Join Our

WhatsApp Group
Info
Trending

ಉತ್ತರಕನ್ನಡದಲ್ಲಿ‌ 297 ಕೋವಿಡ್ ಕೇಸ್: ಇಬ್ಬರ ಸಾವು: 416 ಮಂದಿ ಗುಣಮುಖ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 297 ಜನರಿಗೆ ಕೋವಿಡ್ ದೃಢಪಟ್ಟಿದೆ. ಇದೇ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ.

ಕಾರವಾರ 38, ಅಂಕೋಲಾ‌17, ಕುಮಟಾ‌ 62, ಹೊನ್ನಾವರ 40, ಭಟ್ಕಳ 20, ಶಿರಸಿ 29, ಸಿದ್ದಾಪುರ‌ 31, ಯಲ್ಲಾಪುರ 31, ಮುಂಡಗೋಡ 5, ಹಳಿಯಾಳ 29, ಜೋಯ್ಡಾದಲ್ಲಿ13 ಕೇಸ್ ಕಾಣಿಸಿಕೊಂಡಿದೆ.

ಇನ್ನೊಂದೆಡೆ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಕಾರವಾರ 1, ಹೊನ್ನಾವರದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 665 ಕ್ಕೆ ಏರಿಕೆಯಾಗಿದೆ. ಇದೇ ವೇಳೆ, 416 ಮಂದಿ‌ ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ..

ಅಂಕೋಲಾದಲ್ಲಿಂದು ಪಾಸಿಟಿವ್ ಕೇಸ್ 17: ಸಕ್ರಿಯ 134

ಅಂಕೋಲಾ ಜೂ 12: ತಾಲೂಕಿನಲ್ಲಿ ಶನಿವಾರ 17ಹೊಸ ಕೋವಿಡ್ ಕೇಸಗಳು ದಾಖಲಾಗಿದ್ದು ಒಟ್ಟೂ1 34ಪ್ರಕರರಣಗಳು ಸಕ್ರಿಯವಾಗಿದೆ.

ಸೋಂಕು ಮುಕ್ತರಾದ 15 ಜನರನ್ನು ಬಿಡುಗಡೆ ಗೊಳಿಸಲಾಗಿದ್ದು, ಅಂಕೋಲಾ (7), ಕಾರವಾರ (9), ಕುಮಟಾ (3, ಮಣಿಪಾಲ (1), ಮಂಗಳೂರು (3) ಸೇರಿ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು 23 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊವಿಡ್ ಕೇರ್ ಸೆಂಟರನಲ್ಲಿ 08, ಹೋಂ ಐಸೋಲೇಶನ್ ನಲ್ಲಿ 103 ಜನರಿದ್ದಾರೆ.


ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Check Also
Close
Back to top button