ಅಂಕೋಲಾ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸ್ನಾತಕೋತ್ತರ ಎಂ.ಎಸ್ಸಿ ರಸಾಯನಶಾಸ್ತ್ರ ವಿಭಾಗದ ಪರೀಕ್ಷೆಯಲ್ಲಿ ಕೆನರಾ ವೆಲಪೆರ್ ಟ್ರಸ್ಟ್ ನ, ಅಂಕೋಲಾದ ಗೋಖಲೆ ಸೆಂಟಿನರಿ ಕಾಲೇಜಿನ ( ಪಿ ಜಿ ಸೆಂಟರ್ ನ ) ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ನೂರು ಪ್ರತಿಶತ ಫಲಿತಾಂಶದ (100% ) ಸಾಧನೆ ಮಾಡಿದ್ದಾರೆ.
ಕಾಲೇಜಿನ ಕ್ರೋಡಿಕೃತ ಫಲಿತಾಂಶದಲ್ಲಿ ಕುಮಾರಿ ಸಿಂಧು ಕ್ರೋಡಿಕೃತ ಶೇ 79.21 (ಪ್ರಥಮ), ಕುಮಾರಿ ಜರುಷಾ ರೊಡ್ರಿಗ್ಯೂಸ್ ಶೇಕಡ 78.17 ( ದ್ವಿತೀಯ) ಹಾಗೂ ಕುಮಾರಿ ದಿವ್ಯಾ ರೇವಣಕರ್ ಶೇಕಡಾ 77.07 (ತೃತೀಯ) ಸ್ಥಾನ ಗಳಿಸುವುದರೊಂದಿಗೆ ವಿಶೇಷ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕೆನರಾ ವೆಲಫರ್ ಟ್ರಸ್ಟ್ ನ ಅಧ್ಯಕ್ಷ ಎಸ್. ಪಿ.ಕಾಮತ್, ಕಾರ್ಯದರ್ಶಿ ಕೆ.ವಿ.ಶೆಟ್ಟಿ, ನೂತನ ಪ್ರಾಚಾರ್ಯ ಡಾ. ಅಶೋಕ ಕುಮಾರ, ನಿಕಟಪೂರ್ವ ಪ್ರಾಚಾರ್ಯ ಡಾ.ವೆಂಕಟರಾಯ ಶೆಟ್ಟಿಗಾರ್, ಸಂಯೋಜಕ ಡಾ.ಪ್ರವೀಣ ನಾಯ್ಕ ಕಾಲೇಜಿನ ಅಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ