದು ಜನರಿಗೆ ಧೈರ್ಯ ತುಂಬುವುದರ ಜೊತೆಗೆ ಅವರೊಂದಿಗೆ ಇದ್ದು ಸೇವೆ ಮಾಡುತ್ತಾ ಬಂದಿರುವ ವ್ಯಕ್ತಿ ಇಂದು ಕೋರೊನಾ ಪಾಸಿಟಿವ್ ಪ್ರಕರಣ ಭಟ್ಕಳದಲ್ಲಿ ಕಂಡ ದಿನದಿಂದ ತಾಲೂಕಾಢಳಿತದ ವೈದ್ಯರ ತಂಡದೊಂದಿಗೆ ಇದ್ದು ಉತ್ತಮ ಕೆಲಸ ನಿರ್ವಹಿಸಿದ್ದಾರೆ. ತಾಲೂಕಾಡಳಿತದ ಜೊತೆಗೆ ಜೀವದ ಹಂಗು ತೊರೆದು ಹೋರಾಡುತ್ತಿರುವ ಇವರ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
‘ಸಾಕಷ್ಟು ಶಾಸಕರ ಅವಧಿ ಮುಗಿದಿರಬಹುದು ಆದರೆ ನನ್ನ ಸೇವೆಯನ್ನು ನಾನು ಮುಂದುವರೆಸಿದ್ದೇನೆ. ಆರೋಗ್ಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಯ ಸಹಕಾರದ ಜೊತೆಗೆ ತಂಜೀಂ ಸಂಸ್ಥೆ, ತಾಲೂಕಿನ ಪತ್ರಕರ್ತರ ಸಹಕಾರ ಸಲಹೆಯಂತೆ ಕೆಲಸ ಮಾಡಲು ಸಾಧ್ಯವಾಯಿತು. ಮನೆಯಲ್ಲಿ ಮೊದಲು ಈ ಕೋರೋನಾ ಕಡಿವಾಣಕ್ಕೆ ಕೆಲಸಕ್ಕೆ ಹೋಗುತ್ತೆನೆಂದು ಹೇಳಿದ ವೇಳೆ ಹಿಂಜರಿಕೆ ಮಾಡಿದ್ದು ಮನೆ ಮಂದಿ ದೂರವಿಟ್ಟಿದ್ದರು ಸಹ ನಂತರ ಕೋರೊನಾ ಪ್ರಕರಣ ಕಡಿಮೆಯಾಗಿದ್ದೆ ಸಹಕಾರ ನೀಡಿದ್ದಾರೆ ಎಂದರು. ಕೋರೋನಾ ಕಡಿವಾಣದ ಹಿನ್ನೆಲೆ ಕೇಂದ್ರ ಸರಕಾರ ಲಾಕ್ ಡೌನ ಘೋಷಣೆಗೂ ಒಂದು ವಾರದ ಮೊದಲೇ ತಾಲುಕಾಸ್ಪತ್ರೆಯ ವೈದ್ಯರು, ನರ್ಸ ಸೇರಿ ಎಲ್ಲಾ ಅಧಿಕಾರಿಗಳ ತಂಡದೊಂದಿಗೆ ಅಗತ್ಯಕ್ಕೂ ಮೀರಿ ಎಲ್ಲಾ ಕೋರೋನಾ ಪಾಸಿಟಿವ್ ಸೋಂಕಿತರ ಸೇವೆಯನ್ನು ಮಾಡಿದ್ದಾರೆ ಈ ಟಾಪ್ ನಿಸ್ಸಾರ ಅಹ್ಮದ್..
ಮುಂಜಾನೆಯೇ ಎದ್ದು ತಾಲೂಕಾಸ್ಪತ್ರೆಯ ವೈದ್ಯರ ತಂಡ ಸೇರಿಕೊಳ್ಳುವ ಟಾಪ್ ನಿಸ್ಸಾರ ಅವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಕೋರೋನಾ ಸೋಂಕಿತರ ಪತ್ತೆಯಿಂದ ಹಿಡಿದು ಅವರನ್ನು ಕಾರವಾರದ ಪತಂಜಲಿ ಆಸ್ಪತ್ರೆಗೆ ಅಂಬ್ಯುಲೆನ್ಸನಲ್ಲಿ ಕಳುಹಿಸುವ ತನಕ ಶ್ರಮ ಇವರದ್ದಿದೆ. ಪ್ರತಿ ಬಾರಿ ಕೋರೋನಾ ಸೋಂಕಿತರನ್ನು ಕರೆ ತರುವ ವೇಳೆ ವೈದ್ಯರ ಜೊತೆಗೆ ಪಿ.ಪಿ.ಇ. ಕಿಟ್ ಧರಿಸಿ ಸೋಂಕಿತರು ಆಸ್ಪತ್ರೆಗೆ ಕರೆತರುವಲ್ಲಿ ಅವರಿಗೆ ಕೋರೋನಾ ಮಹಾಮಾರಿಯ ಬಗ್ಗೆ ಮನವರಿಕೆ ಮಾಡಿ ಅವರಲ್ಲಿ ಜಾಗೃತಿ ಮೂಡಿಸಿ ಆಸ್ಪತ್ರೆ ಬರುವಂತೆ ಮಾಡಿ ಚಿಕಿತ್ಸೆ ಕೊಡಿಸುವಲ್ಲಿ ಇವರ ಪಾತ್ರವೂ ಪ್ರಮುಖವಾದದ್ದು. ಸ್ಥಳಿಯವಾಗಿ ಮನೆ ಮನೆಗೆ ತೆರಳಲು ಓರ್ವರ ಅವಶ್ಯಕತೆಯನ್ನು ಟಾಪ್ ನಿಸ್ಸಾರ ಅಹ್ಮದ್ ಅವರು ತುಂಬಾ ಜವಾಬ್ದಾರಿಯುತಾಗಿ ಕಾರ್ಯ ಮಾಡಿದ್ದಾರೆ. ಈಗಾಗಲೇ ಇವರ ಗಂಟಲ ದ್ರವ ಹಾಗೂ ರಕ್ತದ ಪರೀಕ್ಷೆಯನ್ನು ಎರಡು ಬಾರಿ ಮಾಡಿದ್ದು ಎರಡು ಬಾರಿಯೂ ಸಹ ನೆಗೆಟಿವ್ ಬಂದಿದ್ದು ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ.
2011-12ಯಲ್ಲಿ ಟಾಪ್ ಎಮರಜೆನ್ಸಿ ಹೆಲ್ಪ ಲೈನ ಸಂಸ್ಥೆಯ ಸ್ಫಾಪನೆಯ ಹಿಂದೆ ಇವರ ಸಮಾಜ ಸೇವೆಯ ದೂರದೃಷ್ಠಿಕೋನವಿದೆ. ಇಂದಿನ ದಿನದಲ್ಲಿ ತಮ್ಮ ಕೆಲಸದ ಮಧ್ಯೆ ಯಾರು ಸಹ ಸಮಾಜದ ಬಗ್ಗೆ ಕೆಲಸವಿರಲಿ ಗಮನ ಹರಿಸುವಷ್ಟು ಸಮಯ ಇಲ್ಲ. ಸಮಯ ಇದ್ದರೂ ಬಹುತೇಕರು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಸಮಾಜ ಸೇವಕ ಟಾಪ್ ನಿಸ್ಸಾರ ಅಹ್ಮದ ಅವರು ಟಾಪ್‍ಕ್ಲಾಸ್ ಆಗಿ ಕೆಲಸ ಮಾಡಿದ್ದು ಕೋರೊನಾದಿಂದ ಗುಣಮುಖರಾದವರು ಹಾಗೂ ತಾಲೂಕಾಢಳಿತ ಅಧಿಕಾರಿಗಳು, ವೈದ್ಯರು, ಸಿಬ್ಬಂದಿಗಳು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ಈ ಸೇವಾ ಮನೋಭಾವಕ್ಕೆ ಇವರಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ.
ಕೋರೋನಾ ಪ್ರಕರಣಕ್ಕೂ ಮುಂಚೆಯಿಂದಲೂ ತಾಲೂಕಾಸ್ಪತ್ರೆಯ ಸಂಪರ್ಕದಲ್ಲಿದ್ದ ಟಾಪ್ ನಿಸ್ಸಾರ ಅವರು ಎಲ್ಲಾ ತುರ್ತು ಸಂಧರ್ಬದಲ್ಲಿ ನಮ್ಮ ಜೊತೆಗೆ ನಿಂತಿದ್ದಾರೆ. ಈಗ ಕೋರೋನಾ ವೇಳೆಯೂ ತಮ್ಮ ಜೀವದ ಹಂಗು ತೊರೆದು ಓರ್ವ ಸಮಾಜ ಸೇವಕರಾಗಿ ಸ್ವಯಂ ಪ್ರೇರಿತರಾಗಿ ಕೆಲಸ ನಿರ್ವಹಿಸಿದ್ದಾರೆ. ಸರಕಾರದಿಂದ ಸಂಬಳ ಪಡೆದು ಕೆಲಸ ಮಾಡುವವರಿಗಿಂತ ಹೆಚ್ಚಾಗಿ ದಿನದ 24 ಗಂಟೆ ಕೆಲಸ ಮಾಡಿದ್ದಾರೆ. ಇವರ ಈ ಕಾರ್ಯಕ್ಕೆ ತಾಲೂಕಾಸ್ಪತ್ರೆ ವತಿಯಿಂದ ಅಭಿನಂದನೆ ಎಂದು ತಾಲೂಕಾಸ್ಪತ್ರೆಯ ವೈದ್ಯರು ಮೆಚ್ಚುಗೆ ಸೂಚಿಸಿದ್ದಾರೆ. ಒಟ್ನಲ್ಲಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುವ ಇವರ ಸೇವಾ ಮನೋಭಾವಕ್ಕೊಂದು ಸಲಾಂ..
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ