ಅಂಕೋಲಾ: ಬೇಳಾ ಬಂದರ ನಿವಾಸಿಯಾಗಿದ್ದ ಸಾಮಾಜಿಕ ಕಾರ್ಯಕರ್ತ ಆನಂದು ಶೇಷಗಿರಿ ಪಡ್ತಿ (50), ಸೋಮವಾರ ನಸುಕಿನ ಜಾವ ವಿಧಿವಶರಾದರು. ವರ್ಷದಿಂದೀಚೆಗೆ ಅವರ ದೇಹಾರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು ಹಲವು ಅಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಇಂದು ಬೆಳಿಗ್ಗೆ ಮತ್ತೆ ಆರೋಗ್ಯದಲ್ಲಿ ಏರು ಪೇರಾಗಿದ್ದು ಕಾರವಾರಕ್ಕೆ ಚಿಕಿತ್ಸೆಗೆ ಒಯ್ಯುತ್ತಿದ್ದ ವೇಳೆ ದಾರಿಮಧ್ಯೆಯೇ ಕೊನೆಯುಸಿರೆಳೆದರು ಎನ್ನಲಾಗಿದೆ.
ಮೃತ ಆನಂದು ಪಡ್ತಿ ತಮ್ಮ ಆತ್ಮೀಯ ವಲಯದಲ್ಲಿ ಬೊಂಡ್ಯಾ ಎಂದೇ ಪರಿಚಿತರಾಗಿದ್ದರು. ಚಾಲಕ ವೃತ್ತಿಯಲ್ಲಿ ಪರಿಣಿತರಾಗಿದ್ದ ಇವರು ಅಂಕೋಲಾ ಟಾಂಪೋ ಚಾಲಕ ಸಂಘದ ಪ್ರಮುಖ ಹುದ್ದೆಯನ್ನು ನಿಭಾಯಿಸಿ ಸೈ ಎನಿಸಿಕೊಂಡಿದ್ದರು. ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂದಿರುತ್ತಿದ್ದ ಇವರು, ತಾಲೂಕಿನ ಜೈ ಹಿಂದ್ ಕ್ರೀಡಾಂಗಣದಲ್ಲಿ ನಡೆಯುವ ಹತ್ತಾರು ಕ್ರೀಡಾಕೂಟ, ವಿವಿಧ ಕಾರ್ಯಕ್ರಮಗಳಲ್ಲಿ ಸ್ವಯಂ ಸೇವಕನಾಗಿ ಸಂಘಟಕರಿಗೆ ಸಹಕರಿಸುತ್ತಿದ್ದರು. ಅಪಘಾತ-ಮತ್ತಿತರ ತುರ್ತು ಸಂದರ್ಭಗಳಲ್ಲಿಯೂ ತನ್ನ ಕೈಲಾದ ನೆರವಿನ ಸೇವೆ ಸಲ್ಲಿಸಿ ಮಾನವೀಯತೆಗೆ ಮಾದರಿಯಾಗಿದ್ದರು.
ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಿನದಾಗಿ ತೊಡಗಿಸಿಕೊಂಡು, ನೇರ ನಡೆ ನುಡಿ ಮೂಲಕ ರಾಜಕೀಯದಲ್ಲಿಯೂ ಗುರುತಿಸಿ ಕೊಂಡಿದ್ದರು. ತನ್ನ ಅಭಿಮಾನಿ ಹಾಗೂ ಆಪ್ತನಾಗಿದ್ದ ಆನಂದು ಗಾಂವಕರ ನಿಧನದ ಸುದ್ದಿ ತಿಳಿದ ಮಾಜಿ ಶಾಸಕ ಸತೀಶ್ ಸೈಲ್ ಆಸ್ಪತ್ರೆಗೆ ಬಂದು ಅಂತಿಮ ದರ್ಶನ ಪಡೆದು, ಕಂಬನಿ ಮಿಡಿದರು.
ಅಂಕೋಲಾದ ಕೋಟೆವಾಡಾ ಹಿಂದೂ ಸ್ಮಶಾನ ಭೂಮಿಯಲ್ಲಿ ಅನಂದು ಗಾಂವಕರ ಅಂತ್ಯ ಸಂಸ್ಕಾರ ನಡೆಸಲಾಯಿತು. ಕಾರವಾರದ ಸುರೇಂದ್ರ ನಾಯ್ಕ, ಪ್ರಮುಖರಾದ ಮಾದೇವ ಗೌಡ ಬೆಳಂಬಾರ, ಮಂಜುನಾಥ ದತ್ತಾ ನಾಯ್ಕ ಬೆಳಾಬಂದರ, ವಿಶ್ವನಾಥ ತುಕ್ಕಪ್ಪ ನಾಯ್ಕ, ಕಾರ್ತಿಕ ಎಸ್ ನಾಯ್ಕ, ಮಂಜುನಾಥ ವಿ ನಾಯ್ಕ, ಮೋಹನ ನಾಯ್ಕ, ನಾಗೇಶ ಬಂಟ ಸೇರಿದಂತೆ ಸ್ಥಳೀಯ ಪ್ರಮುಖರು, ಊರನಾಗರಿಕರು ಹಾಗೂ ಮೃತನ ಕುಟುಂಬಸ್ಥರು, ಸಂಬಂಧಿಗಳು ಪಾಲ್ಗೊಂಡಿದ್ದರು.
ಮೃತ ಗಾಂವಕರ, ತಾಯಿ ಮತ್ತು ಸಹೋದರರನ್ನು ಅಗಲಿದ್ದು ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದೆ. ಮೃತರ ಅಗಲುವಿಕೆಗೆ ಆಲೂರಿನ ಹಾಗೂ ಜಿಲ್ಲೆಯ ಹಲವು ಗಣ್ಯರು, ಆಪ್ತರು ಸಂತಾಪ ಸೂಚಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..