ಅಂಕೋಲಾ ಜೂ 1: ಲಾಕ್ ಡೌನ್ ಜಾರಿಯಿಂದ ಜನಸಂದಣಿ ಸೇರುವುದು ಕಡಿಮೆ ಯಾಗಿದೆಯಾದರೂ, ತಾಲೂಕಿನಲ್ಲಿ ಮಂಗಳವಾರ 19 ಹೊಸ ಕೋವಿಡ್ ಕೇಸಗಳು ದಾಖಲಾಗಿದ್ದು ಈ ಮೂಲಕ ತಾಲೂಕಿನಲ್ಲಿ 212 ಪ್ರಕರರಣಗಳು ಸಕ್ರಿಯವಾಗಿದೆ.
ಸೋಂಕು ಮುಕ್ತರಾದ 62 ಜನರನ್ನು ಬಿಡುಗಡೆ ಗೊಳಿಸಲಾಗಿದ್ದು, 33 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊವಿಡ್ ಕೇರ್ ಸೆಂಟರನಲ್ಲಿ 42, ಹೋಂ ಐಸೋಲೇಶನ್ ನಲ್ಲಿ 134 ಜನರಿದ್ದಾರೆ.
ಮೇ ತಿಂಗಳೊಂದರಲ್ಲೇ ಅತೀ ಹೆಚ್ಚು ಕೊವಿಡ್ ಸಾವು ಸಂಭವಿಸಿ, ಕೊರೊನ ಮಾರಿಯ ಅರ್ಭಟಕ್ಕೆ ಈ ಹಲವರು ಭಯ ಬೀಳುವಂತಾಗಿತ್ತು. ಈ ವರೆಗೆ ತಾಲೂಕಿನಲ್ಲಿ ಒಟ್ಟು 53 ಜನರು ಕೊವಿಡ್ ಸೋಂಕಿಗೆ ಅಸುನೀಗಿದ್ದಾರೆ.
ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ, ತಹಶೀಲ್ದಾರ ಉದಯ ಕುಂಬಾರ, ಸಿಪಿಐ ಕೃಷ್ಲಾನಂದ ನಾಯಕ, ಪುರಸಭೆ ಮುಖ್ಯಾಧಿಕಾರಿ ಬಿ ಪ್ರಹ್ಲಾದ್ ಮಾರುಕಟ್ಟೆಯಲ್ಲಿ ಜನಸಂದಣಿ ನಿಯಂತ್ರಣಕ್ಕೆ ಬೆಳಿಗ್ಗೆಯಿಂದಲೇ ಕರ್ತವ್ಯ ನಿರ್ವಹಿಸಿದರು. ಪಿಎಸೈಗಳಾದ ಈ ಸಿ ಸಂಪತ್, ಪ್ರೇಮನಗೌಡ ಪಾಟೀಲ್ ಮತ್ತಿತರ ಸಿಬ್ಬಂದಿಗಳು ಆಯಕಟ್ಟಿನ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ