ಆರ್.ಎನ್.ಎಸ್ ಪ್ರಥಮ ದರ್ಜೆ ಕಾಲೇಜು ಮುರುಡೇಶ್ವರದಲ್ಲಿ ಬಿ.ಕಾಂ, ಬಿಬಿ.ಎ ಹಾಗೂ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

ಮುರುಡೇಶ್ವರ: ಆರ್.ಎನ್.ಎಸ್ ಪ್ರಥಮ ದರ್ಜೆ ಕಾಲೇಜು ಮುರುಡೇಶ್ವರದಲ್ಲಿ 2021-22ನೇ ಸಾಲಿಗೆ ಪ್ರವೇಶ ಪಡೆದ ಬಿ.ಕಾಂ, ಬಿಬಿ.ಎ ಹಾಗೂ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಹೊನ್ನಾವರದ ಎಸ್.ಡಿ.ಎಮ್ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾದ ಡಾ.ಸುರೇಶ ನಾಯ್ಕರವರು ಉದ್ಘಾಟಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು “ಸ್ಪಷ್ಟವಾದ ಗುರಿ ಮತ್ತು ದೃಢವಾದ ನಿರ್ಧಾರಗಳನ್ನು ವಿದ್ಯಾರ್ಥಿ ಜೀವನದಲ್ಲಿಯೇ ಅಳವಡಿಸಿಕೊಂಡರೇ ಉಜ್ವಲ್ ಭವಿಷ್ಯ ರೂಪಿಸಲು ಸಾಧ್ಯ’ ಆಧುನಿಕತೆ ಮತ್ತು ವೇಗವಾದ ಬದುಕಿನಿಂದ ಇವತ್ತಿನ ಯುವಜನಾಂಗ ಸಂಸ್ಕಾರ ಸಂಪ್ರದಾಯ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುವುದೇ ಅಪರೂಪವಾಗಿದೆ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಅಚಲವಾದ ನಂಬಿಕೆ ಮತ್ತು ಶ್ರದ್ಧೆಯನ್ನು ಇಟ್ಟುಕೊಳ್ಳುವ ಅನಿವಾರ್ಯತೆ ಇದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಆರ್.ಎನ್.ಎಸ್ ವಿದ್ಯಾನಿಕೇತನ ಶಾಲೆಯ ಪ್ರಾಚಾರ್ಯರಾದ ಡಾ.ಸುರೇಶ ಶೆಟ್ಟಿಯವರು ಮಾತನಾಡಿ “ವಿದ್ಯಾರ್ಥಿಗಳ ಜೀವನದಲ್ಲಿ ತಂದೆ ತಾಯಿ ಹಾಗೂ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದರು.”

ಆರ್.ಎನ್.ಎಸ್ ಪದವಿ ಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಮಾಧವ ಪಿ.ಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಕು.ದಿವ್ಯಾ ಮತ್ತು ಸಂಗಡಿಗರು ಪ್ರಾರ್ಥಿಸಿದರು,ಕು.ಪವಿತ್ರಾ ನಾಯ್ಕ ಸ್ವಾಗತಿಸಿದರು, ಕು.ರೋಹನ್ ನಾಯ್ಕ ವಂದಿಸಿದರು,ಕು.ಗ್ಲೋರಿಯಾ ಕಾರ್ಯಕ್ರಮವನ್ನು ನಿರ್ವಹಿಸಿದರು. ವೇದಿಕೆಯ ಮೇಲೆ ಆರ್.ಎನ್.ಎಸ್ ಪ್ರಥಮ ದರ್ಜೆ ಕಾಲೇಜಿನ ಗಣಕಶಾಸ್ತç ಉಪನ್ಯಾಸಕರಾದ ಶ್ರೀ ಗಣೇಶ ನಾಯ್ಕ, ಉಪಸ್ಥಿತರಿದ್ದರು.

Exit mobile version