ಮೀನುಬುಟ್ಟಿ ಕಸಿದು ಮೀನು ರಸ್ತೆಗೆ ಚೆಲ್ಲಿದರು: ನಗರಸಭೆ ಸಿಬ್ಬಂದಿಯ ದರ್ಪ; ಹಿಡಿಶಾಪ ಹಾಕಿದ ಮೀನುಗಾರ‌ ಮಹಿಳೆಯರು

ಕಾರವಾರ: ಕರ್ಪ್ಯೂ ಅವಧಿ ಮುಗಿದ ಬಳಿಕವೂ ಮೀನುಮಾರಾಟ ಮಾಡುತ್ತಿದ್ದ ಮಹಿಳೆಯರ ಮೀನು ಬುಟ್ಟಿ ಕಸಿದು ಮೀನನ್ನು ರಸ್ತೆಗೆ ಚೆಲ್ಲಿ ನಗರಸಭೆ ಸಿಬ್ಬಂದಿ ದರ್ಪ ತೋರಿದ್ದಾರೆ. ಹೌದು, ಇಂತಹದೊಂದು ಘಟನೆ ಕಾರವಾರದಲ್ಲಿ ನಡೆದಿದೆ.

ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ಮುಖ್ಯ ಮೀನುಮಾರುಕಟ್ಟೆ ಬಂದ್ ಮಾಡಲಾಗಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಮೀನು ಮಾರಾಟ ಮಾಡುತ್ತಿದ್ದರು. ಆದರೆ ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 10 ಗಂಟೆವರೆಗೆ ಮಾತ್ರ ಮಾರಾಟಕ್ಕೆ ಅವಕಾಶ ನೀಡಿದ್ದರು.

ಆದರೆ ಅವಧಿ ಮುಗಿದರೂ ಕೆಲ ಮೀನುಗಾರ ಮಹಿಳೆಯರು ನಗರದ ಆಯುಷ್ಯ ಆಸ್ಪತ್ರೆ ಎದುರು ಮೀನು ಮಾರಾಟ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ನಗರಸಭೆ ಸಿಬ್ಬಂದಿಯೊಬ್ಬರ ಬಂದ್ ಮಾಡುವಂತೆ ಎಚ್ಚರಿಸುವ ಬದಲು ಮೀನುಗಾರ ಮಹಿಳೆಯರು ವ್ಯಾಪಾರಕ್ಕೆ ತಂದಿದ್ದ ಮೀನನ್ನು ರಸ್ತೆಗೆ ಎಸೆದು ದರ್ಪ ತೋರಿದ್ದಾರೆ.

ಹೌದು, ಪೋಲಿಸರ ಮುಂದೆಯೇ ನಗರಸಭೆ ಸಿಬ್ಬಂದಿ ಈ ರಿತಿ ದರ್ಪ ತೋರಿದ್ದಾರೆ. ದರ್ಪ ತೋರಿದ ನಗರಸಭೆ ಸಿಬ್ಬಂದಿಯ ವಿರುದ್ಧ ಮೀನುಗಾರ ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

ವಿಸ್ಮಯ ನ್ಯೂಸ್ ಕಾರವಾರ

Exit mobile version