ಕಾರವಾರ: ಸೀಬರ್ಡ್ ನೌಕಾನೆಲೆ ನಿರಾಶ್ರಿತರನ್ನು ರಾಷ್ಟ್ರೀಯ ಸಂತ್ರಸ್ತರೆಂದು ಘೋಷಿಸಿ, ನಿರಾಶ್ರಿತ ಕುಟುಂಬಕ್ಕೆ ಉದ್ಯೋಗ ಹಾಗೂ ಜೀವನ ಭದ್ರತೆ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ರಕ್ಷಣಾ ಸಚಿವ ಶ್ರೀ ರಾಜನಾಥ ಸಿಂಗ್ ಅವರಲ್ಲಿ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ಶ್ರೀಮತಿ ರೂಪಾಲಿ ಎಸ್.ನಾಯ್ಕ ಮನವಿ ಮಾಡಿದರು.
ಗುರುವಾರ ಐಎನ್ ಎಸ್ ಕದಂಬ ನೌಕಾನೆಲೆಗೆ ದೇಶದ ರಕ್ಷಣಾ ವ್ಯವಸ್ಥೆ, ಮತ್ತಿತರ ಪ್ರಗತಿ ಪರಿಶೀಲನೆಗೆ ಆಗಮಿಸಿದ್ದ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡಿ, ಸ್ಥಳೀಯ ನಿರಾಶ್ರಿತರ ಬವಣೆ ವಿವರಿಸಿದ ಶಾಸಕಿ ರೂಪಾಲಿ ನಾಯ್ಕ, ಈ ಕುರಿತು ವಿಶೇಷ ಮನವಿ ನೀಡಿದರು.
ತನ್ನ ಕ್ಷೇತ್ರವಾದ ಕಾರವಾರ ಹಾಗೂ ಅಂಕೋಲಾ ತಾಲೂಕುಗಳಲ್ಲಿ 4000 ಕ್ಕೂ ಹೆಚ್ಚು ಕುಟುಂಬಗಳು ನೌಕಾನೆಲೆಯಿಂದ ನಿರಾಶ್ರಿತವಾಗಿವೆ. ಅ ಕುಟುಂಬಗಳು ಕಳೆದ 3 ದಶಕಗಳಿಂದಲೂ ತಮ್ಮ ಬದುಕು ಕಟ್ಟಿ ಕೊಳ್ಳಲು ಹೆಣಗಾಡುತ್ತಿವೆ. ಈ ವರೆಗೆ ಕೇವಲ 1 ಸಾವಿರ ಕುಟುಂಬಗಳಿಗೂ ಸರಿಯಾದ ಉದ್ಯೋಗ ನೀಡಲಾಗಿಲ್ಲ.
ದೇಶದ ರಕ್ಷಣೆಗಾಗಿ ತಮ್ಮ ಮನೆ, ಜಮೀನು ತ್ಯಾಗ ಮಾಡಿದ್ದ ನಿರಾಶ್ರಿತರ ಕುಟುಂಬಗಳ ಉದ್ಯೋಗ, ಜೀವನ ಭದ್ರತೆಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಿಕೊಡಲು ಕೇಂದ್ರ ಸರ್ಕಾರ ನೌಕಾನೆಲೆ ನಿರಾಶ್ರಿತರನ್ನು ರಾಷ್ಟ್ರೀಯ ಸಂತ್ರಸ್ತರು ಎಂದು ಘೋಷಣೆ ಮಾಡಬೇಕು. 4 ಸಾವಿರಕ್ಕೂ ಹೆಚ್ಚಿರುವ ನಿರಾಶ್ರಿತ ಕುಟುಂಬದವರಿಗೆ ತಲಾ ಒಂದು ಉದ್ಯೋಗವನ್ನಾದರೂ ಕೊಡಬೇಕು. ಇತರೆ ಜೀವನ ಸುಧಾರಣೆಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನೂ ದೊರಕಿಸಿಕೊಡುವ ಮೂಲಕ ದೇಶಕ್ಕಾಗಿ ತ್ಯಾಗ ಮಾಡಿದವರ ಬದುಕು ಹಸನಾಗುವಂತೆ ವ್ಯವಸ್ಥೆ ಕಲ್ಪಿಸಬೇಕೆಂದು ಶಾಸಕಿ ರೂಪಾಲಿ ನಾಯ್ಕ ರಕ್ಷಣಾ ಸಚಿವರಲ್ಲಿ ಮನವಿ ಮಾಡಿದರು.
ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ನೌಕಾನೆಲೆ, ಕೈಗಾ ಅಣು ವಿದ್ಯುತ್ ಸ್ಥಾವರ, ಕೊಂಕಣ ರೇಲ್ವೆ, ಚತುಷ್ಪಥ ಹೆದ್ದಾರಿ, ಕದ್ರಾ, ಕೊಡಸಳ್ಳಿ ಜಲ ವಿದ್ಯುತ್ ಯೋಜನೆಗಳು ಹೀಗೆ ವಿವಿಧ ಕಾರಣಗಳಿಂದ ನಿರಾಶ್ರಿತರಾದ ಕುಟುಂಬಗಳ ಸಂಖ್ಯೆ ಹೆಚ್ಚಿದೆ. ನಿರಾಶ್ರಿತರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ದೇಶದ ರಕ್ಷಣೆಗಾಗಿ ತ್ಯಾಗ ಮಾಡಿದವರು ಹೆಮ್ಮೆಯಿಂದ ಬದುಕುವಂತಾಗಬೇಕು.
ಕಳೆದ ಮೂರು ದಶಕಗಳಿಂದ ಪರಿಹಾರಕ್ಕಾಗಿ ಪರದಾಡುತ್ತಿದ್ದ ಸೀಬರ್ಡ್ ನಿರಾಶ್ರಿತರಿಗೆ ಪ್ರಧಾನಮಂತ್ರಿಗಳಾದ ಮಾನ್ಯ ನರೇಂದ್ರ ಮೋದಿಜಿ ಅವರ ಕಳಕಳಿ, ಅಂದಿನ ರಕ್ಷಣಾ ಸಚಿವರಾಗಿದ್ದ ಶ್ರೀಮತಿ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವರಾಗಿದ್ದ, ಸಂಸದರಾದ ಶ್ರೀ ಅನಂತಕುಮಾರ್ ಹೆಗಡೆ ಅವರಲ್ಲಿ ವಿನಂತಿಸಿ ಪರಿಹಾರ ದೊರೆಯುವಂತಾಗಲು ತಾನೂ ಶ್ರಮಿಸಿದ್ದು, ಈ ಕುರಿತು ತೃಪ್ತಿ ಇದೆ ಎಂದ ಶಾಸಕಿ, ಕೇಂದ್ರ ಸರ್ಕಾರದ ಕ್ರಮಕ್ಕೆ ಈ ಭಾಗದ ನಿರಾಶ್ರಿತರ ಪರವಾಗಿ ಅಭಿನಂದಿಸಿ, ನಿರಾಶ್ರಿತರ ಕಳಕಳಿಯಿಂದ ಮತ್ತಷ್ಟು ಕೆಲಸ ಕಾರ್ಯಗಳು ಜಾರಿಯಾಗಬೆಕೆಂದು ವಿನಂತಿಸಿದರು.
ಶಿಪ್ ಯಾರ್ಡ್ ನಿರ್ಮಾಣ
ಸೀಬರ್ಡ್ ನೌಕಾನೆಲೆಯ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು ನೌಕಾನೆಲೆಗೆ ಅಗತ್ಯ ಸಾಮಗ್ರಿಗಳ ತಯಾರಿಕೆಗೆ ಇಲ್ಲಿಯೇ ಕೈಗಾರಿಕೆಗೆ ಆರಂಭಿಸಿ,ಸ್ಥಳೀಯರಿಗೂ ಉದ್ಯೋಗ ಕೊಡುವ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದಲ್ಲಿ ರಕ್ಷಣಾ ಇಲಾಖೆ ನೌಕಾನೆಲೆಯಲ್ಲಿ ಶಿಪ್ ಯಾರ್ಡ ಹಾಗೂ ಪೂರಕ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಸಕಿ ರೂಪಾಲಿ ನಾಯ್ಕ ರಕ್ಷಣಾ ಸಚಿವರಲ್ಲಿ ವಿಶೇಷ ಮನವಿ ಸಲ್ಲಿಸಿದರು.
ಶಾಸಕಿ ರೂಪಾಲಿ ನಾಯ್ಕ ಈ ಕುರಿಯ ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದು, ಮುಖ್ಯಮಂತ್ರಿಗಳು ಸಹ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಲ್ಲಿ ನೌಕಾನೆಲೆಯಲ್ಲಿ ಶಿಪ್ ಯಾರ್ಡ ನಿರ್ಮಿಸುವಂತೆ ಕೋರಿಕೊಂಡಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಈ ಹಿಂದಿನ ರಕ್ಷಣಾ ಸಚಿವರ ಜೊತೆ ವಿನಂತಿಸಿ ನಿರಾಶ್ರಿತರಿಗೆ ಪರಿಹಾರ ಆದಷ್ಟು ಶೀಘ್ರವಾಗಿ ದೊರೆಯಲು ಪ್ರಯತ್ನಿಸಿದ್ದ ಶಾಸಕಿ ರೂಪಾಲಿ ನಾಯ್ಕ, ಮತ್ತೆ ನಿರಾಶ್ರಿತರ ಉದ್ಯೋಗ ಹಾಗೂ ಜೀವನ ಭದ್ರತೆ ಕುರಿತು ಸಂಬಂಧಿಸಿದ ಸಚಿವರಲ್ಲಿ ಚರ್ಚಿಸಿ, ವಿನಂತಿಸಿ ತನ್ನ ಕಳಕಳಿ ವ್ಯಕ್ತಪಡಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..