ರೋಟರಿ ಕ್ಲಬ್ ವತಿಯಿಂದ ಕೋವಿಡ್ ಪರಿಸ್ಥಿತಿಯಲ್ಲಿ ವಿರಳವಾಗಿ ಸಿಗುವ ಔಷಧಿ ವಿತರಣೆ

ಭಟ್ಕಳ: ತಾಲೂಕಿನ ರೋಟರಿ ಕ್ಲಬ್ ವತಿಯಿಂದ ಕೋವಿಡ್ ಪರಿಸ್ಥಿತಿಯಲ್ಲಿ ವಿರಳವಾಗಿ ಸಿಗುವ  ರಕ್ತ  ಹೆಪ್ಪುರೋಧಕ ( anticoagulant) ಔಷಧಿ ಯನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ನೀಡಿದ್ದಾರೆ.

ಒಟ್ಟು 24 ಸಾವಿರ ಮೌಲ್ಯದ 60 ಇಂಜೆಕ್ಷನಗಳನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಅವರಿಗೆ ಹಸ್ತಾಂತರ ಮಾಡಲಾಗಿದೆ.

ಈ ಸಂದರ್ಭದಲ್ಲಿ ಮಾತಾಡಿದ ರೋಟರಿ ಕ್ಲಬ್ ಅಧ್ಯಕ್ಷ ಗೌರೀಶ ಪಡುಕೋಣೆ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ವಿರಳವಾಗಿ ಸಿಗುವ ಇಂಜೆಕ್ಷನ ಇದಾಗಿದ್ದು ಬಡವರಿಗೆ ಸಹಾಯವಾಗು ದ್ರಷ್ಟಿಯಲ್ಲಿ ತಾಲೂಕಾಸ್ಪತ್ರೆ ವೈದ್ಯಾಧಿಕಾರಿಗಳಾದ ಸವಿತಾ ಕಾಮತ ನಮ್ಮ ಬಳಿ ಕೇಳಿಕೊಂಡಾಗ ನಮ್ಮ ಸಂಸ್ಥೆಯಿಂದ ಪ್ರಥಮ ಹಂತದಲ್ಲಿ 24 ಸಾವಿರ ಮೌಲ್ಯದ ಒಟ್ಟು 60 ಇಂಜೆಕ್ಷನ್ ಗಳನ್ನು ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಔಷಧ ಲಭ್ಯತೆ ಬಗ್ಗೆ ಕಠಿಣ ಸನ್ನಿವೇಶ ಎದುರಾದ ವೇಳೆ ನಮ್ಮ ಗಮನಕೆ ಬಂದರೆ ಕೂಡಲೇ ಇನ್ನೂ ಕೆಲವು ಕಂತುಗಳಲ್ಲಿ ಇಂಜೆಕ್ಷನಗಳನ್ನು ವಿತರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಗೌರೀಶ ಪಡುಕೋಣೆ, ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಹಾಗೂ ರೋಟೇರಿಯನ್ ರಾಜೇಶ್ ನಾಯಕ್ ಹಾಗೂ ಡಾಕ್ಟರ್ ಸವಿತಾ ಕಾಮತ್ ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Exit mobile version