ಮೀನು ಸಾಗಾಣಿಕೆಯ ನೆಪದಲ್ಲಿ ಕಂಟೇನರ್ ಮೂಲಕ ಅಕ್ರಮವಾಗಿ ಗೋಮಾಂಸ ಸಾಗಾಟ: 3 ಟನ್‌ಗಳಷ್ಟು ಗೋಮಾಂಸ ವಶಕ್ಕೆ

ಕುಮಟಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳ ಜೋತೆಗೆ ದಿನೇ ದಿನೇ ಅಕ್ರಮ ಗೋ ಸಾಗಾಟ ಹಾಗೂ ಗೋಮಾಂಸ ಸಾಗಾಟದ ಪ್ರಕರಣಗಳು ಸಹ ಪತ್ತೆಯಾಗುತ್ತಲೇ ಇದೆ. ಕಳೆದ ಕೆಲ ದಿನಗಳ ಹಿಂದಷ್ಟೆ ಬೈಲಹೊಂಗಲದಿoದ ಮಂಗಳೂರಿಗೆ ಲಾರಿಯಲ್ಲಿ ಹಾಡು ಹಗಲೆ ಅಕ್ರಮ ಹಾಗೂ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 8 ಎತ್ತುಗಳನ್ನು ಕುಮಟಾ ಪೊಲೀಸರು ರಕ್ಷಿಸಿದ್ದರು.

ಅಂತೇಯೆ ಇಂದು ಮುಂಜಾನೆ ಕಂಟೇನರ್ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 3 ಟನ್‌ಗಳಷ್ಟು ಗೋಮಾಂಸವನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಕುಮಟಾದಲ್ಲಿ ನಡೆದಿದೆ.

ಮೀನು ಸಾಗಾಣಿಕೆಯ ನೆಪವೊಡ್ಡಿ ಕಂಟೇನರ್ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ ಗೋಮಾಂಸವನ್ನು ಕುಮಟಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಾನಗಲ್‌ದಿಂದ ಮಂಗಳೂರಿಗೆ ಮೀನು ಸಾಗಾಣಿಕೆಯ ಹೆಸರಿನಲ್ಲಿ ಕಂಟೇನರ್ ಮೂಲಕ ಸುಮಾರು 3 ಟನ್ ಗೋಮಾಂಸ ಸಾಗಾಟ ಮಾಡಲು ಯತ್ನಿಸಲಾಗಿದೆ.

ಆದರೆ ಕುಮಟಾದ ಹೊಳೆಗದ್ದೆ ಟೋಲ್ ಪ್ಲಾಜಾದಲ್ಲಿ ಪ್ರತಿಯೊಂದು ವಾಹನವನ್ನೂ ಸಹ ತಪಾಸಣೆ ನಡೆಸುವ ಕಾರಣ, ಟೋಲ್‌ಪ್ಲಾಜಾದಲ್ಲಿದ್ದ ಪೊಲೀಸ್ ಸಿಬ್ಬಂದ್ದಿಯು ತಪಾಸಣೆ ನಡೆಸಿದ ವೇಳೆ ಮೀನಿನ ಬದಲಾಗಿ ಕಂಟೆನರ್‌ನಲ್ಲಿ ಗೋಮಾಂಸವಿರುವುದು ಖಚಿತವಾಗಿದೆ.

ಕೂಡಲೆ ಕಂಟೇನರ್ ವಶಪಡಿಸಿಕೊಂಡ ಕುಮಟಾ ಪೋಲಿಸರು ಹಾನಗಲ್ ನಿವಾಸಿಯಾದ ಚಾಲಕ ಮಹಮ್ಮದ್ ಶಾಹೀದ್ ವಿರುದ್ಧ ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Exit mobile version