ಲಾಕ್ಡೌನ್ ಬೆನ್ನಲ್ಲೆ ರಾಜ್ಯಕ್ಕೆ ಗೋವಾದಲ್ಲಿದ್ದವರ ಎಂಟ್ರಿ: ಗಡಿ ಬಂದ್ ಮಾಡಿದ ಪೊಲೀಸರು!

ಕಾರವಾರ: ಸರ್ಕಾರ ಕೊವಿಡ್ ತಡೆಯುವ ನಿಟ್ಟಿನಲ್ಲಿ ಮೇ 10 ರಿಂದ ಲಾಕ್ಡೌನ್ ಘೋಷಣೆ ಮಾಡಿ ಜಿಲ್ಲೆ ಹಾಗೂ ಅಂತರಾಜ್ಯ ಗಡಿಯನ್ನು ಬಂದ್ ಮಾಡುವುದಾಗಿ ಘೊಷಿಸಿದೆ. ಆದರೆ ಉತ್ತರಕನ್ನಡ ಜಿಲ್ಲಾಡಳಿತ ಇಂದಿನಿoದಲೇ ಕಟ್ಟುನಿಟ್ಟಾಗಿ ಆದೇಶ ಜಾರಿಗೊಳಿಸಿದ್ದು ನೆರೆಯ ಗೋವಾದಿಂದ ಆಗಮಿಸುತ್ತಿದ್ದವರನ್ನು ಪೊಲೀಸರು ತಡೆದು ವಾಪಸ್ಸ್ ಕಳುಹಿಸಿದ್ದಾರೆ.

ಹೌದು, ಕೊರೊನಾ ಅಬ್ಬರ ಜೋರಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಕರ್ಪ್ಯೂ ಬದಲಾಗಿ ಜಿಲ್ಲೆ ಹಾಗೂ ಅಂತರಾಜ್ಯ ಓಡಾಟ ತಡೆಯುವಂತಹ ಕೆಲ ಕಠಿಣ ನಿಯಮಗಳನ್ನು ಜಾರಿ ಮಾಡಿ ಮೇ.24ರವರೆಗೆ ಲಾಕ್ಡೌನ್ ಘೋಷಿಸಿ ಸರ್ಕಾರ ಆದೇಶ ನೀಡಿದೆ. ಇದರಿಂದ ಆತಂಕಕ್ಕೊಳಗಾದ ಗೋವಾದಲ್ಲಿ ನೆಲಸಿದ್ದವರು ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ಮೂಲಕ ರಾಜ್ಯವನ್ನು ಪ್ರವೇಶಿಸತೊಡಗಿದ್ದರು.

ಈವರೆಗೆ ನೆಗೆಟಿವ್ ಸರ್ಟಿಫಿಕೇಟ್ ಇದ್ದರೇ ಬಿಡಲಾಗುತಿತ್ತು. ಆದರೆ ಸರ್ಕಾರ ಹೊಸ ಆದೇಶ ಹೊರಡಿಸಿದ ಬೆನ್ನಲ್ಲೆ ಕಾರವಾರದ ತಹಶೀಲ್ದಾರ್ ಆರ್.ವಿ ಕಟ್ಟಿ ಗಡಿಯಲ್ಲಿ ತಪಾಸಣೆ ಬಿಗಿ ಗೊಳಿಸಿದ್ದು ಅನಾವಶ್ಯಕವಾಗಿ ಓಡಾಡುವವರಿಗೆ ಮತ್ತು ಕಾರಣವಿಲ್ಲದೆ ರಾಜ್ಯ ಪ್ರವೇಶಿಸಲು ಮುಂದಾದವರನ್ನು ತಡೆದು ಪೊಲೀಸರು ವಾಪಸ್ಸ್ ಕಳುಹಿಸಿದ್ದಾರೆ. ಕೇವಲ ತುರ್ತು ಹಾಗೂ ಅಗತ್ಯ ವಸ್ತುಗಳ ಸಾಗಾಟ ಮಾಡುವವರನ್ನು ಮಾತ್ರ ಬಿಡಲಾಗುತ್ತಿದೆ.

ಸ್ಥಳೀಯರನ್ನು ಹಾಗೂ ಅಗತ್ಯವಿದ್ದವರನ್ನು ಬಿಟ್ಟು ಉಳಿದವರನ್ನು ಅಧಿಕಾರಿಗಳು ವಾಪಾಸ್ ಕಳುಹಿಸಿದ್ದಾರೆ. ಗೋವಾ ಬಾರ್ಡರ್‌ನಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಈಗಾಗಲೇ ನಿಯೋಜನೆ ಮಾಡಲಾಗಿದ್ದು, ಮೇ 10ರ ನಂತರ ಪರಿಸ್ಥಿತಿ ಹೇಗಿರಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

ವಿಸ್ಮಯ ನ್ಯೂಸ್, ಕಾರವಾರ

Exit mobile version