Join Our

WhatsApp Group
Info
Trending

ಅಂಕೋಲಾದಲ್ಲಿಂದು 4 ಪಾಸಿಟಿವ್ ಕೇಸ್| ಸಕ್ರಿಯ 55| ರವಿವಾರದಿಂದ ಮತ್ತೆ ವ್ಯಾಕ್ಸಿನೇಶನ್ ಪುನರಾರಂಭ

ಅಂಕೋಲಾ ಜೂ 26 : ತಾಲೂಕಿನಲ್ಲಿ ಶನಿವಾರ 4 ಹೊಸ ಕೋವಿಡ್ ಕೇಸಗಳು ದಾಖಲಾಗಿದ್ದು ಒಟ್ಟೂ 55ಪ್ರಕರಣಗಳು ಸಕ್ರಿಯವಾಗಿದೆ.

ಸೋಂಕು ಮುಕ್ತರಾದ 8 ಜನರನ್ನು ಬಿಡುಗಡೆ ಗೊಳಿಸಲಾಗಿದೆ. ಒಟ್ಟು 14 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊವಿಡ್ ಕೇರ್ ಸೆಂಟರನಲ್ಲಿ ಶೂನ್ಯ ಪ್ರಕರಣವಿದ್ದು, ಹೋಂ ಐಸೋಲೇಶನ್ ನಲ್ಲಿ 41 ಜನರಿದ್ದಾರೆ. ಕರೊನಾದಿಂದಾಗಿ ಈ ವರೆಗೆ ತಾಲೂಕಿನಲ್ಲಿ ಒಟ್ಟೂ 58 ಸಾವಿನ ಪ್ರಕರಣಗಳು ದಾಖಲಾಗಿವೆ.

ಕೊವಿಡ ಲಸಿಕೆ ಕೊರತೆ ಮತ್ತಿತರ ಕಾರಣಗಳಿಂದ ಶನಿವಾರ ತಾತ್ಕಾಲಿಕವಾಗಿ ಒಂದು ದಿನದ ವ್ಯಾಕ್ಸಿನೇಶನ್ ಕಾರ್ಯವನ್ನು ತಾಲೂಕಿನಾದ್ಯಂತ ಸ್ಥಗಿತಗೊಳಿಸ ಲಾಗಿತ್ತು. ಈಗ ಸಮಸ್ಯೆ ಬಗೆ ಹರಿದಿರುವುದರಿಂದ ರವಿವಾರ ವ್ಯಾಕ್ಸಿನೇಶನ್ ಮತ್ತೆ ಪುನರಾರಂಭಗೊಳ್ಳಲಿದ್ದು, ಸಾರ್ವಜನಿಕರು ಯಾವುದೇ ಗೊಂದಲಕ್ಕೊಳಗಾಗದೇ, ಗುಂಪು ಗೂಡದೇ ವ್ಯಾಕ್ಸಿನೇಶನ್ ಪಡೆದುಕೊಳ್ಳುವಂತೆ ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Check Also
Close
Back to top button