ಅಂಕೋಲಾ: ತಾಲೂಕಿನ ಲಾಯನ್ಸ್ ಕ್ಲಬ್ ಅಂಕೋಲಾ ಕರಾವಳಿ ಇವರ ಆಶ್ರಯದಲ್ಲಿ, ಪಟ್ಟಣದ ಪಿ.ಎಮ್. ಜ್ಯೂನಿಯರ್ ಕಾಲೇಜ್ ಸಭಾಭವನದಲ್ಲಿ ಶುಕ್ರವಾರ ಪತ್ರಿಕಾ ದಿನಾಚರಣೆ ಆಚರಿಸಲಾಯಿತು.
ನಿವೃತ್ತ ಪ್ರಾಚಾರ್ಯ ಮತ್ತು ಹಿರಿಯ ಸಾಹಿತಿ ಪ್ರೊ. ಮೋಹನ ಹಬ್ಬು ಕಾರ್ಯಕ್ರಮ ಉದ್ಘಾಟಿಸಿ, ದ್ರಶ್ಯಮಾಧ್ಯಮ ಹಾಗೂ ಇತರೆ ಆಧುನಿಕತೆ ಸವಾಲುಗಳ ನಡುವೆ ಪತ್ರಿಕಾ ಮಾಧ್ಯಮ ಈಗಲೂ ತನ್ನ ಗಟ್ಟಿತನ ಉಳಿಸಿಕೊಂಡಿದೆ. ಕನ್ನಡ ಪತ್ರಿಕಾ ರಂಗಕ್ಕೆ ಕೆಲ ಮಹನೀಯರು ನೀಡಿದ ಕೊಡುಗೆ ಸ್ಮರಿಸಿ ಪತ್ರಿಕಾರಂಗದ ಹಲವು ಮಹತ್ವದ ವಿಷಯಗಳ ಕುರಿತು ಮಾತನಾಡಿ, ಲಾಯನ್ಸ ಕ್ಲಬ್ ಅಂಕೋಲಾ ಕರಾವಳಿ ಹಮ್ಮಿಕೊಳ್ಳುತ್ತಿರುವ ಹತ್ತಾರು ವಿಧಾಯಕ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹೊಸದಿಗಂತ ದಿನಪತ್ರಿಕೆ ಹುಬ್ಬಳ್ಳಿ ಆವೃತ್ತಿಯ ಮುಖ್ಯಸ್ಥ ವಿಠಲದಾಸ ಕಾಮತ ವಿಶೇಷ ಉಪನ್ಯಾಸ ನೀಡಿದರು. ಕ್ಲಬ್ ನ ಅಧ್ಯಕ್ಷ ಲಾ. ಡಾII ಕರುಣಾಕರ ಎಮ್ ಎನ್ ಅಧ್ಯಕ್ಷತೆ ವಹಿಸಿ ಕ್ಲಬ್ ನ ಚಟುವಟಿಕೆ ತಿಳಿಸಿ, ಎಲ್ಲರಿಗೂ ಪತ್ರಿಕಾ ದಿನಾಚರಣೆ ಶುಭಾಶಯ ತಿಳಿಸಿದರು. ಲಾ . ಸಂಜಯ ಅರುಂಧೇಕರ ಧ್ವಜ ವಂದನೆ ನಡೆಸಿಕೊಟ್ಟರು. ಲಾ . ದೇವಾನಂದ ಬಿ . ಗಾಂವಕರ ಸ್ವಾಗತಿಸಿದರು. ಪತ್ರಿಕೆ ಹಂಚಿಕೆದಾರರು, ವಿತರಕರು ಮತ್ತು ವರದಿಗಾರರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ,ಕಾರ್ಯದರ್ಶಿ ಸುಭಾಸ ಕಾರೇಬೈಲ್ ಸನ್ಮಾನಿತರ ಪರವಾಗಿ ಅನಿಸಿಕೆ ವ್ಯಕ್ತ ಪಡಿಸಿದರು. ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚ್ಕಡ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸಾಂಧರ್ಭಿಕವಾಗಿ ಮಾತನಾಡಿದರು.
ಲಾಯನ್ಸ್ ಕ್ಲಬ್ ಅಂಕೋಲಾ ಕರಾವಳಿಯ ಕಾರ್ಯದರ್ಶಿ ಸದಾನಂದ ಶೆಟ್ರಿ ವಂದಿಸಿದರು. ಲಾ. ಮಹಾಂತೇಶ ರೇವಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ನಿರೂಪಿಸಿದರು. ಪತ್ರಿಕಾ ವರದಿಗಾರರಾದ ವಿಧ್ಯಾಧರ ಮೊರಬ,ನಾಗರಾಜ ಮಂಜುಗುಣಿ,ಅರುಣ ಶೆಟ್ಟಿ,ಅಕ್ಷಯ ನಾಯ್ಕ ಬೊಬ್ರುವಾಡ,ನಾಗರಾಜ ಜಾಂಬಳೇಕರ, ಪತ್ರಿಕಾ ವಿತರಕರು, ಹಂಚಿಕೆದಾರರು, ಲಾಯನ್ಸ್ ಪದಾಧಿಕಾರಿಗಳಾದ ರಮೇಶ ಪರ ಮಾರ, ಓಂಪ್ರಕಾಶ ಪಟೇಲ, ಎಸ್ ಆರ್ ಉಡುಪ, ಶಂಕರ ಹುಲಸ್ವಾರ,’ ಆರ್.ಜಿ. ಗುಂದಿ, ಗಣಪತಿ ನಾಯಕ ಶೀಳ್ಯ, ಕೇಶವಾನಂದ ನಾಯಕ ವಿ.ಆರ್ ವೆರ್ಣೇಕರ, ಸೇರಿದಂತೆ ಇತರೆ ಹಿರಿಕಿರಿಯ ಸದಸ್ಯರು, ಪಾಲ್ಗೊಂಡಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..