ಹಿಟ್&ರನ್: ಬೈಕ್ ನಲ್ಲಿ 50 ಮೀ ಗೂ ಹೆಚ್ಚು ದೂರ ರಸ್ತೆಯಲ್ಲೇ ತಳ್ಳಲ್ಪಟ್ಟು ಗಾಯಗೊಂಡಿದ್ದ ಬೈಕ್ ಸವಾರ ಸಾವು: ಪರಾರಿಯಾಗಿದ್ದ ಲಾರಿ ಚಾಲಕ ಅರೆಸ್ಟ್

ಅಂಕೋಲಾ: ತಾಲೂಕಿನ ಮಾದನಗೇರಿ ಬಳಲೆಯ ಪೆಟ್ರೋಲ್ ಬಂಕ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕ್ ಮತ್ತು ಲಾರಿಯ ನಡುವೆ ಅಪಘಾತವಾಗಿತ್ತು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಅಪಘಾತ ವೊಂದರಲ್ಲಿ ಲಾರಿಯೊಂದು ಬೈಕಿಗೆ ಜೋರಾಗಿ ಡಿಕ್ಕಿ ಹೊಡೆದ ಪರಿಣಾಮ, ಬೈಕ್ 50 ಮೀ .ಗೂ ಹೆಚ್ಚು ದೂರ ರಸ್ತೆಯಲ್ಲೇ ತಳ್ಳಲ್ಪಟ್ಟು, ಬೈಕ್ ಸವಾರ ಸಿಡಿದು ಬಿದಿದ್ದ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟಿದ್ದಾನೆ.

ಹೌದು, ಗಾಯಗೊಂಡ ಸವಾರ ಕಾರವಾರದ ಕ್ರಿಮ್ಸ್ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ತಾಲೂಕಿನ ಉಳುವರೆ ಸಮೀಪದ ಬೋಳುಕುಂಟೆ ಗ್ರಾಮದ ಕುಸ್ಲು ಗೌಡ (35) ಮೃತಪಟ್ಟ ವ್ಯಕ್ತಿ. ವೃತ್ತಿಯಲ್ಲಿ ಲಾರಿ ಚಾಲಕರಾಗಿರುವ ಇವರು, ಶುಕ್ರವಾರ ಮಧ್ಯಾಹ್ನ ಮಾದನಗೇರಿ ಒಳ ರಸ್ತೆಯಿಂದ ಹೆದ್ದಾರಿಯತ್ತ ಪ್ರಯಾಣಿಸುತ್ತಿದ್ದರು. ಲಾರಿ ಕುಮಟಾದಿಂದ ಅಂಕೋಲಾದೆಡೆಗೆ ಚಲಿಸುತ್ತಿತ್ತು.

ಈ ವೇಳೆ ಎರಡು ವಾಹನಗಳು ವೇಗವಾಗಿ ಬಂದು ಪರಸ್ಪರ ಡಿಕ್ಕಿ ಸಂಭವಿಸಿದೆ. ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದರಿoದ ಚಿಕಿತ್ಸೆಗಾಗಿ ಕಾರವಾರದ ಕ್ರಿಮ್ಸ್ಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಸಿಪಿಐ ಕೃಷ್ಣಾನಂದ ನಾಯಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮಾನವೀಯ ನೆಲೆಯಲ್ಲಿ ತನ್ನ ವಾಹನ ನಿಲ್ಲಿಸಿ, ಬೈಕ್ ಸವಾರನ ಪ್ರಾಣ ರಕ್ಷಣೆಗೆ ಮುಂದಾಗ ಬೇಕಿದ್ದ ಲಾರಿ ಚಾಲಕ ಅದಾವುದೋ ಕಾರಣದಿಂದ ತನ್ನ ಲಾರಿ ನಿಲ್ಲಿಸದೇ ಸ್ಥಳದಿಂದ ಪರಾರಿಯಾದ್ದ.ಅಪಘಾತ ಸ್ಥಳದ ಹತ್ತಿರ ಇರುವ ಪೆಟ್ರೋಲ್ ಪಂಪ ಒಂದರ ಸಿ.ಸಿ ಕ್ಯಾಮಾರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಪೊಲೀಸರು ಹಿಟ್ & ರನ್ ಕೇಸ್‌ನಡಿ ಆರೋಪಿಯನ್ನು ಬಂಧಿಸಿದ್ದಾರೆ.

ಈ ಅಪಘಾತ ವಲಯದಲ್ಲಿ ಐಆರ್ ಬಿ ಅವೈಜ್ಞಾನಿಕ ಕಾಮಗಾರಿ ವಿರುದ್ಧ ಪ್ರತಿಭಟಿಸುತ್ತಲೇ ಬಂದಿದ್ದ ಸಾರ್ವಜನಿಕರ ಹತ್ತಾರು ಪ್ರತಿಭಟನೆ ನಡೆಸುತ್ತಲೇ ಬಂದಿದ್ದು, ಮೇಲ್ಸೆತುವೆ ನಿರ್ಮಾಣಕ್ಕೆ ಒತ್ತಾಯಿಸಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ವಿಸ್ಮಯ ನ್ಯೂಸ್, ವಿಲಾಸ್ ನಾಯಕ ಅಂಕೋಲಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Exit mobile version