ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕೋವಿಡ್ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಶುಕ್ರವಾರ ಜಿಲ್ಲೆಯಾದ್ಯಂತ 215 ಕೇಸ್ ದೃಢಪಟ್ಟಿದೆ.
ಕಾರವಾರ 19, ಅಂಕೋಲಾ 9, ಕುಮಟಾ 39, ಹೊನ್ನಾವರ 53, ಭಟ್ಕಳ 17, ಶಿರಸಿ 42, ಸಿದ್ದಾಪುರ 3, ಯಲ್ಲಾಪುರ 16, ಮುಂಡಗೋಡ 13 , ಹಳಿಯಾಳ 3, ಜೋಯ್ಡಾದಲ್ಲಿ ಒಂದು ಕೇಸ್ ದಾಖಲಾಗಿದೆ.
ಇದೇ ವೇಳೆ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಭಟ್ಕಳ ಮತ್ತು ಶಿರಸಿಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 663ಕ್ಕೆ ಏರಿಕೆಯಾಗಿದೆ.
ಅಂಕೋಲಾದಲ್ಲಿಂದು ಪಾಸಿಟಿವ್ ಕೇಸ್ 09: ಗುಣಮುಖ 14
ಅಂಕೋಲಾ ಜೂ 11: ತಾಲೂಕಿನಲ್ಲಿ ಗುರುವಾರ 09 ಹೊಸ ಕೋವಿಡ್ ಕೇಸಗಳು ದಾಖಲಾಗಿದ್ದು ,ಒಟ್ಟೂ 1 32ಪ್ರಕರಣಗಳು ಸಕ್ರಿಯವಾಗಿದೆ.
ಸೋಂಕು ಮುಕ್ತರಾದ 14 ಜನರನ್ನು ಬಿಡುಗಡೆ ಗೊಳಿಸಲಾಗಿದ್ದು, ಅಂಕೋಲಾ (7), ಕಾರವಾರ (8), ಕುಮಟಾ (3, ಮಣಿಪಾಲ (1), ಮಂಗಳೂರು (3) ಸೇರಿ ಆಸ್ಪತ್ರೆಗಳಲ್ಲಿ ಒಟ್ಟು 22 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊವಿಡ್ ಕೇರ್ ಸೆಂಟರನಲ್ಲಿ 08, ಹೋಂ ಐಸೋಲೇಶನ್ ನಲ್ಲಿ 98 ಜನರಿದ್ದಾರೆ. ಈ ವರೆಗೆ ಕೊವಿಡನಿಂದ ತಾಲೂಕಿನಲ್ಲಿ ಒಟ್ಟು 55 ಜನರು ಮೃತಪಟ್ಟಿದ್ದಾರೆ.
ನೆರೆಪೀಡಿತ ಸಂತ್ರಸ್ತರಿಗೆ ತೊಂದರೆಯಾಗದಂತೆ ಯೋಜನೆ ಸಿದ್ಧಪಡಿಸಿಕೊಳ್ಳಿ. ಕಾಳಜಿ ಕೇಂದ್ರಗಳಿಗೆ ಮುಂಚಿತವಾಗಿ ಭೇಟಿ ನೀಡಿ, ಅಗತ್ಯ ಸೌಲಭ್ಯಗಳ ಕುರಿತು ಪರಿಶೀಲಿಸಿ. ನೆರೆ ನಿರ್ವಹಣೆಯಲ್ಲಿ ಅಪಸ್ವರಗಳು ಕೇಳಿ ಬಂದರೆ ನೋಡಲ್ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿಸಲಾಗುವುದು ಎಂದು ಕುಮಟಾ ಉಪವಿಭಾಗ ಅಧಿಕಾರಿ ಎಂ. ಅಜಿತ್ ರೈ ಹೇಳಿದರು.
ಶುಕ್ರವಾರ ತಹಶೀಲ್ದಾರ್ ಕಚೇರಿಯಲ್ಲಿ, ನೆರೆ ನಿರ್ವಹಣೆಯ ಮುಂಜಾಗ್ರತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೆರೆ ಪೀಡಿತ ಪ್ರದೇಶಗಳಲ್ಲಿ ಕೋವಿಡ್ ಸೋಂಕಿತರು ಕಂಡುಬಂದರೆ ಅವರನ್ನು ಕಾಳಜಿ ಕೇಂದ್ರದ ಬದಲಾಗಿ ನೇರವಾಗಿ ಆರೈಕೆ ಕೇಂದ್ರಗಳಿಗೆ ದಾಖಲಿಸಬೇಕು. ಮುಂಜಾಗ್ರತಾ ಕ್ರಮವಾಗಿ ದೋಣಿಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಹಿಂದೆ ದೋಣಿಯ ಮಾಲೀಕರಿಗೆ ಸರಿಯಾದ ಗೌರವಧನ ನೀಡದ ಕುರಿತು ಗಮನಕ್ಕೆ ಬಂದಿದ್ದು, ನೋಡಲ್ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳದಲ್ಲಿದ್ದು ಪರಿಶೀಲನೆ ನಡೆಸಿ ವರದಿ ನೀಡಬೇಕು. ಅರಣ್ಯ ಮತ್ತು ಹೆಸ್ಕಾಂ ಎರಡು ಇಲಾಖೆಗಳು ಸಹಯೋಗದಲ್ಲಿ ಕಾರ್ಯನಿರ್ವಹಿಸಬೇಕು. ವಿದ್ಯುತ್ ಅವಘಡ ಸಂಭವಿಸಿದರೆ ಆಸ್ಪತ್ರೆಗೆ ಮೊದಲು ವಿದ್ಯುತ್ ಕಲ್ಪಿಸಲು ಆದ್ಯತೆ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು ಗಮನಕ್ಕೆ ತಂದರು.
ತಹಶೀಲ್ದಾರ ಉದಯ ಕುಂಬಾರ, ಸಿಪಿಐ ಕೃಷ್ಣಾನಂದ ನಾಯಕ, ತಾ.ಪಂ ಇಓ ಪಿ.ವೈ ಸಾವಂತ, ಪುರಸಭೆ ಮುಖ್ಯಾಧಿಕಾರಿ ಬಿ ಪ್ರಹ್ಲಾದ, ತಾಲೂಕಾ ಆರೋಗ್ಯಾಧಿಕಾರಿ ಡಾ.ನಿತಿನ್ ಹೋಸ್ಮೆಲ್ಕರ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಲಾ ನಾಯಕ, ತೋಟಗಾರಿಕೆ, ಹೆಸ್ಕಾಂ, ಕರಾವಳಿ ಕಾವಲು ಪಡೆ, ಅರಣ್ಯ ಇಲಾಖೆ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.