ಜಗತ್ತಿನ ಗಮನ ಸೆಳೆದ ಮುರುಡೇಶ್ವರ ದೇವಾಲಯದ ವಿದ್ಯುತ್ ಅಲಂಕಾರ: ಅಮೆರಿಕಾದ ಪ್ರತಿಷ್ಠಿತ ಸಂಸ್ಥೆಯಿoದ ಪ್ರಶಸ್ತಿ

ಮುರುಡೇಶ್ವರ: ಅಮೇರಿಕಾದ ಇ-ಗ್ಲೋಬಲ್ ಫಿಲಿಪ್ಸ್ ಸಂಸ್ಥೆ ಆಯೋಜಿಸಿದ್ದ ಪೀಪಲ್ ಚೋಯಿಸ್ ಅವಾರ್ಡ್ 2021 ಪ್ರಶಸ್ತಿಯ ಮುರುಡೇಶ್ವರದ ದೇವಾಲಯದ ಮುಡಿಗೇರಿದೆ. ಹೌದು, ಅಮೇರಿಕಾದ ಇ-ಗ್ಲೋಬಲ್ ಫಿಲಿಪ್ಸ್ ಸಂಸ್ಥೆ ಆಯೋಜಿಸಿದ್ದ ಪೀಪಲ್ ಚೋಯಿಸ್ ಅವಾರ್ಡ್ 2021 ಪ್ರಶಸ್ತಿಯನ್ನು ವಿದ್ಯುದಲಂಕಾರಗೊoಡ ಮುರುಡೇಶ್ವರದ ದೇವಾಲಯ ಪಡೆದುಕೊಂಡಿದೆ.

ಈ ಸ್ಪರ್ಧೆಯಲ್ಲಿ ಜಗತ್ತಿನ ಒಟ್ಟು 25 ಗ್ಲೋಬಲ್ ಪ್ರಾಜೆಕ್ಟ್ ಸಂಸ್ಥೆ ಭಾಗವಹಿಸಿದ್ದು, ಆನ್ಲೈನ್ ಮೂಲಕ 6,871 ಮಂದಿ ಮತ ಚಲಾಯಿಸಿದ್ದಾರೆ. ಆದರೆ ಜಗತ್ತಿನ 24 ಗ್ಲೋಬಲ್ ಪ್ರಾಜೆಕ್ಟನ ಹಿಂದಿಕ್ಕಿ ತಾಲೂಕಿನ ವಿಶ್ವಪ್ರಸಿದ್ಧ ಮುರುಡೇಶ್ವರ ದೇವಾಲಯದ ವಿದ್ಯುದಲಂಕಾರ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಮುರುಡೇಶ್ವರ ದೇವಾಲಯ 2500 ಮತ ಪಡೆಯುವದರ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡು, ಈ ಮೂಲಕ ಅಮೇರಿಕಾದ ಇ-ಗ್ಲೋಬಲ್ ಫಿಲಿಪ್ಸ್ ಸಂಸ್ಥೆ ಆಯೋಜಿಸಿದ್ದ ಪೀಪಲ್ ಚೋಯಿಸ್ ಅವಾರ್ಡ್ 2021 ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Exit mobile version