ಇತ್ತೀಚಿನ ದಿನಗಳಲ್ಲಿ ಗಂಟಲು ನೋವಿನ ಸಮಸ್ಯೆ ವಯಸ್ಸಿನ ಅಂತರ ನೋಡದೆ ಪ್ರತಿಯೊಬ್ಬರಿಗೂ ಎದುರಾಗುವ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಪರಿಸರ ಮಾಲಿನ್ಯ ಮತ್ತು ನಮ್ಮ ಕೆಲವು ಆಹಾರ ಪದ್ಧತಿಗಳು ಗಂಟಲು ನೋವಿಗೆ ಕಾರಣವಾಗಿ ಕೆಲವೊಮ್ಮೆ ಸಮಸ್ಯೆ ತೀರ ಉಲ್ಬಣವಾಗುವಂತೆ ಮಾಡುತ್ತವೆ. ಅಂತಹ ಸಮಯದಲ್ಲಿ ನಮಗೆ ತಕ್ಷಣ ನೆನಪಾಗುವುದು ನಮ್ಮ ಮನೆಯ ಅಕ್ಕ ಪಕ್ಕದಲ್ಲಿರುವ ಮೆಡಿಕಲ್ ಶಾಪ್.ಗಂಟಲು ನೋವಿಗೆ ಶುಂಠಿ
ಬೇಕಾಗಿರುವ ಸಾಮಾಗ್ರಿಗಳು :
*ಒಂದು ಇಂಚು ತುರಿದ ಶುಂಠಿ
*ಸ್ವಲ್ಪ ಹಸಿ ಜೇನು ತುಪ್ಪ
*ಎಣ್ಣೆ
*ಗೋಧಿ ಹಿಟ್ಟು
*ಒಂದು ನ್ಯಾಪ್ಕಿನ
*ಒಂದು ಟೇಪ
ಮೊದಲಿಗೆ ಒಂದು ಬಟ್ಟಲು ತೆಗೆದುಕೊಂಡು, ಅದಕ್ಕೆ ತುರಿದ ಶುಂಠಿ, ಗೋಧಿ ಹಿಟ್ಟು, ಜೇನುತುಪ್ಪ ಮತ್ತೆ ಎಣ್ಣೆ ಹಾಕಿ ಚೆನ್ನಾಗಿ ಬೆರೆಸಿ. ಒಂದು ನ್ಯಾಪ್ಕಿನ್ ತೆಗೆದುಕೊಂಡು ಅದರಲ್ಲಿ ನೀವು ಬೆರೆಸಿದ ಮಿಶ್ರಣದ ಸ್ವಲ್ಪ ಭಾಗವನ್ನು ಹಾಕಿ. ನ್ಯಾಪ್ಕಿನ್ ಸುತ್ತಿ ನಿಮ್ಮ ಎದೆಯ ಮೇಲೆ ಇಟ್ಟುಕೊಂಡು ಟೇಪ್ ಹಾಕಿ ಆಂಟಿಸಿ.ಇಡೀ ರಾತ್ರಿ ಹಾಗೆ ಬಿಟ್ಟು, ಕನಿಷ್ಠವೆಂದರೂ 8 – 9 ಗಂಟೆಗಳ ಕಾಲ ಎದೆಯ ಮೇಲಿಂದ ನ್ಯಾಪ್ಕಿನ್ ತೆಗೆಯಬೇಡಿ. ಈ ಮನೆ ಮದ್ದು ಉತ್ತಮ ಪರಿಹಾರವಾಗಿ ಕೆಲಸ ಮಾಡಿ ರಾತ್ರಿಯ ಸಮಯದಲ್ಲಿ ನಿಮ್ಮ ಎದೆಯಲ್ಲಿನ ಕಫ ಕರಗಿಸಿ ಸರಾಗವಾಗಿಸುತ್ತದೆ. ಆದ್ದರಿಂದ ಮಲಗುವ ಮುಂಚೆ ಈ ಮನೆ ಮದ್ದನ್ನು ಪ್ರಯತ್ನಿಸಿ ಇದರ ಲಾಭ ಪಡೆದುಕೊಳ್ಳಿ.