Trending

ಡಾರ್ಲಿಂಗ್ ಕೃಷ್ಣಗೆ ರಾಧಿಕಾ ಕುಮಾರಸ್ವಾಮಿ ನಾಯಕಿ

ಸಂದೇಶ್ ನಾಗರಾಜ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸಿನಿಮಾವನ್ನು ನಾಗಶೇಖರ್ ನಿರ್ದೇಶಿಸುತ್ತಿದ್ದು, ಲವ್ ಮಾಕ್ಟೇಲ್ ಖ್ಯಾತಿಯ ಡಾಲಿರ್ಂಗ್ ಕೃಷ್ಣ ನಟಿಸುತ್ತಿದ್ದಾರೆ. ಲಾಕ್ ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡಿರುವ ನಿರ್ದೇಶಕ ನಾಗಶೇಖರ್ ಕಥೆ ಸಿದ್ದಪಡಿಸಿದ್ದಾರೆ, ನಾಗಶೇಖರ್ ಸಿನಿಮಾಗೆ ಕೃಷ್ಣ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಕಥೆಯ ಪಾತ್ರಕ್ಕೆ ಕೃಷ್ಣ ಫಿಟ್ ಆಗುತ್ತಾರೆ ಹೀಗಾಗಿ ಅವರನ್ನೇ ಆಯ್ಕೆ ಮಾಡಿದ್ದಾಗಿ ನಾಗಶೇಖರ್ ತಿಳಿಸಿದ್ದಾರೆ.
‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ಲವ್ವರ್ ಬಾಯ್ ಆಗಿದ್ದ ಕೃಷ್ಣ, ಈ ಚಿತ್ರದಲ್ಲಿ ಫ್ಲರ್ಟ್ ಮಾಡುವ ಹುಡುಗನಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಟೈಟಲ್ ಕೇಳಿದರೆ ಏನಿದೆ ತುಂಬ ವಿಶೇಷವಾಗಿದೆಯಲ್ಲ ಅಂತ ಅನಿಸುತ್ತಿದೆ. ಖ್ಯಾತ ಛಾಯಾಗ್ರಾಯಕ ಸತ್ಯ ಹೆಗಡೆ ಇಲ್ಲಿ ಕ್ಯಾಮರಾ ಕೈಚಳಕ ತೋರಿಸಲಿದ್ದಾರೆ. ದೀಪು ಎಸ್ ಕುಮಾರ್ ಸಂಕಲನ ನೋಡಿಕೊಳ್ಳಲಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತವಿದ್ದು, ಕವಿರಾಜ್ ಸಾಹಿತ್ಯವಿದೆ.

Back to top button