ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

ಭಟ್ಕಳ: ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ‘ಸಿಎಸ್’ ತರಬೇತಿ ಪಡೆದು ರಾಷ್ಟಿçÃಯ ಮಟ್ಟದ ಸಿಎಸ್.ಇ.ಇ.ಟಿ ಪರೀಕ್ಷೆಯಲ್ಲಿ ರಜನೀ ಶೇಟ್ (ಬಿ.ಕಾಂ – ದ್ವಿತೀಯ), ಮನಿಶಾ ಮೇಸ್ತ, ಐಶ್ವರ್ಯ ನಾಯ್ಕ, ಫ್ಲೋರಿನಾ ಡಿಸೋಜಾ (ಬಿ.ಕಾಂ – ತೃತೀಯ), ತೇರ್ಗಡೆ ಹೊಂದುವ ಮೂಲಕ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ತನ್ಮೂಲಕ ಸಿಎ-ಸಿಎಸ್ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗಗನಕುಸುಮವಲ್ಲ ಎಂದು ಸಾಬೀತುಪಡಿಸುವುದರೊಂದಿಗೆ, ‘ಸಿಎ – ಸಿಎಸ್’ ಆಕಾಂಕ್ಷಿಗಳಿಗೆ ಭವಿಷತ್ತಿನಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜು ಹೊಸ ಆಶಾಕಿರಣವನ್ನು ಮೂಡಿಸಿದೆ.

ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ವಿ ರೀಚ್ ಅಕಾಡೆಮಿಯೊಂದಿಗೆ ತರಬೇತಿ ಘಟಕವನ್ನು ಆರಂಭಿಸಿದ್ದು, ಮೊದಲ ಯತ್ನದಲ್ಲೇ ಯಶಸ್ಸನ್ನು ಸಾಧಿಸಿರುವ ಈ ವಿದ್ಯಾರ್ಥಿಗಳನ್ನು ಭಟ್ಕಳ ಎಜುಕೇಶನ್ ಟ್ರಸ್ಟ್’ನ ಛೇರಮನ್ ಡಾ. ಸುರೇಶ ನಾಯಕ, ಮ್ಯಾನೇಜಿಂಗ್ ಟ್ರಸ್ಟೀ ರವೀಂದ್ರ ಕೊಲ್ಲೆ, ಟ್ರಸ್ಟೀ ಮ್ಯಾನೇಜರ್ ರಾಜೇಶ ನಾಯಕ, ಇತರ ಪದಾಧಿಕಾರಿಗಳು, ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆoದು ‘ಸಿಎ – ಸಿಎಸ್’ ತರಬೇತಿಯ ಸಂಯೋಜಕರಾದ ಫಣಿಯಪ್ಪ ಹೆಬ್ಬಾರ ಪ್ರಕಟಿಸಿದ್ದಾರೆ.

ವಿಸ್ಮಯ ನ್ಯೂಸ್, ಭಟ್ಕಳ

Exit mobile version